ನವ ದೆಹಲಿ: ನಜೀಬ್ ಅಹ್ಮೆದ್ ನಂತರ ಮತ್ತೊಬ್ಬ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್ಯು) ವಿದ್ಯಾರ್ಥಿಯು ನಾಪತ್ತೆಯಾಗಿದ್ದಾರೆ. ಘಜಿಯಾಬಾದ್ ನಿವಾಸಿ ಮುಕುಲ್ ಜೈನ್ ಎಂಬ ವಿದ್ಯಾರ್ಥಿ ಸೋಮವಾರದಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಘಜಿಯಾಬಾದ್ನಿಂದ ಜೆಎನ್ಯುಗೆ ದಿನನಿತ್ಯ ಪ್ರಯಾಣ ಮಾಡುತ್ತಿದ್ದ ಮುಕುಲ್ ಸೋಮವಾರ ಮನೆಗೆ ಮರಳಲಿಲ್ಲ ಎಂದು ವರದಿಗಳು ತಿಳಿಸಿವೆ. ಬಳಿಕ ಅವರ ಕುಟುಂಬ ಸದಸ್ಯರು ಆತನನ್ನು ಹುಡುಕುತ್ತಿದ್ದರು. ಮುಕುಲ್ ಅವರ ಸಂಬಂಧಿಯು ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಅವರು ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಲಿದರು ಎಂದು ತಿಳಿದುಬಂದಿದೆ.
ಸಿ.ಸಿ.ಟಿ.ವಿ ದೃಶ್ಯಗಳಲ್ಲಿ ಸೋಮವಾರ ಮಧ್ಯಾಹ್ನ 12:30 ಕ್ಕೆ ಪೂರ್ವ ಗೇಟ್ನಿಂದ ಮುಕುಲ್ ನಿರ್ಗಮಿಸುತ್ತಿರುವ ದೃಶ್ಯ ಸೆರೆಯಾಗಿದೆ. ಮುಕುಲ್ ಪೋಷಕರು ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.
ಈ ಹಿಂದೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗೆ ಸಂಬಂಧಿಸಿರುವ ಕೆಲವು ಇತರ ವಿದ್ಯಾರ್ಥಿಗಳೊಂದಿಗೆ ಹಲ್ಲೆ ನಡೆಸಿದ ನಂತರ, ಅಕ್ಟೋಬರ್ 15, 2016 ರಂದು ಜೆಎನ್ಯುವಿನ ಮಹಾ-ಮಾಂಡ್ವಿ ಹಾಸ್ಟೆಲ್ನಿಂದ ನಜೀಬ್ ಎಂಬ ವಿದ್ಯಾರ್ಥಿ ಕಾಣೆಯಾಗಿದ್ದರು.