ಲೋಕಸಭೆ ಟಿಕೆಟ್‍ಗಾಗಿ ನಮ್ಮಪ್ಪ ಅರವಿಂದ್ ಕೇಜ್ರಿವಾಲ್‌ಗೆ 6 ಕೋಟಿ ರೂ. ಕೊಟ್ಟಿದ್ದಾರೆ: ಅಭ್ಯರ್ಥಿ ಪುತ್ರ

ಅಣ್ಣಾ ಹಜಾರೆ ಚಳವಳಿಯಲ್ಲಿ ಭಾಗಿಯಲ್ಲದ ನನ್ನ ತಂದೆಗೆ ಯಾಕೆ ಆಮ್ ಆದ್ಮಿ ಪಕ್ಷ ಟಿಕೆಟ್ ನೀಡಿದೆ? ಅಷ್ಟಕ್ಕೂ ಒಬ್ಬ ಅನುಭವವಿಲ್ಲದ ರಾಜಕಾರಣಿಗೆ ಲೋಕಸಭೆ ಟಿಕೆಟ್ ದೊರೆತಿದೆ ಎಂದರೆ ಅದು ನಿಜಕ್ಕೂ 'ಅಚ್ಚರಿ' ತಂದಿದೆ ಎಂದು ಉದಯ್ ಹೇಳಿದ್ದಾರೆ

Last Updated : May 11, 2019, 04:47 PM IST
ಲೋಕಸಭೆ ಟಿಕೆಟ್‍ಗಾಗಿ ನಮ್ಮಪ್ಪ ಅರವಿಂದ್ ಕೇಜ್ರಿವಾಲ್‌ಗೆ 6 ಕೋಟಿ ರೂ. ಕೊಟ್ಟಿದ್ದಾರೆ: ಅಭ್ಯರ್ಥಿ ಪುತ್ರ title=

ನವದೆಹಲಿ: ಲೋಕಸಭಾ ಚುನಾವಣೆಗಾಗಿ ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಟಿಕೆಟ್ ಗಾಗಿ ತನ್ನ ತಂದೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ 6 ಕೋಟಿ ರೂ.ಗಳನ್ನು ನೀಡಿದ್ದಾರೆ ಎಂದು ಅಭ್ಯರ್ಥಿ ಬಲಬೀರ್ ಸಿಂಗ್ ಜಾಖರ್ ಪುತ್ರ ಉದಯ್ ಗಂಭೀರ ಆರೋಪ ಮಾಡಿದ್ದಾರೆ.

"ಮೂರು ತಿಂಗಳ ಹಿಂದಷ್ಟೇ ನನ್ನ ತಂದೆ ರಾಜಕೀಯಕ್ಕೆ ಸೇರಿದ್ದಾರೆ. ಆಪ್​​ ಪಕ್ಷದ ವತಿಯಿಂದ ಹಾಲಿ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿಯಿಂದ ಸ್ಪರ್ಧಿಸಲು ಟಿಕೆಟ್​ಗಾಗಿ ಅರವಿಂದ್​ ಕೇಜ್ರೀವಾಲ್​​ಗೆ 6 ಕೋಟಿ ರೂಪಾಯಿ ನೀಡಿದ್ದಾರೆ. ಇದಕ್ಕೆ ಬಗ್ಗೆ ನನ್ನ ಬಳಿ ನಂಬಲರ್ಹ ಸಾಕ್ಷ್ಯಗಳೂ ಇವೆ" ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

"ಅಣ್ಣಾ ಹಜಾರೆ ಚಳವಳಿಯಲ್ಲಿ ಭಾಗಿಯಲ್ಲದ ನನ್ನ ತಂದೆಗೆ ಯಾಕೆ ಆಮ್ ಆದ್ಮಿ ಪಕ್ಷ ಟಿಕೆಟ್ ನೀಡಿದೆ? ಅಷ್ಟಕ್ಕೂ ಒಬ್ಬ ಅನುಭವವಿಲ್ಲದ ರಾಜಕಾರಣಿಗೆ ಲೋಕಸಭೆ ಟಿಕೆಟ್ ದೊರೆತಿದೆ ಎಂದರೆ ಅದು ನಿಜಕ್ಕೂ 'ಅಚ್ಚರಿ' ತಂದಿದೆ" ಎಂದು ಉದಯ್ ಹೇಳಿದ್ದಾರೆ

"ನಾನು ನನ್ನ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಕೇಳಿದಾಗ, ಅವರು ನೀಡಲು ಸಿದ್ಧರಿರಲಿಲ್ಲ. ಈಗ ತಮ್ಮ ಸ್ವಂತ ರಾಜಕೀಯ ಪ್ರಯೋಜನಕ್ಕಾಗಿ ಹಣವನ್ನು ಬಳಸುತ್ತಿದ್ದಾರೆ.  ಮತ್ತೊಂದು ಅಚ್ಚರಿ ವಿಚಾರವೆಂದರೆ, ನನ್ನ ತಂದೆಯವರು ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಯಶ್ಪಾಲ್ ಮತ್ತು ಸಜ್ಜನ್ ಕುಮಾರ್ ಅವರ ಜಾಮೀನಿಗಾಗಿ ಹಣವನ್ನು ಬಳಸಲು ಸಿದ್ಧರಾಗಿದ್ದರು. ಅವರನ್ನು ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡಿಸಲು ಮತ್ತು ಅವರಿಗಾಗಿ ಪ್ರಕರಣವನ್ನು ಎದುರಿಸಲು ಸಿದ್ಧರಿದ್ದರು" ಎಂದು ಉದಯ್ ಹೇಳಿದ್ದಾರೆ.

ಅವರು "ಬಹಳ ಕ್ಲೀನ್ ಇಮೇಜ್ ಇಟ್ಟುಕೊಂಡು ರಾಜಕೀಯಕ್ಕೆ ಬಂದ ಅರವಿಂದ ಕೇಜ್ರಿವಾಲ್ ಅವರಂತಹ ನಾಯಕರು ನಮ್ಮ ತಂದೆಯೊಂದಿಗೆ ಸೇರಿ ಹೆಸರು ತಮ್ಮ ಹೆಸರನ್ನು ತಾವೇ ಕೆಡಿಸಿಕೊಂಡಿದ್ದಾರೆ" ಎಂದು ಉದಯ್ ಟೀಕಿಸಿದ್ದಾರೆ.

Trending News