J&Kಗೆ Taliban ನುಸುಳುವ ಸಾಧ್ಯತೆ, ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ

Army Chief On Afghan Origin Terrorist In J&K - ಅಫ್ಘಾನ್ ಮೂಲದ ವಿದೇಶಿ ಭಯೋತ್ಪಾದಕರು (Afghan Based Terrorists) ಜಮ್ಮು ಮತ್ತು ಕಾಶ್ಮೀರವನ್ನು (Jammu And Kashmir) ಪ್ರವೇಶಿಸಲು ಪ್ರಯತ್ನಿಸುವ ಸಾಧ್ಯತೆಯನ್ನು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ (Army Chief General MM Narvane) ಅಲ್ಲಗಳೆದಿಲ್ಲ. 

Written by - Nitin Tabib | Last Updated : Oct 9, 2021, 06:43 PM IST
  • ಆಫ್ಘಾನ್ ಮೂಲದ ವಿದೇಶಿ ಮೂಲದ ಭಯೋತ್ಪಾದಕರು J&K ನುಸುಳುವ ಸಾಧ್ಯತೆ ಇದೆಯಾ?
  • ಈ ಕುರಿತು ಸೇನಾ ಮುಖ್ಯಸ್ಥರು ಹೇಳಿದ್ದೇನು?
  • ತಿಳಿಯಲು ಈ ಸುದ್ದಿ ಓದಿ
J&Kಗೆ Taliban ನುಸುಳುವ ಸಾಧ್ಯತೆ, ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ title=
Army Chief On Afghan Origin Terrorist In J&K (File Photo - Army Chief)

Army Chief On Afghan Origin Terrorist In J&K - ಅಫ್ಘಾನ್ ಮೂಲದ ವಿದೇಶಿ ಭಯೋತ್ಪಾದಕರು (Afghan Based Terrorists) ಜಮ್ಮು ಮತ್ತು ಕಾಶ್ಮೀರವನ್ನು (Jammu And Kashmir) ಪ್ರವೇಶಿಸಲು ಪ್ರಯತ್ನಿಸುವ ಸಾಧ್ಯತೆಯನ್ನು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ (Army Chief General MM Narvane) ಅಲ್ಲಗಳೆದಿಲ್ಲ. ಎರಡು ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಆಡಳಿತದ (Taliban Rule) ಅವಧಿಯಲ್ಲಿ ನಡೆದ ಇಂತಹ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಅಂತಹ ಯಾವುದೇ ಕೃತ್ಯಕ್ಕೆ ಭಾರತೀಯ ಸೇನೆಯು ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಈ ಕುರಿತು ಮಾಧ್ಯಮವೊಂದರಲ್ಲಿ ಸೇನಾ ಮುಖ್ಯಸ್ಥರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳು ಮತ್ತು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣದ ನಡುವೆ ಯಾವುದೇ ಸಂಬಂಧವಿದೆಯೇ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ  ಜನರಲ್ ನರವನೆ,  ಯಾವುದೇ ಸಂಪರ್ಕವಿದೆಯೋ ಇಲ್ಲವೋ ಎಂದು ಹೇಳಲಾಗುವುದಿಲ್ಲ. ಆದರೆ, "ಖಂಡಿತವಾಗಿಯೂ ಚಟುವಟಿಕೆಗಳಲ್ಲಿ ಹೆಚ್ಚಳವಾಗಿದೆ (J&K), ಆದರೆ ಇದು ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಯಾವುದೇ ನೇರ ಸಂಬಂಧವನ್ನು ಹೊಂದಿದೆಯೋ ಇಲ್ಲವೋ, ನಾವು ಹೇಳಲು ಸಾಧ್ಯವಿಲ್ಲ" ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ-ವಿಶ್ವ ಶ್ರೀಮಂತರ ಪಟ್ಟಿಗೆ ಮುಖೇಶ್ ಅಂಬಾನಿ : ಒಟ್ಟು ಆಸ್ತಿಯ ಮೌಲ್ಯ 10 ಸಾವಿರ ಕೋಟಿ! 

"ಆದರೆ ನಾವು ಈ ಕುರಿತು ನಾವು ಹೇಳುವುದನ್ನು ಇತಿಹಾಸದಿಂದ ತಿಳಿಯಬಹುದು. ಅದೇನೆಂದರೆ, ತಾಲಿಬಾನ್ ನ ಈ ಮೊದಲಿನ ಆಡಳಿತದ ಸಮಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಆಫ್ಘಾನ್ ಮೂಲದ ವಿದೇಶಿ ಉಗ್ರರಿದ್ದರು. ಹೀಗಾಗಿ ನಾವು ಅದನ್ನು ನಂಬಲೇ ಬೇಕು ಎನ್ನುವುದಕ್ಕೆ ನಮ್ಮ ಬಳಿ ಕಾರಣವಿದೆ. ಒಂದೊಮ್ಮೆ ಅಫ್ಘಾನಿಸ್ಥಾನದಲ್ಲಿ ಸ್ಥಿತಿಗತಿಗಳು ಸಾಮಾನ್ಯವಾದ ಬಳಿಕ ಅದೇ ರೀತಿಯ ಸಂಗತಿಗಳ ಪುನರಾವರ್ತಿಯಾಗಬಹುದು. ಆಗ ಮಾತ್ರ ಅಫ್ಘಾನಿಸ್ಥಾನದಿಂದ ಉಗ್ರರ ಆಗಮನವನ್ನು ನೋಡಬಹುದು" ಎಂದು ನರ್ವಣೆ ಹೇಳಿದ್ದಾರೆ.

ಇದನ್ನೂ ಓದಿ-Maharashtra: ಚಲಿಸುತ್ತಿರುವ ರೈಲಿನಲ್ಲಿಯೇ ಮಹಿಳೆಯ ಮೇಲೆ ಗ್ಯಾಂಗ್ ರೇಪ್, ನಾಲ್ವರು ಅರೆಸ್ಟ್

"ಆದರೆ, ಅಂತಹ ಯಾವುದೇ ಪ್ರಯತ್ನಗಳನ್ನು ಎದುರಿಸಲು ಭಾರತೀಯ ಸೇನೆಯು ಸಂಪೂರ್ಣವಾಗಿ ಸನ್ನದ್ಧವಾಗಿದೆ . ಇಂತಹ ಯಾವುದೇ ಪರಿಸ್ಥಿತಿಗೆ ನಾವು ಸಿದ್ಧರಿದ್ದೇವೆ. ಗಡಿಯಲ್ಲಿ ನಮ್ಮ ಒಳನುಸುಳುವಿಕೆ ವಿರೋಧಿ ವ್ಯವಸ್ಥೆ ತುಂಬಾ ಬಲವಾಗಿದೆ. ಅಂತಹ ಯಾವುದೇ ಕ್ರಮವನ್ನು ಎದುರಿಸಲು ನಾವು ಒಳನಾಡಿನಲ್ಲಿ ಅತ್ಯಂತ ಭಯೋತ್ಪಾದನಾ ನಿಗ್ರಹ ಜಾಲವನ್ನು ಹೊಂದಿದ್ದೇವೆ. 2000 ರ ದಶಕದ ಆರಂಭದಲ್ಲಿ ನಾವು ಅವರೊಂದಿಗೆ ವ್ಯವಹರಿಸಿದ ರೀತಿ, ಅವರು ನಮ್ಮ ಹತ್ತಿರ ಎಲ್ಲಿಯಾದರೂ ಬಂದರೆ ನಾವು ಅವರೊಂದಿಗೆ ವ್ಯವಹರಿಸುತ್ತೇವೆ ಎಂಬುದರ ಸಾಕ್ಷಿಯಾಗಿದೆ" ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ-Karnataka Rains: ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ, ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News