ರಾಜ್ಯಸಭಾ ಚುನಾವಣೆಗೂ ಮುನ್ನ ಗುಜರಾತ್‌ನ ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ

ಗುಜರಾತ್‌ (Gujarat)ನ ಇಬ್ಬರು ಕಾಂಗ್ರೆಸ್ ಶಾಸಕರು ಜೂನ್ 19 ರ ರಾಜ್ಯಸಭಾ ಚುನಾವಣೆ(Rajya Sabha poll)ಗೆ ಮುನ್ನ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

Last Updated : Jun 4, 2020, 04:05 PM IST
ರಾಜ್ಯಸಭಾ ಚುನಾವಣೆಗೂ ಮುನ್ನ ಗುಜರಾತ್‌ನ ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ

ನವದೆಹಲಿ: ಗುಜರಾತ್‌ (Gujarat)ನ ಇಬ್ಬರು ಕಾಂಗ್ರೆಸ್ ಶಾಸಕರು ಜೂನ್ 19 ರ ರಾಜ್ಯಸಭಾ ಚುನಾವಣೆ(Rajya Sabha poll)ಗೆ ಮುನ್ನ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಶಾಸಕರಾದ ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ ಅವರು ಗುಜರಾತ್ ವಿಧಾನಸಭೆ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರನ್ನು ಬುಧವಾರ ಭೇಟಿಯಾಗಿ ರಾಜೀನಾಮೆ ಹಸ್ತಾಂತರಿಸಿದರು. ಅವರ ರಾಜೀನಾಮೆಯನ್ನು ಒಪ್ಪಿಕೊಂಡಿದ್ದೇನೆ ಎಂದು ತ್ರಿವೇದಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಶಾಸಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು. ಪಟೇಲ್ ವಡೋದರಾದ ಕರ್ಜನ್ ಸ್ಥಾನವನ್ನು ಪ್ರತಿನಿಧಿಸಿದರೆ, ಚೌಧರಿ ವಲ್ಸಾದ್‌ನ ಕಪ್ರದ ಸ್ಥಾನದಿಂದ ಗೆದ್ದಿದ್ದರು.

ಇದಕ್ಕೂ ಮುನ್ನ ಬುಧವಾರ ಕಾಂಗ್ರೆಸ್ ಮೂವರು ಶಾಸಕರು ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ಭೇಟಿ ಮಾಡಿದ್ದು, ಪಕ್ಷಾಂತರದ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಪಿಟಿಐ ಈ ಶಾಸಕರನ್ನು ಕಿರಿತ್ ಪಟೇಲ್, ಲಲಿತ್ ವಾಸೋಯಾ ಮತ್ತು ಲಲಿತ್ ಕಗಥರಾ ಎಂದು ಗುರುತಿಸಿದೆ. ಆದಾಗ್ಯೂ, ಈ ಶಾಸಕರು ವದಂತಿಗಳನ್ನು ನಿರಾಕರಿಸಿದರು ಮತ್ತು ಅವರು ಕರೋನವೈರಸ್ ಮತ್ತು ಲಾಕ್ಡೌನ್ಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಹೋಗಿರುವುದಾಗಿ ಹೇಳಿದ್ದರು.

ಗುಜರಾತ್‌ನಲ್ಲಿ ನಾಲ್ಕು ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆಯನ್ನು ಜೂನ್ 19 ರಂದು ನಿಗದಿಪಡಿಸಲಾಗಿದೆ. ಇದು ಮಾರ್ಚ್ 26 ರಂದು ನಡೆಯಬೇಕಿತ್ತು. ಆದಾಗ್ಯೂ, ಕೊರೋನವೈರಸ್ ಸಾಂಕ್ರಾಮಿಕ ಮತ್ತು ನಂತರದ ದಿನಗಳಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿದ ಹಿನ್ನೆಲೆಯಲ್ಲಿ ಇದನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಜೆಪಿ ಮೂವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಎರಡನೇ ಸ್ಥಾನವನ್ನು ಗೆಲ್ಲುವುದು ಕಷ್ಟಕರವಾಗಿದೆ. ಮಾರ್ಚ್ನಲ್ಲಿ, ಐದು ಕಾಂಗ್ರೆಸ್ ಶಾಸಕರು ಚುನಾವಣೆ ಘೋಷಣೆಯಾದ ಕೆಲವೇ ದಿನಗಳಲ್ಲಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಇದು ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುವ ಕಾಂಗ್ರೆಸ್ ಅವಕಾಶಗಳನ್ನು ಮತ್ತಷ್ಟು ಕಡಿಮೆಗೊಳಿಸಿತು.182 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿಯಲ್ಲಿ 103 ಶಾಸಕರು ಮತ್ತು ಪ್ರತಿಪಕ್ಷ ಕಾಂಗ್ರೆಸ್ 68 ಮಂದಿ ಇದ್ದಾರೆ.

More Stories

Trending News