Maharashtra: ಚಲಿಸುತ್ತಿರುವ ರೈಲಿನಲ್ಲಿಯೇ ಮಹಿಳೆಯ ಮೇಲೆ ಗ್ಯಾಂಗ್ ರೇಪ್, ನಾಲ್ವರು ಅರೆಸ್ಟ್

Lucknow-Mumbai Pushpak Express - ಶುಕ್ರವಾರ ಲಖನೌನಿಂದ ಮುಂಬೈಗೆ ಸಂಚರಿಸುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹಲವು ಹಲವು ದರೋಡೆಕೋರರು ನುಗ್ಗಿದ್ದಾರೆ. ಈ ದರೋಡೆಕೋರರು ರೈಲಿನಲ್ಲಿದ್ದ ಯಾತ್ರಿಗಳನ್ನು ದೋಚಿ, ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಯಾಣ್ GRP (Kalyan GRP) ನಾಲ್ವರು ಆರೋಪಿಯನ್ನು ಬಂಧಿಸಿದ್ದಾರೆ.

Written by - Nitin Tabib | Last Updated : Oct 9, 2021, 01:51 PM IST
  • ಮಹಾರಾಷ್ಟ್ರದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಗ್ಯಾಂಗ್ ರೇಪ್,
  • ಲೂಟಿ ಮಾಡಿದ ಬಳಿಕ ಪರಾರಿಯಾದ ನಾಲ್ವರು ಸಶಸ್ತ್ರ ದರೋಡೆಕೋರರು.
  • ಇತರ ನಾಲ್ವರನ್ನು ಬಂಧಿಸಿದ GRP ಪೊಲೀಸರು.
Maharashtra: ಚಲಿಸುತ್ತಿರುವ ರೈಲಿನಲ್ಲಿಯೇ ಮಹಿಳೆಯ ಮೇಲೆ ಗ್ಯಾಂಗ್ ರೇಪ್, ನಾಲ್ವರು ಅರೆಸ್ಟ್  title=
Lucknow-Mumbai Pushpak Express (File Photo)

Maharashtra: Lucknow-Mumbai Pushpak Express - ಲಖನೌ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಹಿಳೆಯೊಂದಿಗೆ ಸಾಮೂಹಿಕ ಅತ್ಯಾಚಾರದ ಘಟನೆ ಬೆಳಕಿಗೆ ಬಂದಿದೆ. ಅದರ ನಂತರ ನಾಲ್ಕು ಜನರನ್ನು ಬಂಧಿಸಲಾಗಿದೆ ಮತ್ತು ಇತರ ನಾಲ್ವರಿಗಾಗಿ ಶೋಧ ನಡೆಸಲಾಗುತ್ತಿದೆ. ಇದೇ ವೇಳೆ, ಈ ಸಂದರ್ಭದಲ್ಲಿ, GRP ಆಯುಕ್ತ ಕೈಸರ್ ಖಾಲಿದ್ (Kaisar Khalid) ಅವರು ಸುಮಾರು 8 ಜನರು ರೈಲನ್ನು ಹತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಜನರು ಮೊದಲು ಲೂಟಿ ಮಾಡಿದ್ದಾರೆ ಮತ್ತು ನಂತರ ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ  ಅತ್ಯಾಚಾರ ಎಸಗಿದ್ದಾರೆ. ಈ ಪ್ರಕರಣದಲ್ಲಿ 4 ಆರೋಪಿಗಳನ್ನು ಬಂಧಿಸಲಾಗಿದ್ದು, ಇತರ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಹೇಳಿದ್ದಾರೆ. 

ಶಸ್ತ್ರಸಜ್ಜಿತರಾಗಿದ್ದರು ದರೋಡೆಕೋರರು
ಶುಕ್ರವಾರ, ಹಲವಾರು ಸಶಸ್ತ್ರ ದರೋಡೆಕೋರರು ಎಕ್ಸ್ಪ್ರೆಸ್ ಹತ್ತಿದ್ದರು. ಈ ದುಷ್ಕರ್ಮಿಗಳು ಪ್ರಯಾಣಿಕರನ್ನು ಲೂಟಿ ಮಾಡಿ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯಿಂದಾಗಿ ಪ್ರಯಾಣಿಕರು ತುಂಬಾ ಭಯಭೀತರಾಗಿದ್ದಾರೆ. ಇದೇ ವೇಳೆ  ಪ್ರಯಾಣಿಕರನ್ನು ದರೋಡೆ ಮಾಡಿದ ನಂತರ, ಆರೋಪಿಗಳು  20 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ (Gang Rape In Train) ಎಸಗಿದ್ದಾರೆ. ಕೃತ್ಯ ಎಸಗಿದ ನಂತರ ಅಪರಾಧಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಆರ್‌ಪಿ ಕಲ್ಯಾಣ್ (Kalyan GRP), ದರೋಡೆ ಮತ್ತು ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ-Drugs case:ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

ಇದನ್ನೂ ಓದಿ-Karnataka Rains: ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ, ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

GRP ಕಲ್ಯಾಣ್ ನೀಡಿದ ಹೇಳಿಕೆ ಏನು?
ಈ ಕುರಿತು ಹೇಳಿಕೆ ನೀಡಿರುವ GRP,  "ಜಿಆರ್‌ಪಿ ಮುಂಬೈ ಸಿಆರ್ ಸಂಖ್ಯೆ 771/21 ಯು/ಎಸ್ 395, 397, 376 (ಡಿ), 354, 354 (ಐಪಿಸಿ ಆರ್/ಡಬ್ಲ್ಯೂ 137 ಮತ್ತು 153 ಭಾರತೀಯ ರೈಲ್ವೇ ಕಾಯ್ದೆಯ ಅಡಿಯಲ್ಲಿ ಕಲ್ಯಾಣ ಆರ್ಪಿಎಫ್ ಪ್ರಕರಣ ದಾಖಲಿಸಿದೆ. ಆರೋಪಿಗಳು ಔರಂಗಾಬಾದ್ ಜಿಲ್ಲೆಯ ಇಗತ್ಪುರಿ ಸ್ಟೇಷನ್ ನಲ್ಲಿ ರೈಲಿನ ಸ್ಲೀಪರ್ ಬೋಗಿ ಡಿ-2ಗೆ ನುಗ್ಗಿದ್ದಾರೆ. ಹಾಗೂ ರಾತ್ರಿ ಘಾಟ್ ಪ್ರದೇಶದಲ್ಲಿ ಅಪರಾಧ ಎಸಗಲು ಆರಂಭಿಸಿದ್ದಾರೆ. ರೈಲು ನಮ್ಮ ಅಧಿಕಾರ ಕ್ಷೇತ್ರದ ಕಸಾರಾ ಪ್ರವೇಶಿಸುತ್ತಿದ್ದಂತೆ ಯಾತ್ರಿಗಳು ಸಹಾಯಕ್ಕಾಗಿ ಕಿರುಚಾಡಲು ಆರಂಭಿಸಿದ್ದಾರೆ. ಬಳಿಕ ಅಧಿಕಾರಿಗಳು ಹಾಗೂ ಮುಂಬೈ ಸ್ಟಾಫ್ ಗ್ರೂಪ್ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. DCP ಹಾಗೂ ಕ್ರೈಂ (Crime) ಬ್ರಾಂಚ್ ತಂಡದ ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಟ್ಟು ಲೂಟಿ ಮಾಡಿದ ಸಂಪತ್ತನ್ನು ರೂ.96,390 ಇರಬಹುದು ಎಂದು ಅಂದಾಜಿಸಲಾಗಿದೆ. ಅದರಲ್ಲಿ ನಾವು ಒಟ್ಟು 34200 ಬೆಲೆಯ ಸಂಪತ್ತನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಪ್ರಕರಣದಲ್ಲಿ ಹೆಚ್ಚುವರಿ ತನಿಖೆ ಕೈಗೊಂಡಿದ್ದೇವೆ" ಎಂದು ಹೇಳಿದೆ.

ಇದನ್ನೂ ಓದಿ-ರಿಟೇಲ್ ಗ್ರಾಹಕರಿಗೆ RBI ಉಡುಗೊರೆ, ಇಂಟರ್ನೆಟ್ ರಹಿತ ಹಣ ಪಾವತಿ ವ್ಯವಸ್ಥೆ ದೇಶಾದ್ಯಂತ ಜಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News