Asia's Biggest International Airport : ದೇಶದಲ್ಲಿ ನಿರ್ಮಾಣವಾಗುತ್ತಿದೆ ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣ! ಎಲ್ಲಿ? 

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಜೆವಾರ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ, ಇದು 2024 ರ ವೇಳೆಗೆ ಕಾರ್ಯಾಚರಣೆಗಳು ಪ್ರಾರಂಭವಾಗುವ ನಿರೀಕ್ಷೆಯೊಂದಿಗೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಬಹುನಿರೀಕ್ಷಿತ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. .

Written by - Channabasava A Kashinakunti | Last Updated : Nov 25, 2021, 01:43 PM IST
  • ಭವಿಷ್ಯದ ದೃಷ್ಟಿಯಿಂದ ಸಿದ್ಧವಾಗುತ್ತಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  • ಇದು ಏಷ್ಯಾದ ಅತಿ ದೊಡ್ಡ ವಿಮಾನ ನಿಲ್ದಾಣ
  • ಇದು 2024 ರ ವೇಳೆಗೆ ಕಾರ್ಯಾಚರಣೆಗಳು ಪ್ರಾರಂಭವಾಗುವ ನಿರೀಕ್ಷೆ
Asia's Biggest International Airport : ದೇಶದಲ್ಲಿ ನಿರ್ಮಾಣವಾಗುತ್ತಿದೆ ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣ! ಎಲ್ಲಿ?  title=

ನವದೆಹಲಿ : ಭವಿಷ್ಯದ ದೃಷ್ಟಿಯಿಂದ ಸಿದ್ಧವಾಗುತ್ತಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಏಷ್ಯಾದ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಜೆವಾರ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ, ಇದು 2024 ರ ವೇಳೆಗೆ ಕಾರ್ಯಾಚರಣೆಗಳು ಪ್ರಾರಂಭವಾಗುವ ನಿರೀಕ್ಷೆಯೊಂದಿಗೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಬಹುನಿರೀಕ್ಷಿತ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. .

ಏಷ್ಯಾದಲ್ಲೇ ಅತಿ ದೊಡ್ಡ ಮತ್ತು ದೇಶದ ಮೊದಲ ನೆಟ್ ಜೀರೋ-ಎಮಿಶನ್ ಏರ್ಪೋರ್ಟ್(India's first net zero-emission airport) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿಯವರು ಇಂದು ನೆರವೇರಿಸಲಿದ್ದಾರೆ.

ಇದನ್ನೂ ಓದಿ : ನಿಮ್ಮ ಬಳಿ 5 ರೂಪಾಯಿ ನೋಟು ಇದ್ದರೆ ಸುಲಭವಾಗಿ ಪಡೆಯಿರಿ 2 ಲಕ್ಷ ರೂಪಾಯಿ, ಇಲ್ಲಿದೆ ಮಾರಾಟದ ಸರಿಯಾದ ವಿಧಾನ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣದಿಂದ ಸುಮಾರು 72 ಕಿಮೀ ಮತ್ತು ದಾದ್ರಿಯಲ್ಲಿರುವ ಮಲ್ಟಿ-ನೋಡಲ್ ಲಾಜಿಸ್ಟಿಕ್ಸ್ ಹಬ್‌ನಿಂದ 40 ಕಿಮೀ ದೂರದಲ್ಲಿ ಆಯಕಟ್ಟಿನ ಸ್ಥಳದಲ್ಲಿರುವ ಜೇವಾರ್ ವಿಮಾನ ನಿಲ್ದಾಣವು ಉತ್ತರ ಪ್ರದೇಶದ ಆರ್ಥಿಕತೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣದ ಕಾರ್ಗೋ ಸೇವೆಗಳಿಂದ ನೋಯ್ಡಾ ದೊಡ್ಡ ಲಾಭ ಪಡೆಯುವ ನಿರೀಕ್ಷೆಯಿದೆ.

ಮುಂಬರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Noida International Airport)ವು ಆರಂಭಿಕ ವರ್ಷಗಳಲ್ಲಿ ಪಕ್ಕದ ಪ್ರದೇಶಗಳಿಗೆ 10,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ನಿರೀಕ್ಷಿಸುತ್ತದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಕನಸಿನ ಯೋಜನೆ ಜೇವರ್ ವಿಮಾನ ನಿಲ್ದಾಣ

ಇದು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿದ್ದು ನಾಲ್ಕು ಹಂತಗಳಲ್ಲಿ ನಿರ್ಮಾಣವಾಗಲಿದೆ. ಮೊದಲ ಹಂತದ ಯೋಜನಾ ವೆಚ್ಚ 8,916 ಕೋಟಿ ರೂ.

ವಿಮಾನ ನಿಲ್ದಾಣವು 1,334 ಹೆಕ್ಟೇರ್ ಭೂಮಿಯಲ್ಲಿ ನಿರ್ಮಗೊಳ್ಳುತ್ತಿದೆ ಮತ್ತು ಸುಮಾರು 1.2 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಉದ್ಯೋಗಾವಕಾಶಗಳು ವಿಮಾನ ನಿಲ್ದಾಣ(Airport)ದಲ್ಲಿನ ಕೆಲಸದಿಂದ ಮಾತ್ರವಲ್ಲದೆ ಸಂಗ್ರಹಣೆ, ರಕ್ಷಣೆ ಮತ್ತು ಆಹಾರದಂತಹ ಸಂಬಂಧಿತ ಉದ್ಯಮಗಳಿಂದಲೂ ಬರುತ್ತವೆ.

ಮುಂದಿನ ವರ್ಷಗಳಲ್ಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟ್ರಾಫಿಕ್ ಅನ್ನು ಜೇವರ್ ವಿಮಾನ ನಿಲ್ದಾಣಕ್ಕೆ ತಿರುಗಿಸುವ ನಿರೀಕ್ಷೆಯಿದೆ.

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತದಲ್ಲಿ ವರ್ಷಕ್ಕೆ 12 ಮಿಲಿಯನ್ ಪ್ರಯಾಣಿಕರ ದಟ್ಟಣೆಯನ್ನು ನಿರೀಕ್ಷಿಸಲಾಗಿದೆ.

2040-50 ರ ವೇಳೆಗೆ ಪೂರ್ಣಗೊಂಡ ನಂತರ, ಜೇವಾರ್ ವಿಮಾನ ನಿಲ್ದಾಣ(Jewar airport)ದ ಸಾಮರ್ಥ್ಯವು ವರ್ಷಕ್ಕೆ 70 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತದೆ.

ಇದನ್ನೂ ಓದಿ : PM Kisan: ಹೊಸ ವರ್ಷಕ್ಕಿಂತ ಮೊದಲೇ ರೈತರಿಗೆ ಸಿಹಿ ಸುದ್ದಿ, ಸರ್ಕಾರದ ಕಡೆಯಿಂದ ಪೂರ್ಣಗೊಂಡಿದೆ ತಯಾರಿ

ಉತ್ತರ ಪ್ರದೇಶ ಸರ್ಕಾರವು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿಗಾಗಿ 4,326 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.

ರಕ್ಷಣಾ ಕಾರಿಡಾರ್‌ನಿಂದ 50 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣವು ಯುವಕರಿಗೆ ಉದ್ಯೋಗ ಒದಗಿಸುವುದರ ಜೊತೆಗೆ ಉದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ನೋಯ್ಡಾ ಅಂತರಾಷ್ಟ್ರೀಯ ವಿಮಾನನಿಲ್ದಾಣವನ್ನು ನೆಲದ ಸಾರಿಗೆ ಕೇಂದ್ರವಾಗಿ ಕಲ್ಪಿಸಲಾಗಿದೆ, ಇದು ಮಲ್ಟಿಮೋಡಲ್ ಟ್ರಾನ್ಸಿಟ್ ಹಬ್ ಅನ್ನು ಹೊಂದಿರುತ್ತದೆ.

ಅಸ್ತಿತ್ವದಲ್ಲಿರುವ ಯಮುನಾ ಎಕ್ಸ್‌ಪ್ರೆಸ್‌ವೇ ಮತ್ತು ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗೆ(Yamuna Expressway and the Eastern Peripheral Expresswa) ವಿಮಾನ ನಿಲ್ದಾಣದ ಸಾಮೀಪ್ಯವೇ ಇದಕ್ಕೆ ಕಾರಣ.

ಜೇವರ್ ವಿಮಾನ ನಿಲ್ದಾಣವು ಹರಿಯಾಣದ ಫರಿದಾಬಾದ್ ಜಿಲ್ಲೆಯ ಬಲ್ಲಭಗಢ್‌ನಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News