ನವದೆಹಲಿ: ದುಬೈನಿಂದ ವಿಮಾನದಲ್ಲಿದ್ದ 191 ಜನರೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಶುಕ್ರವಾರ ಕೇರಳದ ಕೋಚಿಕೋಡ್‌ನಲ್ಲಿ ಇಳಿಯುವಾಗ ರನ್ ವೇ ಯಿಂದ ತಪ್ಪಿಸಿಕೊಂಡಿದ್ದರಿಂದಾಗಿ ಭಾರಿ ಅನಾಹುತ ಸಂಭವಿಸಿದೆ.
ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆಂದು ಎಂದು ಬಿಜೆಪಿ ಸಂಸದ ಕೆಜೆ ಅಲ್ಫೋನ್ಸ್ ಹೇಳಿದ್ದಾರೆ. ವಿಮಾನಕ್ಕೆ ಬೆಂಕಿ ತಗುಲಿರಲಿಲ್ಲ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Deeply distressed to hear about the Air India Express tragedy at Kozhikode. Prayers are with the bereaved families and those injured. We are ascertaining further details: External Affairs Minister Subrahmanyam Jaishankar pic.twitter.com/kKjQnPHPcu
— ANI (@ANI) August 7, 2020
ಅಪಘಾತದಲ್ಲಿನ ಆರಂಭಿಕ ಚಿತ್ರಗಳು ವಿಮಾನವನ್ನು ಎರಡು ತುಂಡುಗಳಾಗಿ ಒಡೆದಿದ್ದು, ಅವಶೇಷಗಳು ರನ್ವೇ ಮತ್ತು ಅದರಾಚೆ ಹರಡಿವೆ. ಸಂಜೆ 7: 40 ರ ಸುಮಾರಿಗೆ ಪ್ರದೇಶದಲ್ಲಿ ಭಾರಿ ಮಳೆಯ ಮಧ್ಯೆ ಈ ಘಟನೆ ನಡೆದಿದೆ. ವಿಮಾನದಲ್ಲಿದ್ದ ಹಲವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಗಳು ತಿಳಿಸಿವೆ.
No fire reported at the time of landing. There are 174 passengers, 10 infants, 2 pilots & 5 cabin crew onboard the aircraft. As per initial reports, rescue operations are on & passengers are being taken to hospital: Rajeev Jain, Additional DG Media, Civil Aviation Ministry https://t.co/tsiSSrpNTx
— ANI (@ANI) August 7, 2020
ವರದಿಗಳ ಪ್ರಕಾರ, ಪೈಲಟ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ದುಬೈ-ಕೋಜಿಕೋಡ್ ಏರ್ ಇಂಡಿಯಾ ಫ್ಲೈಟ್ (ಐಎಕ್ಸ್ -1344) ವಿಮಾನದಲ್ಲಿ 10 ಶಿಶುಗಳು ಮತ್ತು ಆರು ಸಿಬ್ಬಂದಿ ಸೇರಿದಂತೆ ಒಟ್ಟು 184 ಪ್ರಯಾಣಿಕರು ಇದ್ದರು ಎನ್ನಲಾಗಿದೆ, ಇಂದು ಕರಿಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇ ತಪ್ಪಿಸಿಕೊಂಡಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ತಿಳಿಸಿದೆ.
ಸಹಾಯವಾಣಿ -0543090572 ಮತ್ತು 0543090573 ನ್ನು ಸಂಪರ್ಕಿಸಲು ಅಧಿಕಾರಿಗಳು ಸೂಚಿಸಿದ್ದಾರೆ.