ಲೋಕಸಭಾ ಚುನಾವಣೆ ಫಲಿತಾಂಶ 2019: ರಾಂಪುರದಲ್ಲಿ ಜಯಪ್ರದಾ ಜಾದೂಗಿಲ್ಲ ಬೆಲೆ; ಅಜಂ ಖಾನ್ ಮುನ್ನಡೆ

ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿ ಅಭ್ಯರ್ಥಿ ಅಜಂ ಖಾನ್ 80 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದು, ಗೆಲುವು ಸಾಧಿಸುವ ನಿರೀಕ್ಷೆಯಿದೆ.

Last Updated : May 23, 2019, 04:02 PM IST
ಲೋಕಸಭಾ ಚುನಾವಣೆ ಫಲಿತಾಂಶ 2019: ರಾಂಪುರದಲ್ಲಿ ಜಯಪ್ರದಾ ಜಾದೂಗಿಲ್ಲ ಬೆಲೆ; ಅಜಂ ಖಾನ್ ಮುನ್ನಡೆ title=

ನವದೆಹಲಿ: ಲೋಕಸಭಾ ಚುನಾವಣೆ 2019ರ ಎಲ್ಲಾ ಹಂತಗಳೂ ಪುರಂಗೊಮ್ದ ಬಳಿಕೆ ಇಂದು ಮತಎಣಿಕೆ ನಡೆಯುತ್ತಿದ್ದು, ಉತ್ತರಪ್ರದೇಶದ ರಾಂಪುರ ಬಿಜೆಪಿ ಅಭ್ಯರ್ಥಿ ಜಯಪ್ರದಾ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿ ಅಭ್ಯರ್ಥಿ ಅಜಂ ಖಾನ್ 80 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದು, ಗೆಲುವು ಸಾಧಿಸುವ ನಿರೀಕ್ಷೆಯಿದೆ.

ನಿನ್ನೆಯಷ್ಟೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅಜಂ ಖಾನ್, ತಾವು 3 ಲಕ್ಷ ಮತಗಳ ಅಂತರದಿಂದ ಗೆಲ್ಲದಿದ್ದರೇ ಲೋಕಸಭೆ ಚುನಾವಣೆ ನ್ಯಾಯಯುತವಾಗಿ ನಡೆದಿಲ್ಲ ಎಂದರ್ಥ ಎಂದು ಹೇಳಿದ್ದರು. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ ಬಹುಮತ ಗಳಿಸುತ್ತದೆ ಎಂಬ ವರದಿ ನಂತರ ದೇಶಾದ್ಯಂತ ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎದ್ದಿರುವ ಬೆನ್ನಲ್ಲೇ ಅಜಂ ಖಾನ್ ಈ ರೀತಿ ಪ್ರತಿಕ್ರಿಯಿಸಿದ್ದರು.

Trending News