Apple Watch 6ನ ಈ ಲುಕ್ ನಿಮ್ಮ ಮನಸ್ಸೂ ಸೆಳೆಯಲಿದೆ

Apple Watch 6 ಈ ಲುಕ್ ಇದೀಗ ಭಾರಿ ವೈರಲ್ ಆಗುತ್ತಿದ್ದು, ಹಲವರು ಈ ವಾಚ್ ಅನ್ನು ಖರೀದಿಸಿ ತಮ್ಮ ಕೈಗೆ ಧರಿಸಲು ಬಯಸುತ್ತಿದ್ದಾರೆ.

Last Updated : Feb 27, 2020, 12:21 PM IST
Apple Watch 6ನ ಈ ಲುಕ್ ನಿಮ್ಮ ಮನಸ್ಸೂ ಸೆಳೆಯಲಿದೆ title=

ವಿಶ್ವದ ಮೊಬೈಲ್ ತಯಾರಿಕೆಯ ಮುಂಚೂಣಿಯಲ್ಲಿರುವ ಕಂಪನಿ ಆಪಲ್, ಪ್ರತಿ ಬಾರಿ ನಿಮಗಾಗಿ ಆಕರ್ಷಕ ಗ್ಯಾಜೆಟ್ ಗಳನ್ನು ಹೊತ್ತು ತರುತ್ತದೆ. ಈ ಕಂಪನಿ ತನ್ನ ಗ್ಯಾಜೆಟ್ ಗಳ ಲುಕ್ ಕುರಿತು ಕೂಡ ತುಂಬಾ ಗಂಭೀರವಾಗಿ ಆಲೋಚಿಸುತ್ತದೆ.  ತನ್ನ ಇದೇ ಥೀಮ್ ಅನ್ನು ಮುಂದುವರೆಸಿರುವ ಕಂಪನಿ ಹೊಸ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ತೊಡಗಿದೆ. Apple Watch 6 ಹೆಸರಿನ ಈ ವಾಚ್ ಲುಕ್ ಎಷ್ಟೊಂದು ಆಕರ್ಷಕವಾಗಿದೆ ಎಂದರೆ ಎಲ್ಲರೂ ಇದನ್ನು ತಮ್ಮ ಕೈಗೆ ಧರಿಸಲು ಇಷ್ಟಪಡುತ್ತಿದ್ದಾರೆ.

MicroLED ಪ್ಯಾನೆಲ್ ಕಾಣಬಹುದು
ಆಪಲ್ ಯಾವಾಗಲೂ ತನ್ನ ಸ್ಮಾರ್ಟ್ ವಾಚ್ ಗಳಲ್ಲಿ ಸ್ಕ್ವೆಯರ್ ಶೇಪ್ ಡಿಸೈನ್ ಬಳಸುತ್ತದೆ. ಆದರೆ, ಈ ಬಾರಿ ಕಂಪನಿ ತನ್ನ ಸಾಂಪ್ರದಾಯಿಕ ಡಿಸೈನ್ ನಿಂದ ಹೊರಬಂದು ಗೋಲಾಕಾರದ ಡಿಸೈನ್ ಬಳಕೆಮಾಡಬಹುದು ಎಂದು ಅಂದಾಜಿಸಲಾಗುತ್ತಿದೆ. ಕಂಪನಿ ಬಿಡುಗಡೆಗೊಳಿಸಿರುವ Apple Watch 6 ಟೀಸರ್ ನಲ್ಲಿ ಕಂಪನಿ ಮೈಕ್ರೋ LED ಪ್ಯಾನೆಲ್ ಬಳಕೆ ಮಾಡಬಹುದು ಎಂಬುದನ್ನು ತೋರಿಸಲಾಗಿದೆ. ಅಷ್ಟೇ ಅಲ್ಲ ಈ ವಾಚ್ ನ ಮೇಲ್ಮೈ ಸಂಪೂರ್ಣವಾಗಿ ರೊಟೆಟಿಂಗ್ ಇರುವಂತೆ ಕಂಡುಬರುತ್ತಿದೆ.

ನೂತನ ಸ್ಟೈಲ್ ನಲ್ಲಿ ಸ್ಪೀಕರ್ ಗಳಿರಲಿವೆ
ಈ ನೂತನ ಸ್ಮಾರ್ಟ್ ವಾಚ್ ನಲ್ಲಿ ಕಂಪನಿ ಹಲವು ಹೊಸ ಪ್ರಯೋಗಗಳನ್ನು ಮಾಡಬಹುದು. ಮಾಹಿತಿಗಳ ಪ್ರಕಾರ ಈ ಬಾರಿ ಕಂಪನಿ ಸ್ಲಿಮ್ ರೋಟೆಟಿಂಗ್ ಸ್ಪೀಕರ್ ಗಳ ಬಳಕೆ ಮಾಡಲಿದೆ ಎನ್ನಲಾಗಿದೆ. ಜೊತೆಗೆ ಇದರಲ್ಲಿ 48 ಗಂಟೆಗಳ ಕಾಲ ನಡೆಯುವ ಬ್ಯಾಟರಿ ಇರಲಿದೆ. ಸದ್ಯ ಇರುವ ಆಪಲ್ ಸ್ಮಾರ್ಟ್ ವಾಚ್ ಗಳು 18 ಗಂಟೆ ಬ್ಯಾಟರಿ ಬ್ಯಾಕಪ್ ಹೊಂದಿವೆ.

ಆಪಲ್ ನ ಈ ಪ್ರಾಡಕ್ಟ್ ಗೆ ಸಂಬಂಧಿಸಿದ ಅಧಿಕಾರಿಗಳು ಈ ನೂತನ ಸ್ಮಾರ್ಟ್ ವಾಚ್ ಕೇವಲ ಕಾನ್ಸೆಪ್ಟ್ ಲೆವಲ್ ನಲ್ಲಿಯೇ ಇದ್ದು, 2020 ರ ಅಂತ್ಯದಲ್ಲಿ ಅಥವಾ 2021ರ ಆರಂಭದಲ್ಲಿ ಈ ವಾಚ್ ಬಿಡುಗಡೆಯಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.

Trending News