2014 ರಲ್ಲಿನ ಕಪ್ಪು ಹಣದ ಭರವಸೆಯನ್ನೇ ಬಿಜೆಪಿ ಇನ್ನೂ ಈಡೇರಿಸಿಲ್ಲ -ಮಾಯಾವತಿ

ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಯಾವತಿ ಬಿಜೆಪಿ 2014 ರಲ್ಲಿನ ಕಪ್ಪು ಹಣದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದರು.

Last Updated : Apr 5, 2019, 04:19 PM IST
 2014 ರಲ್ಲಿನ ಕಪ್ಪು ಹಣದ ಭರವಸೆಯನ್ನೇ ಬಿಜೆಪಿ ಇನ್ನೂ ಈಡೇರಿಸಿಲ್ಲ -ಮಾಯಾವತಿ  title=
file photo(ANI)

ನವದೆಹಲಿ: ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಯಾವತಿ ಬಿಜೆಪಿ 2014 ರಲ್ಲಿನ ಕಪ್ಪು ಹಣದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದರು.

"ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಕಪ್ಪು ಹಣವನ್ನು ವಾಪಸ್ ತರುವುದಾಗಿ ಹೇಳಿತ್ತು ಆದರೆ ಕಳೆದ ಐದು ವರ್ಷಗಳಿಂದ ಅದು ಅಧಿಕಾರದಲ್ಲಿದೆ ಆದರೆ ಯಾವುದೇ ಹಣ ವಾಪಸ್ ಇನ್ನೂ ಬಂದಿಲ್ಲ ಎಂದು ಹೈದರಾಬಾದ್ ನಲ್ಲಿ ರ್ಯಾಲಿ ಯೊಂದರಲ್ಲಿ ಭಾಗವಹಿಸಿ ಮಾತನಾಡುತ್ತಾ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ನಟ ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷ ಹಾಗೂ ಮಾಯಾವತಿಯವರ  ಬಿಎಸ್ಪಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿದೆ.ಈ ಹಿನ್ನಲೆಯಲ್ಲಿ ಅವರು ಇಲ್ಲಿನ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಬಂದಿದ್ದರು.

ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಮಾಯಾವತಿ 2014ರಿಂದ ಯಾವುದೇ ಅಭಿವೃದ್ದಿ ಕಾರ್ಯಗಳಾಗಿಲ್ಲವೆಂದು ಮಾಯಾವತಿ ಆರೋಪಿಸಿದರು."ತೆಲಂಗಾಣ ರಾಜ್ಯ ಸ್ಥಾಪನೆಯಾದಾಗಿನಿಂದಲೂ ಯಾವುದೇ ಅಭಿವೃದ್ದಿ ಕಾರ್ಯಗಳು ಇಲ್ಲಿ ನಡೆದಿಲ್ಲ.ಶೇ 70 ರಷ್ಟು  ಜನಸಂಖ್ಯೆ ಹಿಂದುಳಿದ ಪ.ಪಂಗಡ.ಪ.ಜಾತಿ ಸಮುದಾಯವನ್ನು ಒಳಗೊಂಡಿದೆ ಅವರಿಗಾಗಿ ಯಾವುದೇ ಕೆಲಸವಾಗಿಲ್ಲ ಎಂದು ಅವರು ಹೇಳಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್ "ಚಾಯ್ ವಾಲಾ ಈಗ ಚೌಕಿದಾರ್ ನಾಗಿದ್ದಾನೆ. ಜನರನ್ನು ಭಯ ಭೀತಗೊಳಿಸಿರುವ ರೀತಿ ಒಪ್ಪುವಂತದ್ದಲ್ಲ ಆದ್ದರಿಂದ ನಾವು ಈಗ ಮಾಯಾವತಿಯವರ ಪರವಾಗಿ ನಿಂತು ಅವರನ್ನು ಪ್ರಧಾನಿಯನ್ನು ಮಾಡಬೇಕು ಎಂದು ಹೇಳಿದರು.  

Trending News