ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (ಜೆಎನ್‌ಯುಎಸ್‌ಯು) ಅಧ್ಯಕ್ಷೆ ಐಶೆ ಘೋಷ್ ಅವರನ್ನು ದೆಹಲಿಯಲ್ಲಿ ಭೇಟಿಯಾದರು. ನಂತರ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಸಂಘ ಪರಿವಾರ್ ದ ವಿರುದ್ಧ ರಾಜಿಯಾಗದ ಹೋರಾಟವನ್ನು ಹುಟ್ಟು ಹಾಕಿದ್ದಕ್ಕಾಗಿ ಅವರು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ಎರ್ನಾಕುಲಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ಕೋಜಿಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚಿಸಿದ್ದು, `ರೆಡ್ ಅಲರ್ಟ್` ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪ್ರಧಾನಿಯನ್ನು ದಕ್ಷಿಣ ಭಾರತದಿಂದಲೇ ಆಯ್ಕೆ ಮಾಡುವ ನಿಟ್ಟಿನಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ದಕ್ಷಿಣ ಭಾರತದ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ.ಆ ನಿಟ್ಟಿನಲ್ಲಿ ಈಗ ಸರಣಿ ಸಭೆಯಗಳನ್ನು ಪ್ರಮುಖ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೆ ತರಗತಿಯಲ್ಲಿ ಓದುತ್ತಿರುವ ಸುಲಗ್ನಾ ಸೆನ್ ಎನ್ನುವ ಬಾಲಕಿ ಈಗ ತನ್ನ ಹುಟ್ಟುಹಬ್ಬಕ್ಕೆ ಎಂದು ಕೂಡಿಟ್ಟ 3280 ರೂಗಳನ್ನು ಕೇರಳ ಮುಖ್ಯಮಂತ್ರಿಗೆ ಪಿನರಾಯಿ ವಿಜಯನ್ ಅವರಿಗೆ ತಲುಪಿಸಿದ್ದಾಳೆ.
ಅಪರಿಚಿತ ವ್ಯಕ್ತಿಯೋಬ್ಬನು ಚಾಕುವಿನೊಂದಿಗೆ ಕೇರಳ ಹೌಸ್ ಗೆ ಪ್ರವೆಶಿಸಿಸಲು ಯತ್ನಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಕೇರಳ ಹೌಸ್ ಒಳಗೆ ಕೇರಳ ಮುಖ್ಯಮಂತ್ರಿ ಪಿಣಾರೈ ವಿಜಯನ್ ಉಪಸ್ಥಿತರಿದ್ದರು ಎಂದು ಹೇಳಲಾಗಿದೆ.