ಈ ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿಗಿಂತ NOTAಗೆ ಹೆಚ್ಚು ವೋಟ್!

ಆಂಧ್ರ ಪ್ರದೇಶದ 25 ಲೋಕಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ. 1.5 ರಷ್ಟು ಮತಗಳನ್ನು ನೋಟಾ ಗೆ ಹಾಕಲಾಗಿದೆ.

Last Updated : May 25, 2019, 04:37 PM IST
ಈ ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿಗಿಂತ NOTAಗೆ ಹೆಚ್ಚು ವೋಟ್!

ನವದೆಹಲಿ: ಲೋಕಸಭೆ ಚುನಾವಣೆ 2019ರಲ್ಲಿ ಬಿಜೆಪಿ ಅದ್ಭುತ ಗೆಲುವು ಸಾಧಿಸಿದ್ದು, ಎರಡನೇ ಅವಧಿಗೆ ಸರ್ಕಾರ ರಚನೆಗೆ ಕ್ಷಣಗಣನೆ ಆರಂಭಿಸಿದೆ. ಆದರೆ ದೇಶದ ಈ ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಜನತೆ ಬಿಜೆಪಿ, ಕಾಂಗ್ರೆಸ್ ಗಿಂತ ಹೆಚ್ಚಾಗಿ ನೋಟಾ ಗೆ ಹೆಚ್ಚಿನ ಮತಗಳನ್ನು ಹಾಕಿದ್ದಾರೆ.  

ಹೌದು, ಆಂಧ್ರಪ್ರದೇಶದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಇದೇ ರೀತಿಯ ಪರಿಸ್ಥಿತಿ ಎಲ್ಲೆಡೆ ಕಂಡು ಬಂದಿದೆ. ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಈ ಬಾರಿ ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲಾಗಿತ್ತು. ಇಲ್ಲಿ ಟಿಡಿಪಿ ಮತ್ತು ವೈಎಸ್ಆರ್ಸಿಪಿ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಏತನ್ಮಧ್ಯೆ, ಮೇ 23 ರಂದು ನಡೆದ ಚುನಾವಣೆಯ ಮತಎಣಿಕೆ ಸಂದರ್ಭದಲ್ಲಿ ನೋಟಾ ಮತಗಳು ಹೆಚ್ಚಾಗಿರುವುದು ತಿಳಿದುಬಂದಿದೆ. ಆಂಧ್ರ ಪ್ರದೇಶದ 25 ಲೋಕಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ. 1.5 ರಷ್ಟು ಮತಗಳನ್ನು ನೋಟಾ ಗೆ ಹಾಕಲಾಗಿದೆ. ಅಲ್ಲದೆ, ಬಿಜೆಪಿಗೆ ಕೇವಲ ಶೇ.0.96 ಮತಗಳು ದೊರೆತಿದ್ದು, ಕಾಂಗ್ರೆಸ್ ಶೇ.1.29 ಮತಗಳಿಗೆ ತೃಪ್ತಿಪಡಬೇಕಾಗಿದೆ.

2019ರ ಲೋಕಸಭೆ ಚುನಾವಣೆಯೊಂದಿಗೆ ಆಂಧ್ರಪ್ರದೇಶದಲ್ಲಿ 175 ಸ್ಥಾನಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.1.28 ಮತಗಳು ನೋಟಾ ಪಾಲಾಗಿವೆ. ಉಳಿದಂತೆ ಬಿಜೆಪಿಗೆ ಶೇ.0.84, ಕಾಂಗ್ರೆಸ್ ಪಕ್ಷಕ್ಕೆ ಶೇ.1.17 ಮತಗಳು ದೊರೆತಿವೆ. 

More Stories

Trending News