ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲಿನ ನಿಷೇಧ ವಿಸ್ತರಣೆ

International Flights Suspension: ಕೊರೊನಾ  ಹೊಸ ರೂಪಾಂತರದ ಆತಂಕದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧದ ಅವಧಿಯನ್ನು ವಿಸ್ತರಿಸಲಾಗಿದೆ. 

Written by - Ranjitha R K | Last Updated : Jan 19, 2022, 03:12 PM IST
  • ವಿದೇಶಿ ಪ್ರವಾಸಿಗರಿಗೆ ಪ್ರಮುಖ ಸುದ್ದಿ
  • ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧ ಮುಂದುವರಿಕೆ
  • ಸೂಚನೆಗಳನ್ನು ನೀಡಿದ ಡಿಜಿಸಿಎ
ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲಿನ ನಿಷೇಧ ವಿಸ್ತರಣೆ   title=
ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧ ಮುಂದುವರಿಕೆ (file photo)

ನವದೆಹಲಿ : International Flights Suspension: ಕೊರೊನಾ (Coronavirus) ಹೊಸ ರೂಪಾಂತರದ ಆತಂಕದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧದ ಅವಧಿಯನ್ನು (International Flights Suspension) ವಿಸ್ತರಿಸಲಾಗಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಈ ನಿರ್ಧಾರ ಪ್ರಕಟಿಸಿದೆ. ಭಾರತ ಸರ್ಕಾರವು ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟಡ ಮೇಲಿನ ನಿಷೇಧವನ್ನು ಫೆಬ್ರವರಿ 28 ರವರೆಗೆ ವಿಸ್ತರಿಸಿದೆ. ಈ ಹಿಂದೆ ಕೇಂದ್ರ ಸರ್ಕಾರವು ಜನವರಿ 31 ರವರೆಗೆ ದೇಶಕ್ಕೆ ಮತ್ತು ದೇಶದಿಂದ ಹೊರಡುವ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು (International flight ban) ಸ್ಥಗಿತಗೊಳಿಸಿತ್ತು.  

 ಆದೇಶ ಹೊರಡಿಸಿದ ಡಿಜಿಸಿಎ :
ಡಿಜಿಸಿಎ (DGCA) ಕೂಡ ಈ ಕುರಿತು ಆದೇಶ ಹೊರಡಿಸಿದೆ. DGCA ಆದೇಶದ ಪ್ರಕಾರ, ಈ ನಿಷೇಧ ಕಾರ್ಗೋ ಮತ್ತು DGCA ಅನುಮೋದಿತ ವಿಮಾನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. COVID-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 23 ಮಾರ್ಚ್ 2020 ರಿಂದ ಭಾರತದಿಂದ  ಮತ್ತು ಭಾರತಕ್ಕೆ ಹಾರಾಡುವ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ (International Flights Suspension). ಆದರೆ, ಜುಲೈ 2020 ರಿಂದ, ಕೆಲವು ವಿಶೇಷ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಸುಮಾರು 28 ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಮೂಲಕ ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ  ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. 

 

ಇದನ್ನೂ ಓದಿ : 19-01-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

ಕೊರೊನಾ ಭೀಕರ ಪರಿಸ್ಥಿತಿ :
ಬುಧವಾರ ಮತ್ತೊಮ್ಮೆ, COVID-19 ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ (ಮಂಗಳವಾರ ಬೆಳಿಗ್ಗೆ 8 ರಿಂದ ಬುಧವಾರ ಬೆಳಿಗ್ಗೆ 8) ದೇಶದಲ್ಲಿ 2 ಲಕ್ಷ 82 ಸಾವಿರ 970 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಮಂಗಳವಾರ ಬಂದ ಹೊಸ ಪ್ರಕರಣಕ್ಕಿಂತ 44 ಸಾವಿರದ 952 ಹೆಚ್ಚು ಇರುವುದು ಗಮನಾರ್ಹ. ನಿನ್ನೆ 2,38,018 ಕೊರೊನಾ (Coronavirus) ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1 ಲಕ್ಷ 88 ಸಾವಿರ 157 ಜನರು ಚೇತರಿಸಿಕೊಂಡಿದ್ದರೆ, 441 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಭಾರತೀಯ ರೈಲುಗಳಲ್ಲಿ ಆರಂಭವಾಗಿದೆ ಈ ಸೇವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News