ಲೋಕಸಭಾ ಚುನಾವಣೆ: ತಮಿಳುನಾಡಿನಲ್ಲಿ ಪಿಎಂಕೆ ಜೊತೆ ಎಐಡಿಎಂಕೆ ಮೈತ್ರಿ

ಬಿಜೆಪಿ ಮತ್ತು ಎಐಡಿಎಂಕೆ ಮೈತ್ರಿ ಘೋಷಿಸಿಕೊಳ್ಳುವ ಮುನ್ನವೇ ಈಗ ಆಡಳಿತ ಪಕ್ಷ ಎಐಡಿಎಂಕೆ ಪಟ್ಟಲ್ಲಿ ಮಕ್ಕಳ್ ಕಟ್ಚಿ(ಪಿಎಂಕೆ) ಜೊತೆ ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿದೆ. 

Last Updated : Feb 19, 2019, 04:25 PM IST
ಲೋಕಸಭಾ ಚುನಾವಣೆ: ತಮಿಳುನಾಡಿನಲ್ಲಿ ಪಿಎಂಕೆ ಜೊತೆ ಎಐಡಿಎಂಕೆ ಮೈತ್ರಿ   title=

ನವದೆಹಲಿ: ಬಿಜೆಪಿ ಮತ್ತು ಎಐಡಿಎಂಕೆ ಮೈತ್ರಿ ಘೋಷಿಸಿಕೊಳ್ಳುವ ಮುನ್ನವೇ ಈಗ ಆಡಳಿತ ಪಕ್ಷ ಎಐಡಿಎಂಕೆ ಪಟ್ಟಲ್ಲಿ ಮಕ್ಕಳ್ ಕಟ್ಚಿ(ಪಿಎಂಕೆ) ಜೊತೆ ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿದೆ. 

ತಮಿಳುನಾಡು ಹಾಗೂ ಪಾಂಡಿಚೇರಿ ಸೇರಿ ಒಟ್ಟು 40 ಲೋಕಸಭಾ ಸ್ಥಾನಗಳಿದ್ದು ಇದರಲ್ಲಿ ಈಗ ಎಐಡಿಎಂಕೆ 7 ಸ್ಥಾನಗಳ ಆಫರ್ ನೀಡಿದೆ.ಅಲ್ಲದೆ ಒಂದು ರಾಜ್ಯಸಭಾ ಸ್ಥಾನವನ್ನು ಸಹ ನೀಡಿದೆ. ಇನ್ನೊಂದೆಡೆಗೆ ಪಿಎಂಕೆ ಈ ವರ್ಷದ ನಡೆಯಲಿರುವ ತಮಿಳುನಾಡು ಉಪಚುನಾವಣೆಯಲ್ಲಿ 21 ಕ್ಷೇತ್ರಗಳಲ್ಲಿ ಎಐಡಿಎಂಕೆಗೆ ಬೆಂಬಲ ನೀಡುವದಾಗಿ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಎಐಡಿಎಂಕೆ ನಾಯಕ ಪನ್ನೀರ್ ಸೆಲ್ವಂ " ಪಿಎಂಕೆ ಇಂದು ನಮ್ಮ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏಳು ಸೀಟುಗಳನ್ನು ನಾವು ಪಿಎಂಕೆ ಗೆ ಬಿಟ್ಟುಕೊಟ್ಟಿದ್ದೇವೆ.ನಮಗೆ ಉಪ ಚುನಾವಣೆಯಲ್ಲಿ 21 ಕ್ಷೇತ್ರಗಳಲ್ಲಿ ಪಿಎಂಕೆ ಬೆಂಬಲಿಸಲಿದೆ ಎಂದು ತಿಳಿಸಿದರು. 

ಪಿಎಂಕೆಯ ರಾಮ್ ದಾಸ್ ಮಾತನಾಡಿ "ಇದು ಜನರ ಕಲ್ಯಾಣಕ್ಕಾಗಿ ಮಾಡಿಕೊಂಡಿರುವ ಮೈತ್ರಿಕೂಟ" ಎಂದು ಬಣ್ಣಿಸಿದರು. ಅಲ್ಲದೆ ತಮಿಳುನಾಡಿನ ಏಳಿಗೆಗಾಗಿ 10 ಅಂಶಗಳ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದು  ಹೇಳಿದರು.

 

Trending News