ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾಯಾವತಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕಿ

ಉತ್ತರಪ್ರದೇಶದ ಚಂದೌಲಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಾಯಾವತಿ ಮಹಿಳೆ ಮತ್ತು ಪುರುಷ ಎರಡು ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಶಾಸಕಿ ಸಾಧನಾ ಸಿಂಗ್ ಈಗ ತಮ್ಮ ಹೇಳಿಕೆ ವಿಚಾರವಾಗಿ ಕ್ಷಮೆಯಾಚನೆ ಕೋರಿದ್ದಾರೆ.

Last Updated : Jan 20, 2019, 07:12 PM IST
ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾಯಾವತಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕಿ  title=

ನವದೆಹಲಿ: ಉತ್ತರಪ್ರದೇಶದ ಚಂದೌಲಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಾಯಾವತಿ ಮಹಿಳೆ ಮತ್ತು ಪುರುಷ ಎರಡು ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಶಾಸಕಿ ಸಾಧನಾ ಸಿಂಗ್ ಈಗ ತಮ್ಮ ಹೇಳಿಕೆ ವಿಚಾರವಾಗಿ ಕ್ಷಮೆಯಾಚನೆ ಕೋರಿದ್ದಾರೆ.

ಸಾಧನಾ ಸಿಂಗ್ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನಲೆಯಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು " ನನಗೆ ಯಾವುದೇ ಅಗೌರವದಿಂದ ಕಾಣುವ ಯಾವುದೇ ಉದ್ದೇಶವಿದ್ದಿರಲಿಲ್ಲ,ನನ್ನ ಹೇಳಿಕೆಯಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ" ಎಂದಿದ್ದಾರೆ.  

ಶಾಸಕಿ ಸಾಧನಾ ಸಿಂಗ್ ಅವರು " ನನಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಇತ್ತ  ಮಹಿಳೆ ಮತ್ತು ಪುರುಷ ಎನಿಸುವುದಿಲ್ಲ,ಅವರಿಗೆ ಸ್ವಾಭಿಮಾನದ ಪರಿಕಲ್ಪನೆಯ ಅರ್ಥವಾಗುವುದಿಲ್ಲ,ಅವರು ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಸೇರಿ ಎಲ್ಲವನ್ನು ಮಾರಿಕೊಂಡಿದ್ದಾರೆ"ಎಂದು ಹೇಳಿದರು.ಇನ್ನು ಮುಂದುವರೆದು"ಈ ಅವಕಾಶವನ್ನು ನಾನು ಮಾಯವತಿಯವರನ್ನು ಖಂಡಿಸುವುದಕ್ಕಾಗಿ ಬಳಸಿಕೊಳ್ಳುತ್ತೇನೆ, ಅವರು ಇಡೀ ಹೆಣ್ಣುತನಕ್ಕೆ ಅವಮಾನ,ಬಿಜೆಪಿ ನಾಯಕರು ಅವರ ಸ್ವಾಭಿಮಾನವನ್ನು ರಕ್ಷಿಸಿದರು,ಆದರೆ ತನ್ನ ಅನೂಕೂಲ ಮತ್ತು ಅಧಿಕಾರಕ್ಕಾಗಿ ಅವರು ಎಲ್ಲವನ್ನು ಮಾರಿಕೊಂಡರು.ಆದ್ದರಿಂದ ಇಡೀ ದೇಶವು ಅವರನ್ನು ಖಂಡಿಸಬೇಕೆಂದು ಹೇಳಿದರು.

ಇನ್ನೊಂದೆಡೆ ಇವರ ಹೇಳಿಕೆಯನ್ನು ಖಂಡಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ " ಮುಘಲ್ ಸರಾಯಿ ನ ಬಿಜೆಪಿ ಶಾಸಕಿಯರೊಬ್ಬರು ಮಾಯಾವತಿಯವರ ಬಗ್ಗೆ ಬಳಸಿರುವ ಪದಗಳು ನಿಜಕ್ಕೂ ಆಕ್ಷೇಪಾರ್ಹ. ನಾನು ಈ ಹೇಳಿಕೆಯನ್ನು ಖಂಡಿಸುತ್ತೇನೆ,ಬಿಜೆಪಿ ನೈತಿಕ ಅಂಧಪತನ ಕಂಡಿದೆ,ಅವರು ನಿರಾಶರಾಗಿದ್ದಾರೆ.ಈ  ಹೇಳಿಕೆ  ಈ ದೇಶದ ಮಹಿಳೆಗೆ ಮಾಡಿರುವ ಅವಮಾನ" ಎಂದು ಯಾದವ್ ಖಂಡಿಸಿದ್ದರು.
 

Trending News