ವಾಹನ ವಲಯ ಕುಸಿತ: ಸರ್ಕಾರ ಯಾವಾಗ ಕಣ್ಣು ತೆರೆಯುತ್ತೆ..?- ಪ್ರಿಯಾಂಕಾ ಗಾಂಧಿ ಪ್ರಶ್ನೆ

ಜಿಡಿಪಿ ಕುಸಿತದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇದರ ನಿವಾರಣೆಗಾಗಿ ಸರ್ಕಾರ ಯಾವಾಗ ಕಣ್ಣು ತೆರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.

Updated: Sep 10, 2019 , 06:00 PM IST
ವಾಹನ ವಲಯ ಕುಸಿತ: ಸರ್ಕಾರ ಯಾವಾಗ ಕಣ್ಣು ತೆರೆಯುತ್ತೆ..?- ಪ್ರಿಯಾಂಕಾ ಗಾಂಧಿ ಪ್ರಶ್ನೆ
file photo

ನವದೆಹಲಿ: ಜಿಡಿಪಿ ಕುಸಿತದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇದರ ನಿವಾರಣೆಗಾಗಿ ಸರ್ಕಾರ ಯಾವಾಗ ಕಣ್ಣು ತೆರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಿಯಾಂಕಾ ಗಾಂಧಿ ' ಆರ್ಥಿಕತೆಯು ಹಿಂಜರಿತದ ಪ್ರಪಾತಕ್ಕೆ ಬೀಳುತ್ತಿದೆ. ಕತ್ತಿ ಲಕ್ಷಾಂತರ ಜನರ ಜೀವನದ ಮೇಲೆ ತೂಗಾಡುತ್ತಿದೆ. ವಾಹನ ವಲಯ ಮತ್ತು ಟ್ರಕ್ ವಲಯ ನಕಾರಾತ್ಮಕ ಬೆಳವಣಿಗೆಯ ಸಂಕೇತವಾಗಿದೆ.ಉತ್ಪಾದನೆ ಮತ್ತು ಸಾರಿಗೆ ಮತ್ತು ಮಾರುಕಟ್ಟೆಯ ವಿಶ್ವಾಸ ಕ್ಷೀಣಿಸುತ್ತಿದೆ. ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಜೊತೆಗೆ ಅವರು ಅಶೋಕ್ ಲೇಲ್ಯಾಂಡ್‌ನ ಚೆನ್ನೈ ಸ್ಥಾವರವು 5 ದಿನಗಳವರೆಗೆ ಮುಚ್ಚಲ್ಪಡುತ್ತದೆ ಎನ್ನುವ ವರದಿಯನ್ನು ಟ್ಯಾಗ್ ಮಾಡಿದ್ದಾರೆ, ಇನ್ನು ಮುಂದುವರೆದು ಕೇಂದ್ರ ಸರ್ಕಾರ ತನ್ನ ಕಣ್ಣುಗಳನ್ನು ಯಾವಾಗ ತೆರೆಯುತ್ತದೆ ಎಂದು ಅವರು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ ಆರ್ಥಿಕ ಬೆಳವಣಿಗೆಯು ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಏಳು ವರ್ಷಗಳ ಕನಿಷ್ಠಕ್ಕೆ 5 ರಿಂದ 5 ಕ್ಕೆ ಇಳಿದಿದೆ. ಉತ್ಪಾದನಾ ವಲಯ ಮತ್ತು ಕೃಷಿ ಉತ್ಪಾದನೆಯಲ್ಲಿ ತೀವ್ರ ಕುಸಿತದಿಂದಾಗಿ ಈ ಕುಸಿತವು ಹೆಚ್ಚಾಗಿ ಸಂಭವಿಸಿದೆ ಎಂದು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಜಾಗತಿಕ ವ್ಯಾಪಾರ ಘರ್ಷಣೆಗಳು ಮತ್ತು ವ್ಯಾಪಾರ ಮನೋಭಾವವನ್ನು ಕುಗ್ಗಿಸುವ ನಡುವೆ ಗ್ರಾಹಕರ ಬೇಡಿಕೆ ಮತ್ತು ಖಾಸಗಿ ಹೂಡಿಕೆ ದುರ್ಬಲಗೊಂಡಿದೆ ಎನ್ನಲಾಗಿದೆ.