ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಮಗ ಮನ್ವೇಂದ್ರ ಕಾಂಗ್ರೆಸಿಗೆ ಸೇರ್ಪಡೆ

ಈ ಬಾರಿ ರಾಜಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಹಿರಿಯ ಬಿಜೆಪಿ ನಾಯಕ  ಜಸ್ವಂತ್ ಸಿಂಗ್ ಅವರ ಪುತ್ರ ಮತ್ತು ಮಾಜಿ ಶಾಸಕ ಮನ್ವೇಂದ್ರ ಸಿಂಗ್ ಬುಧುವಾರದಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

Last Updated : Oct 17, 2018, 04:58 PM IST
ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಮಗ ಮನ್ವೇಂದ್ರ ಕಾಂಗ್ರೆಸಿಗೆ ಸೇರ್ಪಡೆ  title=

ನವದೆಹಲಿ: ಈ ಬಾರಿ ರಾಜಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಹಿರಿಯ ಬಿಜೆಪಿ ನಾಯಕ  ಜಸ್ವಂತ್ ಸಿಂಗ್ ಅವರ ಪುತ್ರ ಮತ್ತು ಮಾಜಿ ಶಾಸಕ ಮನ್ವೇಂದ್ರ ಸಿಂಗ್ ಬುಧುವಾರದಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಬಾರ್ಮರ್ ನ ಶಿಯೋ ಕ್ಷೇತ್ರವನ್ನು ಗೆದ್ದಿದ್ದ ಸಿಂಗ್, ಕಳೆದ ತಿಂಗಳು ಅವರು ಬಿಜೆಪಿ ಪಕ್ಷವನ್ನು ತೊರೆಯುವದಾಗಿ ಘೋಷಿಸಿದ್ದರು.ಇದೇ ಬರುವ ಡಿಸೆಂಬರ್ ನಲ್ಲಿ ರಾಜಸ್ತಾನದಲ್ಲಿ ವಿಧಾನಸಭೆ ಚುನಾವಣೆ ಇದೆ ಈ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್ ಮನ್ವೆಂದ್ರ ಸಿಂಗ್ ಅವರ ಸೇರುವಿಕೆಯಿಂದಾಗಿ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದು ತಿಳಿದುಬಂದಿದೆ.ಈಗ ಇವರ ಸೇರ್ಪಡೆಯಿಂದಾಗಿ ರಜಪೂತ್ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರಲಿವೆ ಎನ್ನಲಾಗಿದೆ.

ಇನ್ನೊಂದೆಡೆಗೆ ಇವರ ನಿರ್ಗಮನದಿಂದ  ಬಾರ್ಮರ್-ಜೈಸಲ್ಮೇರ್ ನಲ್ಲಿ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.ಪ್ರಸಕ್ತ  ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರವು ತೀವ್ರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದು ಬಿಜೆಪಿ ಈ ಬಾರಿ ಸೋಲುವ ಭೀತಿಯನ್ನು ಎದುರಿಸುತ್ತಿದೆ ಎನ್ನಲಾಗಿದೆ.

 

Trending News