ತಲೆಯಲ್ಲಿ ರಕ್ತಸ್ರಾವ : ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು ಜಗ್ಗಿ ವಾಸುದೇವ್

ತಲೆಯಲ್ಲಿ ರಕ್ತಸ್ರಾವದ ಕಾರಣದಿಂದ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಸದ್ಗುರು ಜಗ್ಗಿ ವಾಸುದೇವ್ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಎಂದು ಬುಧವಾರ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Written by - Zee Kannada News Desk | Last Updated : Mar 20, 2024, 11:55 PM IST
  • ಇಂದ್ರಪ್ರಸ್ಥದ ಅಪೋಲೋ ಆಸ್ಪತ್ರೆಯಲ್ಲಿ ತಲೆಯಲ್ಲಿ ರಕ್ತಸ್ರಾವ ತಡೆಯಲು ಮಾರ್ಚ್ 17 ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು.
  • ಮಾರ್ಚ್ 15 ರ ಹೊತ್ತಿಗೆ ತಲೆನೋವು ತೀವ್ರವಾದ ನಂತರ ಅವರು ಆಸ್ಪತ್ರೆಯ ಹಿರಿಯ ಸಲಹೆಗಾರ ನರರೋಗ ತಜ್ಞ ಡಾ ವಿನಿತ್ ಸೂರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ.
  • ಅವರ ಮೆದುಳು, ದೇಹ ಮತ್ತು ಪ್ರಮುಖ ಅಂಗಗಳು ಚೇತರಿಸಿಕೊಳ್ಳುತ್ತಿವೆ ಎಂದು ಆಸ್ಪತ್ರೆ ತಿಳಿಸಿದೆ.
ತಲೆಯಲ್ಲಿ ರಕ್ತಸ್ರಾವ : ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು ಜಗ್ಗಿ ವಾಸುದೇವ್  title=

Sadhguru Jaggi Vasudev : ಇಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಬುಧವಾರ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಇಂದ್ರಪ್ರಸ್ಥದ ಅಪೋಲೋ ಆಸ್ಪತ್ರೆಯಲ್ಲಿ ತಲೆಯಲ್ಲಿ ರಕ್ತಸ್ರಾವ ತಡೆಯಲು ಮಾರ್ಚ್ 17 ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಸದ್ಗುರು ವೆಂಟಿಲೇಟರ್‌ನಿಂದ ಹೊರ ಬಂದಿದ್ದಾರೆ. ಅವರ ಮೆದುಳು, ದೇಹ ಮತ್ತು ಪ್ರಮುಖ ಅಂಗಗಳು ಚೇತರಿಸಿಕೊಳ್ಳುತ್ತಿವೆ ಎಂದು ಆಸ್ಪತ್ರೆ ತಿಳಿಸಿದೆ.

ಇದನ್ನು ಓದಿ : ದಕ್ಷಿಣ ಭಾರತದ ಉಪಹಾರ ಆರೋಗ್ಯಕ್ಕೆ ಒಳ್ಳೆಯದು ! ಯಾಕೆ ಗೊತ್ತಾ

66 ವರ್ಷದ ಆಧ್ಯಾತ್ಮಿಕ ಗುರು, ಇಶಾ ಫೌಂಡೇಶನ್‌ನ ಸಂಸ್ಥಾಪ ಸದ್ಗುರು ಜಗ್ಗಿ ವಾಸುದೇವ್ ಅವರು ಪರಿಸರ ಸಂರಕ್ಷಣೆಗಾಗಿ 'ಮಣ್ಣು ಉಳಿಸಿ' ಮತ್ತು 'ನದಿಗಳನ್ನು ಉಳಿಸಿ' ಸೇರಿದಂತೆ ಹಲವು ಅಭಿಯಾನಗಳನ್ನು ಕೈಗೊಂಡಿದ್ದರು.

 ಮಾರ್ಚ್ 8 ರಂದು ಮಹಾ ಶಿವರಾತ್ರಿ ಕಾರ್ಯಕ್ರಮವನ್ನು ಸಹ ನಡೆಸಿಕೊಟ್ಟಿದ್ದರು ಆದರೆ ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರು, ತೀವ್ರ ನೋವಿನ ಹೊರತಾಗಿಯೂ, ಅವರು ತಮ್ಮ ಸಾಮಾನ್ಯ ದೈನಂದಿನ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರೆಸಿದ್ದರು  ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ : Mrunal Thakur : ಕಪ್ಪು ವರ್ಣದ ಬಟ್ಟೆಯಲ್ಲಿ ಸೀತಾ ರಾಮಂ ಬೆಡಗಿ : ಫೋಟೋಸ್ ಇಲ್ಲಿವೆ

ಮಾರ್ಚ್ 15 ರ ಹೊತ್ತಿಗೆ ತಲೆನೋವು ತೀವ್ರವಾದ ನಂತರ ಅವರು ಆಸ್ಪತ್ರೆಯ ಹಿರಿಯ ಸಲಹೆಗಾರ ನರರೋಗ ತಜ್ಞ ಡಾ ವಿನಿತ್ ಸೂರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಸೂರಿ ಅವರು ತಕ್ಷಣವೇ ಎಂಆರ್ ಐ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಎಂಆರ್ ಐನಲ್ಲಿ ತಲೆಯಲ್ಲಿ ರಕ್ತಸ್ರಾವ ಆಗುತ್ತಿರುವುದು ಕಂಡುಬಂದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News