ಶಬರಿಮಲೆ ವಿವಾದ: ಅಮಿತ್ ಶಾ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾದದ್ದು- ಪಿನರಾಯಿ ವಿಜಯನ್

ಶಬರಿಮಲೆ ಭಕ್ತರ ವಿಚಾರವಾಗಿ  ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ಸಂವಿಧಾನಕ್ಕೆ ವಿರುದ್ದವಾದದ್ದು ಎಂದು ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಟೀಕಾಪ್ರಹಾರ ನಡೆಸಿದ್ದಾರೆ.

Last Updated : Oct 27, 2018, 06:42 PM IST
 ಶಬರಿಮಲೆ ವಿವಾದ: ಅಮಿತ್ ಶಾ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾದದ್ದು- ಪಿನರಾಯಿ ವಿಜಯನ್ title=

ನವದೆಹಲಿ: ಶಬರಿಮಲೆ ಭಕ್ತರ ವಿಚಾರವಾಗಿ  ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ಸಂವಿಧಾನಕ್ಕೆ ವಿರುದ್ದವಾದದ್ದು ಎಂದು ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಟೀಕಾಪ್ರಹಾರ ನಡೆಸಿದ್ದಾರೆ.

ಪಿನಾರಾಯಿ ವಿಜಯನ್ ಅವರ ಹೇಳಿಕೆ ಅಮಿತ್ ಶಾ ಅವರು ಕಣ್ಣೂರಿನಲ್ಲಿ  ಶಬರಿಮಲೆ ಭಕ್ತರ ಪರವಾಗಿ ಬಂಡೆಗಲ್ಲಿನ ಹಾಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದ ನಂತರ ಬಂದಿದೆ. ಶಾ ಅವರು " ಇಂದು ಕೇರಳದಲ್ಲಿ  ಜನರ ನಂಬಿಕೆಗಳು ಮತ್ತು ರಾಜ್ಯ ಸರ್ಕಾರದ ಕ್ರೂರತೆಯ ನಡುವೆ ಸಂಘರ್ಷ ನಡೆಯುತ್ತಿದೆ.ಇದುವರೆಗೂ 2000ಕ್ಕೂ ಅಧಿಕ  ಬಿಜೆಪಿ,ಆರೆಸ್ಸೆಸ್ಸ್,ಮತ್ತು ಇತರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ ಅವರ ಪರವಾಗಿ ಬಂಡೆಗಲ್ಲಿನ ಹಾಗೆ ಬಿಜೆಪಿ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದ್ದರು.

ಇದಾದ ನಂತರ ಸಿಎಂ ಪಿನಾರೈ ವಿಜಯನ್ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ " ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಣ್ಣೂರಿನಲ್ಲಿನ ಹೇಳಿಕೆಯು ಸುಪ್ರಿಂಕೋರ್ಟ್,ಭಾರತೀಯ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನಡೆಸಿದ ದಾಳಿಯಾಗಿದೆ" ಎಂದು ಅವರು ಕಿಡಿಕಾರಿದರು.

ಇನ್ನು ಮುಂದುವರೆದು "ಅಮಿತ್ ಶಾ ಅವರು ಈ ಎಲ್ಡಿಎಫ್ ಸರ್ಕಾರವನ್ನು ಕಿತ್ತೊಗೆಯುವ ಬೆದರಿಕೆ ಒಡ್ಡುತ್ತಿದ್ದಾರೆ,ಆದರೆ ಅವರು ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು,ಈ ಸರ್ಕಾರ ಬಿಜೆಪಿ ಮರ್ಜಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ ಬದಲಾಗಿ ಈ ರಾಜ್ಯದ ಜನರ ಬೆಂಬಲದ ಮೂಲಕ ಬಂದಿದೆ" ಎಂದು ಅವರು ತಿಳಿಸಿದರು   

Trending News