ಮುಂದಿನ ತಿಂಗಳು 11 ದಿನ ಬ್ಯಾಂಕುಗಳಿಗೆ ರಜೆ!

ಮುಂದಿನ ತಿಂಗಳಿನಿಂದ ಹಬ್ಬದ ಋತು ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳುಗಿಂತ ಅಕ್ಟೋಬರ್‌ನಲ್ಲಿ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಹೆಚ್ಚಿನ ರಜಾದಿನಗಳು ಇರುತ್ತವೆ. ಈ ತಿಂಗಳು ದಸರಾ ಮತ್ತು ದೀಪಾವಳಿ ಎರಡನ್ನೂ ಆಚರಿಸಲಾಗುತ್ತಿದೆ.  

Last Updated : Sep 27, 2019, 11:58 AM IST
ಮುಂದಿನ ತಿಂಗಳು 11 ದಿನ ಬ್ಯಾಂಕುಗಳಿಗೆ ರಜೆ! title=

ನವದೆಹಲಿ: ಮುಂದಿನ ತಿಂಗಳಿನಿಂದ ಹಬ್ಬದ ಋತು ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳುಗಿಂತ ಅಕ್ಟೋಬರ್‌ನಲ್ಲಿ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಹೆಚ್ಚಿನ ರಜಾದಿನಗಳು ಇರುತ್ತವೆ. ಈ ತಿಂಗಳು ದಸರಾ ಮತ್ತು ದೀಪಾವಳಿ ಎರಡನ್ನೂ ಆಚರಿಸಲಾಗುತ್ತಿದೆ. ಈ ಕಾರಣದಿಂದಾಗಿ, ಈ ತಿಂಗಳು ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಲ್ಲಿ ಗರಿಷ್ಠ ಸಂಖ್ಯೆಯ ರಜಾದಿನಗಳು ಇವೆ. ಅಕ್ಟೋಬರ್‌ನಲ್ಲಿ ಒಟ್ಟು 11 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇರಲಿದೆ. ಅಂದರೆ, ಕೇವಲ 20 ದಿನಗಳು ಮಾತ್ರ ಬ್ಯಾಂಕ್ ಕಾರ್ಯ ನಿರ್ವಹಿಸಲಿವೆ. ಅಕ್ಟೋಬರ್ 2 ರಂದು ಮೊದಲ ರಜಾದಿನ ಇದೆ.

ಅಕ್ಟೋಬರ್ 2 ರಂದು ಗಾಂಧಿ ಜಯಂತಿ:
ಅಕ್ಟೋಬರ್ 2 ರಂದು (ಬುಧವಾರ), ಗಾಂಧಿ ಜಯಂತಿ ಕಾರಣ ಬ್ಯಾಂಕುಗಳಿಗೆ ರಜೆ ಇರುತ್ತದೆ. ಇದು ಈ ತಿಂಗಳ ಮೊದಲ ರಜಾದಿನವಾಗಿದೆ. ಇದರ ನಂತರ, ಆಯುಧ ಪೂಜೆ ಮತ್ತು ದಸರಾ ಕಾರಣ ಬ್ಯಾಂಕುಗಳಿಗೆ ಅಕ್ಟೋಬರ್ 7 ಮತ್ತು 8 ರಂದು ರಜೆ ಇರುತ್ತದೆ. ಅಕ್ಟೋಬರ್ 6 ರಂದು ಭಾನುವಾರ, ಹಾಗಾಗಿ ಬ್ಯಾಂಕುಗಳು ಒಟ್ಟಿಗೆ 3 ದಿನಗಳ ಕಾಲ ಮುಚ್ಚಲ್ಪಡುತ್ತವೆ.

ಅಕ್ಟೋಬರ್  12 ಕ್ಕೆ ಎರಡನೇ ಶನಿವಾರ:
ಅಕ್ಟೋಬರ್ 12 ತಿಂಗಳ ಎರಡನೇ ಶನಿವಾರ ಮತ್ತು ಅಕ್ಟೋಬರ್ 13 ಭಾನುವಾರ. ಈ ಎರಡು ದಿನಗಳು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಕ್ಟೋಬರ್ 20 ರಂದು ಭಾನುವಾರವಾದ ಕಾರಣ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ದೀಪಾವಳಿ ವೇಳೆ 4 ದಿನಗಳ ಕಾಲ ಬ್ಯಾಂಕ್ ರಜೆ:
ದೀಪಾವಳಿ ಸಮಯದಲ್ಲಿ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇರುತ್ತದೆ. ಅಕ್ಟೋಬರ್ 26 ರಂದು ನಾಲ್ಕನೇ ಶನಿವಾರ ಮತ್ತು ಅಕ್ಟೋಬರ್ 27 ರಂದು ಭಾನುವಾರವಿದೆ. ದೀಪಾವಳಿ ಕೂಡ ಭಾನುವಾರ. ಅಕ್ಟೋಬರ್ 28 ರಂದು ಗೋವರ್ಧನ್‌ ಪೂಜಾ ಮತ್ತು  ಅಕ್ಟೋಬರ್ 29 ರಂದು ಭೈಯಾ ಡುಜ್ ರಜೆ ಇರುತ್ತದೆ.

ನವೆಂಬರ್‌ನಲ್ಲಿ 7 ದಿನ ಬ್ಯಾಂಕುಗಳಿಗೆ ರಜೆ:
2019 ರ ಅಕ್ಟೋಬರ್‌ನ ಬಳಿಕ ನವೆಂಬರ್‌ನಲ್ಲಿ 3, 10, 17 ಮತ್ತು 24 ರಂದು ಇದು ಭಾನುವಾರ ಮತ್ತು ಅಕ್ಟೋಬರ್ 9 ಮತ್ತು 23 ರಂದು ಎರಡನೇ ಮತ್ತು ನಾಲ್ಕನೇ ಶನಿವಾರವಾದ ಕಾರಣ ರಜೆ ಇರಲಿದೆ. ನವೆಂಬರ್ 12 ರಂದು  ಗುರುನಾನಕ್ ಜಯಂತಿ ಇರುವುದರಿಂದ ಆ ದಿನವೂ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

Trending News