ಅಯೋಧ್ಯೆಯಲ್ಲಿ ಆಗಸ್ಟ್ 4, 5ರಂದು ತೆರೆಯಲಿವೆ ಎಲ್ಲಾ ದೇವಾಲಯಗಳು

ಆಗಸ್ಟ್ 5 ರಂದು ದೇವಾಲಯದ ಭೂಮಿ ಪೂಜೆ ಮಾಡಲು ಟ್ರಸ್ಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದೆ. 

Last Updated : Jul 26, 2020, 10:46 AM IST
ಅಯೋಧ್ಯೆಯಲ್ಲಿ ಆಗಸ್ಟ್ 4, 5ರಂದು ತೆರೆಯಲಿವೆ ಎಲ್ಲಾ ದೇವಾಲಯಗಳು  title=

ಅಯೋಧ್ಯೆ: ಭಗವಾನ್ ರಾಮನ ಭವ್ಯ ದೇವಾಲಯದ ನಿರ್ಮಾಣದ ಆರಂಭವನ್ನು ಆಚರಿಸಲು ಆಗಸ್ಟ್ 4 ಮತ್ತು 5 ರಂದು ದೇವಾಲಯ ಸಂಕೀರ್ಣಗಳನ್ನು ಸ್ವಚ್ಛಗೊಳಿಸಲು ಮತ್ತು ದೀಪವನ್ನು ಬೆಳಗಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅಯೋಧ್ಯೆಯ ಎಲ್ಲಾ ದೇವಾಲಯಗಳನ್ನು ಕೋರಿದ್ದಾರೆ. 
 
ಹಿಂದೂಗಳ ಬಹುವರ್ಷಗಳ ಕನಸಾದ ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣಕ್ಕಾಗಿ ಆಗಸ್ಟ್ 5 ಶಿಲಾನ್ಯಾಸ ನೆರವೇರಲಿದೆ. ಆಗಸ್ಟ್ 5 ರಂದು ದೇವಾಲಯದ ಭೂಮಿ ಪೂಜೆ ಮಾಡಲು ಟ್ರಸ್ಟ್ ಮೋದಿಯವರನ್ನು ಆಹ್ವಾನಿಸಿದೆ. ಗ್ರಹಗಳ ನಕ್ಷತ್ರಪುಂಜಗಳ ಲೆಕ್ಕಾಚಾರದ ಆಧಾರದ ಮೇಲೆ ಈ ದಿನ ಬಹಳ ಶುಭವಾಗಿವೆ.  ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರು ಭಾಗಿಯಾಗಲಿದ್ದಾರೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ರಾಮ ದೇವಾಲಯದ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ ನೀಡಿದ್ದರು. 

ಶ್ರೀ ರಾಮ ಜನ್ಮಭೂಮಿ ದೇಗುಲಕ್ಕೆ ಸಂಬಂಧಿಸಿದ ವಿಶ್ವ ಹಿಂದೂ ಪರಿಷತ್‌ನ ನಾಯಕ ತ್ರಿಲೋಕಿನಾಥ್ ಪಾಂಡೆ, 'ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಯೋಧ್ಯೆಯ (Ayodhya) ಎಲ್ಲಾ ದೇವಾಲಯಗಳಿಗೆ ಆಗಸ್ಟ್ 4 ಮತ್ತು 5 ರಂದು ಈ ಶುಭ ದಿನವನ್ನು ಆಚರಿಸಲು ಕೇಳಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಕೇಂದ್ರ ಕಚೇರಿಯಲ್ಲಿ ಶನಿವಾರ ರಾಮ ಮಂದಿರ ಟ್ರಸ್ಟ್ ಸದಸ್ಯರು ಮತ್ತು ಸಂತರೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಈ ವಿಷಯ ತಿಳಿಸಿದರು. 'ಸಭೆಯಲ್ಲಿ ಆದಿತ್ಯನಾಥ್ ಅವರು 500 ವರ್ಷಗಳ ಹೋರಾಟದ ಫಲವಾಗಿ ಈ ಶುಭ ಘಳಿಗೆ ಬಂದಿದೆ ಎಂದು ಹೇಳಿದರು. ರಾಮ ಮಂದಿರ ನಿರ್ಮಾಣ ಇಡೀ ದೇಶ ಸಂತೋಷವಾಗಿದೆ ಮತ್ತು ನಾವು ಕೂಡ ಈ ಕ್ಷಣವನ್ನು ಆಚರಿಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತ ನೀಡಬೇಕು ಎಂದು ಸಿಎಂ ಸೂಚಿಸಿರುವುದಾಗಿ ಪಾಂಡೆ ಹೇಳಿದರು.

Trending News