/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ದೆಹಲಿಯಲ್ಲಿ ಬಿಜೆಪಿಯು ತನ್ನ ನಾಲ್ವರು ಶಾಸಕರನ್ನು ಸಂಪರ್ಕಿಸಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರ ಗಂಭೀರ ಆರೋಪ ಮಾಡಿದೆ. ‘ಒಂದೋ ಪಕ್ಷವನ್ನು ಬದಲಿಸಿ ಕೇಸರಿ ಪಕ್ಷಕ್ಕೆ ಸೇರಬೇಕು ಇಲ್ಲವೇ ‘ಸುಳ್ಳು ಪ್ರಕರಣಗಳು, ಸಿಬಿಐ ಮತ್ತು ಇಡಿ ದಾಳಿಯನ್ನು ಎದುರಿಸಬೇಕು ಅಂತಾ ಬೆದರಿಕೆ ಹಾಕಲಾಗಿದೆ ಎಂದು ಎಎಪಿ ಆರೋಪಿಸಿದೆ.   

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿಯ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ‘ಶಾಸಕರಾದ ಅಜಯ್ ದತ್, ಸಂಜೀವ್ ಝಾ, ಸೋಮನಾಥ್ ಭಾರತಿ ಮತ್ತು ಕುಲದೀಪ್ ಅವರನ್ನು ಬಿಜೆಪಿಯ ನಾಯಕರು ಸಂಪರ್ಕಿಸಿದ್ದಾರೆ. ಈ ಮೂವರ ಜೊತೆಗೆ ಅವರು ಸ್ನೇಹ ಸಂಬಂಧ ಹೊಂದಿದ್ದಾರೆ. ಬಿಜೆಪಿಗೆ ಸೇರಲು ದೊಡ್ಡ ಮೊತ್ತದ ಆಫರ್ ಸಹ ನೀಡಲಾಗಿದೆ ಎಂಬ ಗಂಭೀರ ಆರೋಪವನ್ನು ಅವರು ಇದೇ ವೇಳೆ ಮಾಡಿದ್ದಾರೆ.

ಇದನ್ನೂ ಓದಿ: Viral Video: ಮಡಿಲಲ್ಲಿ ಮಗು ಹೊತ್ತು ಫುಡ್ ತಲುಪಿಸುವ Zomato ಡೆಲಿವರಿ ಏಜೆಂಟ್

‘ಪಕ್ಷಕ್ಕೆ ಸೇರ್ಪಡೆಯಾದರೆ ತಲಾ 20 ಕೋಟಿ ರೂ. ಹಾಗೂ ಇತರ ಶಾಸಕರನ್ನು ಕರೆತಂದರೆ 25 ಕೋಟಿ ರೂ. ನೀಡುವುದಾಗಿ ಬಿಜೆಪಿ ನಾಯಕರು ಆಫರ್ ನೀಡಿದ್ದಾರೆ ಅಂತಾ ಸಿಂಗ್ ಆರೋಪಿಸಿದ್ದಾರೆ. ‘ತಮ್ಮ ಪ್ರಸ್ತಾಪ ಅಂದರೆ ಆಫರ್ ಸ್ವೀಕರಿಸದಿದ್ದರೆ ಮತ್ತು ಬಿಜೆಪಿಗೆ ಸೇರ್ಪಡೆಗೊಳ್ಳದಿದ್ದರೆ ಅಂತವರು ಸುಳ್ಳು ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆ ಒಡ್ಡಲಾಗಿದೆ.

ನಮ್ಮ ಪಕ್ಷಕ್ಕೆ ಸೇರದವರ ವಿರುದ್ಧ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೇಲೆ ನಡೆದಿರುವ ಸಿಬಿಐ ಮತ್ತು ಇಡಿ ದಾಳಿಯಂತೆ ದಾಳಿ ನಡೆಸಲಾಗುತ್ತದೆ ಅಂತಾ ಬಿಜೆಪಿ ನಾಯಕರು ಬೆದರಿಕೆ ಹಾಕಿದ್ದಾರೆ ಅಂತಾ ಸಿಂಗ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ರಾಜಾಗೆ ‘ಸಜಾ’: ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಬಿಜೆಪಿಯಿಂದ ಅಮಾನತು!

ಪ್ರಧಾನಿ ನರೇಂದ್ರ ಮೋದಿ ಅವರು ಎಎಪಿ ಶಾಸಕರನ್ನು ಬಿಜೆಪಿ ತೆಕ್ಕೆಗೆ ತರಲು ಮತ್ತು ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಂಗ್ ಇದೇ ವೇಳೆ ಆರೋಪಿಸಿದ್ದಾರೆ. ಬಿಜೆಪಿಯಿಂದ ಸಂಪರ್ಕಿಸಲಾಗಿದೆ ಎನ್ನಲಾದ ನಾಲ್ವರು ಎಎಪಿ ಶಾಸಕರು ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
BJP offered Rs 20 crore each to 4 MLAs to switch sides Says AAP MP Sanjay Singh
News Source: 
Home Title: 

ಪಕ್ಷ ಬದಲಾಯಿಸಲು 4 ಶಾಸಕರಿಗೆ ಬಿಜೆಪಿ ತಲಾ 20 ಕೋಟಿ ರೂ. ಆಫರ್ ನೀಡಿದೆ: ಎಎಪಿ ಸಂಸದ ಸಂಜಯ್ ಸಿಂಗ್

ಪಕ್ಷ ಬದಲಾಯಿಸಲು 4 ಶಾಸಕರಿಗೆ ಬಿಜೆಪಿ ತಲಾ 20 ಕೋಟಿ ರೂ. ಆಫರ್!: AAP ಸಂಸದ ಸಂಜಯ್ ಸಿಂಗ್ ಆರೋಪ
Caption: 
ದೆಹಲಿಯಲ್ಲಿ ‘ಆಪರೇಷನ್ ಕಮಲ’..?
Yes
Is Blog?: 
No
Tags: 
Facebook Instant Article: 
Yes
Highlights: 

ದೆಹಲಿಯಲ್ಲಿ ‘ಆಪರೇಷನ್ ಕಮಲ’ ನಡೆಸುತ್ತಿದೆಯಾ ಕೇಸರಿ ಪಕ್ಷ..?

ಎಎಪಿ ಪಕ್ಷದ ನಾಲ್ವರು ಶಾಕಸರಿಗೆ ತಲಾ 20 ಕೋಟಿ ರೂ. ಆಫರ್

ಬಿಜೆಪಿ ವಿರುದ್ಧ ಎಎಪಿ ಸಂಸದ ಸಂಜಯ್ ಸಿಂಗ್ ಗಂಭೀರ ಆರೋಪ

Mobile Title: 
ಪಕ್ಷ ಬದಲಾಯಿಸಲು 4 ಶಾಸಕರಿಗೆ ಬಿಜೆಪಿ ತಲಾ 20 ಕೋಟಿ ರೂ. ಆಫರ್!: AAP ಸಂಸದ ಸಂಜಯ್ ಸಿಂಗ್ ಆರೋಪ
Puttaraj K Alur
Publish Later: 
No
Publish At: 
Wednesday, August 24, 2022 - 13:29
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
1
Is Breaking News: 
No