ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ! ಮುಖ್ಯ ದ್ವಾರಕ್ಕೆ ಕೇಸರಿ ಬಣ್ಣ ಬಳಿದು ಪ್ರತಿಭಟನೆ

ಕಾಶ್ಮೀರಿ ಹಿಂದೂಗಳ ಬಗ್ಗೆ ಸಿಎಂ ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆ ವೇಳೆ ಬಿಜೆಪಿ ಯುವ ಮುಖಂಡರು ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. 

Written by - Ranjitha R K | Last Updated : Mar 30, 2022, 02:41 PM IST
  • ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ಪ್ರತಿಭಟನೆ
  • ಕಾಶ್ಮೀರಿ ಪಂಡಿತರ ಮೇಲಿನ ಹೇಳಿಕೆ ವಿರುದ್ಧ ಪ್ರತಿಭಟನೆ
  • ಬಿಜೆಪಿ ವಿರುದ್ಧ ಉಪ ಮುಖ್ಯಮಂತ್ರಿ ಸಿಸೋಡಿಯಾ ಆರೋಪ
ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ! ಮುಖ್ಯ ದ್ವಾರಕ್ಕೆ ಕೇಸರಿ ಬಣ್ಣ ಬಳಿದು ಪ್ರತಿಭಟನೆ   title=
ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ಪ್ರತಿಭಟನೆ (file photo)

ನವದೆಹಲಿ :  ಭಾರತೀಯ ಜನತಾ ಪಾರ್ಟಿ (ಿBJP) ಯುವ ಮೋರ್ಚಾ ಕಾರ್ಯಕರ್ತರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal)ಅವರ ಮನೆಯ ಗೇಟ್‌ಗೆ ಕೇಸರಿ ಬಣ್ಣ ಬಳಿದು ಪ್ರತಿಭಟನೆ ನಡೆಸಿದ್ದಾರೆ. BJYM ಪ್ರತಿಭಟನಾಕಾರರನ್ನು ತಡೆಯಲು ದೆಹಲಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. 

ಕಾಶ್ಮೀರಿ ಪಂಡಿತರ ಮೇಲಿನ ಹೇಳಿಕೆ ವಿರುದ್ಧ ಪ್ರತಿಭಟನೆ :
ಕಾಶ್ಮೀರಿ ಹಿಂದೂಗಳ ಬಗ್ಗೆ ಸಿಎಂ ಕೇಜ್ರಿವಾಲ್ (Aravind Kejriwal) ಹೇಳಿಕೆಗೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆ ವೇಳೆ ಬಿಜೆಪಿ (BJP)ಯುವ ಮುಖಂಡರು ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ಪ್ರತಿಭಟನೆಯಲ್ಲಿ ತೇಜಸ್ವಿ ಸೂರ್ಯ (Tejaswi Surya), ಚಾಹಲ್, ವೈಭವ್ ಸಿಂಗ್ ಸೇರಿದಂತೆ ದೆಹಲಿ ಪ್ರದೇಶ ಯುವ ಮೋರ್ಚಾದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಇದನ್ನೂ ಓದಿ :  Rahul Gandhi, : ಪಿಎಂ ಮೋದಿಯವರಿಗೆ Daily To Do List ನೀಡಿದ ರಾಹುಲ್ ಗಾಂಧಿ!

ಬಿಜೆಪಿ ವಿರುದ್ಧ ಉಪ ಮುಖ್ಯಮಂತ್ರಿ ಸಿಸೋಡಿಯಾ ಆರೋಪ :
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಪ್ರತಿಭಟನೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.   

ಪೊಲೀಸರಿಂದ ಲಘು ಲಾಠಿ ಪ್ರಹಾರ  : 
ಬಿಜೆಪಿ (BJP) ಯುವ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆಯ ವೇಳೆ ಸಿಎಂ ನಿವಾಸದ ಮೂರು ಬ್ಯಾರಿಕೇಡ್‌ಗಳನ್ನು ದಾಟಿ ಮುಖ್ಯದ್ವಾರ ತಲುಪಿದ್ದಾರೆ.  ಬಿಜೆವೈಎಂ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಇತರ ಎಲ್ಲಾ  ಕಾರ್ಯಕರ್ತರು ಮುಖ್ಯ ದ್ವಾರದಲ್ಲಿ ಕುಳಿತು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದಾದ ಬಳಿಕ ದೆಹಲಿ ಪೊಲೀಸರು ಎಲ್ಲರನ್ನು ಬಲವಂತವಾಗಿ ಎಬ್ಬಿಸಿ, ಅಲ್ಲಿಂದ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದಾರೆ. 

ಇದನ್ನೂ ಓದಿ :  ನಿಮ್ಮ PF ಬ್ಯಾಲೆನ್ಸ್ ಪರಿಶೀಲಿಸಬೇಕಾ? ಹಾಗಿದ್ರೆ, ಈ ಕೆಲಸ ಮಾಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News