ಸೀತಾಪುರ: ಲಕ್ನೋದಲ್ಲಿ ಹತ್ಯೆಗೀಡಾದ ಹಿಂದೂ ಸಮಾಜ ಪಕ್ಷದ ನಾಯಕ ಕಮಲೇಶ್ ತಿವಾರಿ ಹತ್ಯೆ ಆರೋಪಿಗಳ ಬಂಧನದ ಬೆನ್ನಲ್ಲೇ ಅವರ ತಾಯಿ ಕುಸುಮ್ ತಿವಾರಿ ಬಂಧಿತ ಎಲ್ಲ ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಎಎನ್ಐ ಜೊತೆ ಮಾತನಾಡಿರುವ ಅವರು, "ಆರೋಪಿಗಳ ಬಂಧನದಿಂದ ನಮಗೆ ತುಂಬಾ ಸಂತೋಷವಾಗಿದೆ, ಅವರೆಲ್ಲರನ್ನೂ ಗಲ್ಲಿಗೇರಿಸಬೇಕು. ಸರ್ಕಾರದ ಕ್ರಮದಿಂದ ನನಗೆ ತೃಪ್ತಿ ಇದೆ" ಎಂದು ಹೇಳಿದ್ದಾರೆ.
ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಅಶ್ಫಾಕ್ ಹುಸೇನ್ ಜಕೀರ್ಹುಸೇನ್ ಶೇಖ್ (34) ಮತ್ತು ಮೊಯುದ್ದೀನ್ ಖುರ್ಷಿದ್ ಪಠಾಣ್ (27) ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ ಗುಜರಾತ್-ರಾಜಸ್ಥಾನ್ ಗಡಿಯಲ್ಲಿ ಬಂಧಿಸಿದ್ದು, ಆರೋಪಿಗಳನ್ನು ಇಂದು ಉತ್ತರಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ. ಅದಕ್ಕಾಗಿ ಇಂದು ಲಕ್ನೋ ಪೋಲೀಸರ ನಾಲ್ಕು ಸದಸ್ಯರ ತಂಡ ಇಂದು ಅಹಮದಾಬಾದ್ಗೆ ತೆರಳುತ್ತಿದೆ.
ಅಕ್ಟೋಬರ್ 18ರಂದು ಕಮಲೇಶ್ ತಿವಾರಿ ಅವರನ್ನು ಲಖನೌದ ನಾಕಾ ಪ್ರದೇಶದಲ್ಲಿ ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆಗೈದಿದ್ದರು.