ಕಳೆದ ಶುಕ್ರವಾರ ಈ ಚಿತ್ರ ರೂ.5.38 ಕೋಟಿ ರೂ. ಸಂಪಾದಿಸಿದ್ದು, ಇದುವರೆಗೆ ಈ ಚಿತ್ರದ ಒಟ್ಟು ಗಳಿಕೆ 202. 83 ಕೋಟಿ ರೂ. ತಲುಪಿದೆ. ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಚಿತ್ರ ನಟ ಅಜಯ್ ದೇವಗನ್ ತಮ್ಮ 100ನೇ ಚಿತ್ರವನ್ನು ಸುಪರ್ ಹಿಟ್ ಮಾಡಿದ್ದಾಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಬಾಕ್ಸ್ ಆಫೀಸ್ ನಲ್ಲಿ ಇದುವರೆಗೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಚಿತ್ರ ಶೀಘ್ರದಲ್ಲಿಯೇ 200 ಕೋಟಿ ರೂ. ಗಡಿ ದಾಟಲಿದೆ ಎನ್ನಲಾಗಿದೆ. ಸತತ ಎರಡು ವಾರಗಳ ಉತ್ತಮ ಪ್ರದರ್ಶನದ ಬಳಿಕ, ಮೂರನೇ ವಾರದಲ್ಲಿ ಮತ್ತು ಅದರಲ್ಲೂ ವಿಶೇಷವಾಗಿ ಗಣರಾಜ್ಯೋತ್ಸವದ ಹಿನ್ನೆಲೆ ಈ ಚಿತ್ರ ಗಳಿಕೆಯ ವಿಚಾರದಲ್ಲಿ ನೂತನ ಹಂತಕ್ಕೆ ತಲುಪಲಿದೆ ಎಂದು ಚಿತ್ರದ ನಿರ್ಮಾಪಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ತಮ್ಮ ಪಕ್ಷದ ಸಹೋದ್ಯೋಗಳು ದೀಪಿಕಾ ಪಡುಕೋಣೆ ಅಭಿನಯದ ಛಪಾಕ್ ನ ಉಚಿತ ಚಲನಚಿತ್ರ ಟಿಕೆಟ್ ನೀಡುವುದನ್ನು ಬೆಂಬಲಿಸಿದ್ದಾರೆ, ಜೆಎನ್ಯು ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟನ್ನು ತೋರಿಸಿದ್ದಕ್ಕಾಗಿ ನಟಿಯನ್ನು ಬೆಂಬಲಿಸುವುದು ಇದರ ಸೂಚಕವಾಗಿದೆ ಎಂದು ಹೇಳಿದ್ದಾರೆ.
ಕ್ರಿಮಿನಲ್ ವೈಟ್ ವಾಶಿಂಗ್ ನಡೆಸುವ 'ಸಂಜು' ಅಥವಾ ಇತಿಹಾಸದ ಸಾಫ್ಟ್ ಪೋರ್ನ್ ಆಗಿರುವ 'ಪದ್ಮಾವತ್' ಚಿತ್ರಗಳಿಗೆ ನೀಡಿದಷ್ಟೇ ಪ್ರೀತಿ 'ತಾನಾಜಿ' ಚಿತ್ರಕ್ಕೂ ನೀಡಲಿದ್ದೇವೆಯೇ ಎಂದು ರಂಗೋಲಿ ಪ್ರಶ್ನಿಸಿದ್ದಾಳೆ.
ಇತ್ತೀಚೆಗಷ್ಟೇ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಅವರ ಪ್ರೆಗ್ನೆನ್ಸಿ ಕುರಿತು ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ ದೀಪಿಕಾ ನೀಡಿರುವ ಉತ್ತರ ಕೇಳಿ ಎಲ್ಲರೂ ನಿಬ್ಬೆರಗಾಗಿದ್ದಾರೆ. ಅಷ್ಟೇ ಅಲ್ಲ ಸದ್ಯ ಅವರು ನೀಡಿರುವ ಉತ್ತರ ಭಾರಿ ಹೆಡ್ ಲೈನ್ ಸೃಸ್ತಿಸುತ್ತಿದೆ.
ಕಾರ್ತಿಕ್ ಆರ್ಯನ್ ಅವರು ಬಾಲಿವುಡ್ ಗುಳಿಕೆನ್ನೆಯ ಬೆಡಗಿ ದೀಪಿಕಾ ಪಡುಕೋಣೆ ಅವರ ಕುರಿತಂತೆ ಬಾಲಿವುಡ್ ನಿರ್ದೇಶಕರಿಗೆ ದೊಡ್ಡ ಚಾಲೆಂಜ್ ನೀಡಿದ್ದಾರೆ... ಇದರ ಹಿಂದಿನ ಮರ್ಮವೇನು ತಿಳಿಯಲು ವರದಿ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.