ಹಿಮಾಚಲ ಪ್ರದೇಶ ನೂತನ ರಾಜ್ಯಪಾಲರಾಗಿ ಕಲ್ರಾಜ್ ಮಿಶ್ರಾ ನೇಮಕ, ಗುಜರಾತ್ ರಾಜ್ಯಪಾಲರಾಗಿ ಆಚಾರ್ಯ ದೇವವ್ರತ್ ವರ್ಗಾವಣೆ

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ಬದಲಾವಣೆಗಳನ್ನು ಮಾಡಿದ್ದು, ದೇವವ್ರತ್ ಗುಜರಾತ್ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಮಿಶ್ರಾ ಹಿಮಾಚಲ್ ಪ್ರದೇಶದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Last Updated : Jul 15, 2019, 04:44 PM IST
ಹಿಮಾಚಲ ಪ್ರದೇಶ ನೂತನ ರಾಜ್ಯಪಾಲರಾಗಿ ಕಲ್ರಾಜ್ ಮಿಶ್ರಾ ನೇಮಕ, ಗುಜರಾತ್ ರಾಜ್ಯಪಾಲರಾಗಿ ಆಚಾರ್ಯ ದೇವವ್ರತ್ ವರ್ಗಾವಣೆ title=

ನವದೆಹಲಿ: ಹಿಮಾಚಲ ಪ್ರದೇಶದ ಗವರ್ನರ್ ಆಚಾರ್ಯ ದೇವವ್ರತ್ ಅವರನ್ನು ಸೋಮವಾರ ವರ್ಗಾವಣೆ ಮಾಡಿ ಗುಜರಾತ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಭಾರತೀಯ ಜನತಾ ಪಕ್ಷದ ಮುಖಂಡ ಕಲ್ರಾಜ್ ಮಿಶ್ರಾ ಅವರು ಹಿಮಾಚಲ ಪ್ರದೇಶದ ನೂತನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ಬದಲಾವಣೆಗಳನ್ನು ಮಾಡಿದ್ದು, ದೇವವ್ರತ್ ಗುಜರಾತ್ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಮಿಶ್ರಾ ಹಿಮಾಚಲ್ ಪ್ರದೇಶದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಎರಡೂ ನೇಮಕಾತಿಗಳು ಆಯಾ ಕಚೇರಿಗಳ ಉಸ್ತುವಾರಿ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರಲಿವೆ.

2015 ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಹಿಮಾಚಲ ಪ್ರದೇಶದ ಗವರ್ನರ್ ಆಗಿ ನೇಮಕಗೊಂಡ ದೇವವ್ರತ್ ಅವರು ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆ ಸೇರಿದಂತೆ ಹಲವಾರು ಸಾಮಾಜಿಕ ದುಷ್ಕೃತ್ಯಗಳ ವಿರುದ್ಧ ಕ್ರಮಗಳನ್ನು ಕೈಗೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶೇಷವೆಂದರೆ, ರಾಷ್ಟ್ರಪತಿ ಕೋವಿಂದ್ ಅವರನ್ನು ಬಿಹಾರ ರಾಜ್ಯಪಾಲರನ್ನಾಗಿ ನೇಮಕ ಮಾಡಿದ ಸಂದರ್ಭದಲ್ಲಿಯೇ ದೇವ್ರತ್ ಹಿಮಾಚಲ ರಾಜ್ಯಪಾಲರಾಗಿ ನೇಮಿಸಲಾಗಿತ್ತು.

ಹಿಮಾಚಲಪ್ರದೇಶದಲ್ಲಿ ದೇವವ್ರತ್‌ರಿಂದ ಅಧಿಕಾರ ವಹಿಸಿಕೊಳ್ಳುತ್ತಿರುವ ಮಿಶ್ರಾ ಅವರು ಲೋಕಸಭಾ ಚುನಾವಣೆ2019 ರಲ್ಲಿ ಸ್ಪರ್ಧೆಯಿಂದ ಹೊರಗುಳಿದಿದ್ದರು. ಬಿಜೆಪಿ ಹಿರಿಯ ರಾಜಕಾರಣಿಯಾದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ಪಕ್ಷದ ಬಲವರ್ಧನೆಗೆ ಶರ್ಮಿಸುವುದಾಗಿ ಹೇಳಿದ್ದರು.  ಈ ಹಿಂದೆ ಅವರು ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

Trending News