ವಡಗಾಂ(ಗುಜರಾತ್) : ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಟಿವಿ ಚಾನೆಲ್ಗಳ ಚುನಾವಣೋತ್ತರ ಫಲಿತಾಂಶಗಳು ಅಸಂಬದ್ಧವೆಂದು ದಲಿತ ನಾಯಕ ಮತ್ತು ಕಾಂಗ್ರೆಸ್ನ ಬೆಂಬಲದೊಂದಿಗೆ ವಡ್ಗಾಂವ್ ಕ್ಷೇತ್ರದ ಅಭ್ಯರ್ಥಿ ಜಿಗ್ನೇಶ್ ಮೇವಾಣಿ ಭಾನುವಾರ ಹೇಳಿದ್ದಾರೆ. ಈ ಬಾರಿ ಬಿಜೆಪಿ ನಿಶ್ಚಿತವಾಗಿ ಸೋಲಲಿದೆ. ಯಾವುದೇ ಕಾರಣಕ್ಕೂ ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಾಸ್ತವವಾಗಿ, ಚುನಾವಣೋತ್ತರ ಸಮೀಕ್ಷೆಗಳು ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.
Exit Polls are nonsense. BJP is definitely going to lose this time and will not form the govt: Jignesh Mevani, Activist and candidate from Vadgam constituency #GujaratElection2017 pic.twitter.com/BCbRed4FHz
— ANI (@ANI) December 17, 2017
ಗುಜರಾತ್ನ 6 ಮತಗಟ್ಟೆಗಳಲ್ಲಿ ಇಂದು ಮರು-ಮತದಾನ ಮಾಡಲಾಗುತ್ತಿದೆ. ವಾಡಗಾಂ, ವಿರಮಂ, ಡಸ್ಕರೋಯಿ ಮತ್ತು ಸಾವಲಿ ಕ್ಷೇತ್ರಗಳು ಇದರಲ್ಲಿ ಸೇರಿವೆ. ಈ ಕೇಂದ್ರಗಳಲ್ಲಿ ಇವಿಎಂ ಗಳನ್ನು ಬ್ಲೂಟೂತ್ಗೆ ಸಂಪರ್ಕಿಸಲಾಗಿದೆ ಎಂಬ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗ ಇಂದು ಮರು ಮತದಾನ ನಡೆಸುತ್ತಿದೆ.
ಚುನಾವಣಾ ಆಯೋಗವು VVPAT ಸ್ಲಿಪ್ಗಳನ್ನು ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಳಸಲಾಗುವುದು ಎಂದು ಆದೇಶಿಸಿತ್ತು. ರಾಲಿಸಾನ್, ಪಿಲುಂಡ, ಕಟೊಸಾನ್, ಜಮ್ತಾ, ವೇವ್ಜಾಲ್ಪುರ್, ಖಾರ್ಕಿಯಾ, ಪಿಲ್ಲೋಲ್ ಮತ್ತು ಗೋಜಪುರ್ ಮತ್ತು ಸಾಂಗೀರ್ ಮತಗಟ್ಟೆಗಳಲ್ಲಿ VVPAT ಸ್ಲಿಪ್ಗಳನ್ನು ಬಳಸುವಂತೆ ಚುನಾವಣಾ ಆಯೋಗ ಆದೇಶಿಸಿದೆ.