ಜಾಗತಿಕ ಟ್ವಿಟರ್ ಟ್ರೆಂಡಿಂಗ್ ನಲ್ಲಿ #AYODHYAVERDICT ಗೆ ಅಗ್ರಸ್ಥಾನ

ದಶಕಗಳಷ್ಟು ಹಳೆಯದಾದ ಅಯೋಧ್ಯಾ ಭೂ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ ಕೆಲವೇ ಕ್ಷಣಗಳಲ್ಲಿ,  #AYODHYAVERDICT ಮತ್ತು #rammandir ನಂತಹ ಹ್ಯಾಶ್‌ಟ್ಯಾಗ್‌ಗಳು ಭಾರತ ಮತ್ತು ವಿಶ್ವದಾದ್ಯಂತ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿವೆ. 

Last Updated : Nov 9, 2019, 03:51 PM IST
ಜಾಗತಿಕ ಟ್ವಿಟರ್ ಟ್ರೆಂಡಿಂಗ್ ನಲ್ಲಿ #AYODHYAVERDICT ಗೆ ಅಗ್ರಸ್ಥಾನ title=
Photo courtesy: Reuters

ನವದೆಹಲಿ: ದಶಕಗಳಷ್ಟು ಹಳೆಯದಾದ ಅಯೋಧ್ಯಾ ಭೂ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ ಕೆಲವೇ ಕ್ಷಣಗಳಲ್ಲಿ,  #AYODHYAVERDICT ಮತ್ತು #rammandir ನಂತಹ ಹ್ಯಾಶ್‌ಟ್ಯಾಗ್‌ಗಳು ಭಾರತ ಮತ್ತು ವಿಶ್ವದಾದ್ಯಂತ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿವೆ. 

ಮಧ್ಯಾಹ್ನ 2.30 ರ ಸುಮಾರಿಗೆ, ಅದಕ್ಕೆ ಸಂಬಂಧಿಸಿದ ತೀರ್ಪು ಮತ್ತು ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ವಾಧೀನಪಡಿಸಿಕೊಂಡಿವೆ - ವಿಶ್ವದ ಟಾಪ್ 10 ಟ್ರೆಂಡಿಂಗ್ ವಿಷಯಗಳಲ್ಲಿ ಐದು ಮತ್ತು ಭಾರತದಲ್ಲಿ ಎಲ್ಲಾ 10 ವಿಷಯಗಳು ತೀರ್ಪಿಗೆ ಸಂಬಂಧಿಸಿವೆ. #AYODHYAVERDICT 550,000 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಹೊಂದುವ ಮೂಲಕ ಭಾರತ ಮತ್ತು ವಿಶ್ವದ ಅಗ್ರ ಟ್ರೆಂಡಿಂಗ್ ನಲ್ಲಿದೆ. 

ಭಾರತದಲ್ಲಿ #BabriMasjid  #AyodhyaJudgement ಮತ್ತು ##RamJanmabhoomi ಪ್ರಮುಖ ಟ್ರೆಂಡಿಂಗ್ ನಲ್ಲಿ ಸೇರಿವೆ. ಆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ #RamMandir 160,000 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಹೊಂದಿದ್ದರೆ, ಸುಪ್ರೀಂಕೋರ್ಟ್ ಸಹ 200,000 ಕ್ಕೂ ಹೆಚ್ಚು ಟ್ವೀಟ್‌ಗಳ ಮೂಲಕ  ಟ್ರೆಂಡಿಂಗ್ ನಲ್ಲಿ ಸದ್ದು ಮಾಡುತ್ತಿದೆ. ಇನ್ನೊಂದೆಡೆಗೆ #RanjanGogoi ಕೂಡ ಟ್ರೆಂಡಿಂಗ್ ನಲ್ಲಿದ್ದಾರೆ. ತೀರ್ಪು ನೀಡುವಲ್ಲಿ ಐದು ಸದಸ್ಯರ ಸಂವಿಧಾನ ಪೀಠದ ನೇತೃತ್ವ ವಹಿಸಿದ್ದ ಅವರು ಸಿಜೆಐ ಹುದ್ದೆಯಿಂದ ನವೆಂಬರ್ 17 ಕ್ಕೆ ಕೆಳಗಿಳಿಯಲಿದ್ದಾರೆ.

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ವಿವಾದಿತ ಭೂಮಿಯನ್ನು ದೇವಾಲಯ ನಿರ್ಮಾಣಕ್ಕಾಗಿ ಸರ್ಕಾರ ನಡೆಸುವ ಟ್ರಸ್ಟ್‌ಗೆ ನೀಡಬೇಕೆಂದು ತೀರ್ಪು ನೀಡಿದೆ. ಇದೆ ವೇಳೆ ನೂತನ ಮಸೀದಿ ನಿರ್ಮಾಣಕ್ಕೆ ಪಟ್ಟಣದಲ್ಲಿ ಐದು ಎಕರೆ ಸೂಕ್ತವಾದ ಜಾಗವನ್ನು ನೀಡಲಾಗುವುದು ಎಂದು ಸುಪ್ರೀಂ ತೀರ್ಪು ನೀಡಿತು.

 

Trending News