ಬಿಜೆಪಿ ಪರದೆ ಹಿಂದೆ ಸಿಗರೇಟ್ ಸೇದುವ ಸೀತೆ ಇದ್ದ ಹಾಗೆ - ಉಪೇಂದ್ರ ಕುಶ್ವಾಹ

 ಬಿಜೆಪಿ ವಿರುದ್ದ ವಾಗ್ದಾಳಿ ಮುಂದುವರೆಸಿದ ಆರ್ ಎಲ್ ಎಸ್ ಪಿ ನಾಯಕ ಉಪೇಂದ್ರ ಕುಶ್ವಾಹ ಈಗ ಬಿಜೆಪಿಯನ್ನು ಬ್ಯಾಕ್ ಸ್ಟೇಜ್  ಹಿಂದೆ ಸಿಗರೇಟ್ ಸೇದುವ ಸೀತೆ ಇದ್ದ ಹಾಗೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.ಈ ಹಿಂದೆ ಎನ್ಡಿಎ ಭಾಗವಾಗಿದ್ದ ಕುಶ್ವಾಹಾ 2018 ಡಿಸೆಂಬರ್ ತಿಂಗಳಲ್ಲಿ ಸರ್ಕಾರದಿಂದ ಹೊರಬಂದಿದ್ದರು.

Updated: Apr 25, 2019 , 09:17 PM IST
ಬಿಜೆಪಿ ಪರದೆ ಹಿಂದೆ ಸಿಗರೇಟ್ ಸೇದುವ ಸೀತೆ ಇದ್ದ ಹಾಗೆ - ಉಪೇಂದ್ರ ಕುಶ್ವಾಹ

ನವದೆಹಲಿ:  ಬಿಜೆಪಿ ವಿರುದ್ದ ವಾಗ್ದಾಳಿ ಮುಂದುವರೆಸಿದ ಆರ್ ಎಲ್ ಎಸ್ ಪಿ ನಾಯಕ ಉಪೇಂದ್ರ ಕುಶ್ವಾಹ ಈಗ ಬಿಜೆಪಿಯನ್ನು ಬ್ಯಾಕ್ ಸ್ಟೇಜ್  ಹಿಂದೆ ಸಿಗರೇಟ್ ಸೇದುವ ಸೀತೆ ಇದ್ದ ಹಾಗೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.ಈ ಹಿಂದೆ ಎನ್ಡಿಎ ಭಾಗವಾಗಿದ್ದ ಕುಶ್ವಾಹಾ 2018 ಡಿಸೆಂಬರ್ ತಿಂಗಳಲ್ಲಿ ಸರ್ಕಾರದಿಂದ ಹೊರಬಂದಿದ್ದರು.

"ನಾನು ಎನ್ಡಿಎ ಸರ್ಕಾರದಲ್ಲಿದ್ದಾಗ ಬಿಜೆಪಿಯನ್ನು ಒಳಗಿನಿಂದ ನೋಡಿದ್ದೇನೆ. ರಾಮ್ ಲೀಲಾದಲ್ಲಿ ಪರದೆಯನ್ನು ತೆರೆದಾಗ ವ್ಯಕ್ತಿಯೊಬ್ಬ ಸೀತಾ ಪಾತ್ರದಲ್ಲಿ ಬರುತ್ತಾನೆ.ಆಗ ರಾಮ ಲೀಲಾವನ್ನು ವಿಕ್ಷಿಸುವ ಜನರು ಗೌರವದಿಂದ ತಲೆ ಬಾಗುತ್ತಾರೆ.ಆದರೆ ಅದೇ ಸೀತಾ ಪರದೆ ಹಿಂದಗಡೆ ಹೋದಾಗ ಸಿಗರೇಟ್ ನ್ನು ಸೇದುತ್ತಿರುತ್ತಾಳೆ.ಇದೇ ರೀತಿ ಬಿಜೆಪಿ ಮುಖ ಕೂಡ, ಒಳಗಡೆ ಕೆಟ್ಟತನವನ್ನೇ ತುಂಬಿಕೊಂಡು ಹೊರಗಡೆ ಒಳ್ಳೆಯತನವನ್ನು ಪ್ರದರ್ಶಿಸುತ್ತದೆ " ಎಂದು ಕುಶ್ವಾಹಾ ಹೇಳಿದರು  
 
ಸದ್ಯ ಬಿಹಾರದಲ್ಲಿ ಮೂರು ಹಂತದ ಲೋಕಸಭಾ ಚುನಾವಣೆ ಮುಗಿದ್ದಿದ್ದು .ಇನ್ನು ನಾಲ್ಕು ಹಂತದ ಚುನಾವಣೆಗಳು ಏಪ್ರಿಲ್ 29, ಮೇ 6, 12 ಮತ್ತು 19 ರಂದು ನಡೆಯಲಿವೆ . ಮತಗಳ ಎಣಿಕೆ ಮೇ 23 ರಂದು ನಡೆಯಲಿದೆ.