ನವದೆಹಲಿ: ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳ ನಡುವಿನ ಮಾತಿನ ಜಟಾಪಟಿಯೂ ಶನಿವಾರ ಮಧ್ಯಾಹ್ನವೂ ಮುಂದುವರೆಯಿತು, ರೈತರ ಪ್ರತಿಭಟನೆ ವಿಚಾರವಾಗಿ ಪರಸ್ಪರ ಹರ್ಯಾಣ ಮತ್ತು ಪಂಜಾಬ್ ಸಿಎಂ ಆರೋಪ ಪ್ರತ್ಯಾರೋಪಗಳನ್ನು ಮಾಡಿದರು.
ಶಾಂತಿಯುತ ಪ್ರತಿಭಟನೆಯಾಗಿ ಪ್ರಾರಂಭವಾದದ್ದನ್ನು ಹಿಮ್ಮೆಟ್ಟಿಸುವ ಕ್ರೂರ ಪ್ರಯತ್ನಗಳಿಗಾಗಿ ಅವರ ಸರ್ಕಾರ ಮತ್ತು ಪೊಲೀಸರು ಟೀಕೆಗೆ ಗುರಿಯಾದ ಮನೋಹರ್ ಲಾಲ್ ಖಟ್ಟರ್, ಯಾವುದೇ ಹರಿಯಾಣ ರೈತನು ದಿಲ್ಲಿ ಚಲೋ ಚಳವಳಿಯಲ್ಲಿ ಭಾಗಿಯಾಗಿಲ್ಲ ಅಥವಾ ರಾಜ್ಯ ಪೊಲೀಸರು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಂಯಮವನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.
Centre has now allowed farmers to enter Delhi, yet the @mlkhattar govt. is resorting to brutal force to stop them from marching peacefully to the national capital? What's the need for such harsh measures? This barbarism needs to stop right now @mlkhattar ji.
— Capt.Amarinder Singh (@capt_amarinder) November 27, 2020
'ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹರಿಯಾಣ ರೈತರು ದೂರ ಉಳಿದಿದ್ದಾರೆ. ಸಂಯಮವನ್ನು ತೋರಿಸಿದ್ದಕ್ಕಾಗಿ ನಾನು ಹರಿಯಾಣ ರೈತರು ಮತ್ತು ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಪ್ರತಿಭಟನೆಗೆ ಪಂಜಾಬ್ ಮುಖ್ಯಮಂತ್ರಿ ಹೊಣೆಗಾರರಾಗಿದ್ದಾರೆ ಮತ್ತು ಅವರೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಖಟ್ಟರ್ ದೂರಿದರು.
ಪಂಜಾಬ್ ಸಿಎಂರಿಂದ ಅಕಾಲಿದಳದ ಮುಖ್ಯಸ್ಥರಿಗೆ ಹಿಟ್ಲರನ ‘ಮೇನ್ ಕ್ಯಾಂಪ್' ಗಿಫ್ಟ್ ...!
Impressed by remarkable restraint shown by farmers in face of @mlkhattar govt's and Haryana police's brutality. Their exemplary behaviour shows that farmers are not interested in confrontation, they only want to be heard, which is their constitutional right.
— Capt.Amarinder Singh (@capt_amarinder) November 27, 2020
ಹಲವಾರು ರಾಜ್ಯಗಳ ಸಾವಿರಾರು ರೈತರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಮೆರವಣಿಗೆ ಆರಂಭಿಸಿದರು.ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ದೊಡ್ಡ ಪ್ರಮಾಣದ ಟ್ರಾಕ್ಟರುಗಳು ಮತ್ತು ಟ್ರೇಲರ್‌ಗಳಲ್ಲಿ ಆಹಾರ, ಇಂಧನ ಮತ್ತು ಅಗತ್ಯ ಸಾಮಗ್ರಿಗಳಿಂದ ತುಂಬಿಕೊಂಡು ಪೊಲೀಸರ ದಿಗ್ಬಂಧನಗಳು ಮತ್ತು ಅಡೆತಡೆಗಳನ್ನು ದಾಟಿ ದೆಹಲಿಗೆ ಪ್ರವೇಶಿಸಿದ್ದರು.
ಕೇಂದ್ರವು ಮೂರು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸುವವರೆಗೂ ದೆಹಲಿಯನ್ನು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.