ನವದೆಹಲಿ: ಇಂದು ರಾತ್ರಿ ಬಾನಂಗಳದಲ್ಲಿ ಕೌತುಕಗಳಲ್ಲಿ ಒಂದಾದ ನೀಲಿ ಚಂದ್ರ (Blue moon) ಗೋಚರಿಸಲಿದ್ದಾನೆ. ರಾತ್ರಿ ಸರಿಯಾಗಿ 8. 19ಕ್ಕೆ ಬಾನಿನಲ್ಲಿ ನೀಲಿ ಚಂದ್ರನ ದರ್ಶನವಾಗಲಿದೆ.
ಸಾಮಾನ್ಯವಾಗಿ ತಿಂಗಳಿಗೆ ಒಂದು ಹುಣ್ಣಿಮೆ ಬರುತ್ತದೆ.ಈ ತಿಂಗಳಲ್ಲಿ ಇದು ಎರಡನೇ ಹುಣ್ಣಿಮೆ. ಅಂದರೆ ಸಾಮಾನ್ಯವಾಗಿ ವರ್ಷಕ್ಕೆ 12 ಹುಣ್ಣಿಮೆಯಾದರೆ ಈ ಬಾರಿ ವರ್ಷಕ್ಕೆ 13 ಹುಣ್ಣಿಮೆ ಬರಲಿದೆ.
VIDEO: ಬಾನಂಗಳದಲ್ಲಿ ಗೋಚರಿಸಲಿದ್ದಾನೆ 'ನೀಲಿ ಚಂದಿರ'!
ಏನಿದು ಬ್ಲೂಮೂನ್ …?
150 ವರ್ಷಗಳ ನಂತರ ಆಕಾಶದಲ್ಲಿ ಸೂಪರ್ ಬ್ಲೂ ಬ್ಲಡ್ ಮೂನ್, ಈ ಬಗ್ಗೆ ನೀವು ತಿಳಿಯಲೇ ಬೇಕಾದ ಕೆಲವು ಸಂಗತಿಗಳು...
ತಿಂಗಳಲ್ಲಿ ಒಂದು ಹುಣ್ಣಿಮೆ ಸಂಭವಿಸಿದ ನಂತರ ಇನ್ನೊಂದು ಹುಣ್ಣಿಮೆ ಸಂಭವಿಸಬೇಕಾದರೆ 29 ದಿನ 44 ನಿಮಿಷ 38 ಸೆಕೆಂಡ್ ಆಗಿರುತ್ತದೆ. ಉಳಿದ ಸಮಯ ಹಾಗೆ ಸೇರಿಕೊಂಡು ಮುಂದೊಂದು ದಿನ ಯಾವುದಾದರೂ ಒಂದು ತಿಂಗಳಲ್ಲಿ ಎರಡು ಹುಣ್ಣಿಮೆ ಬರುತ್ತದೆ. ಇದೇ ಬ್ಲೂಮೂನ್ ಡೇ. ಸಾಮ,ನ್ಯ ಭಾಷೆಯಲ್ಲಿ ಹೇಳುವುದಾದರೆ ಒಂದೇ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆ..ಹಿಂದೆ 2018ರ ಜನವರಿ 31 ಮತ್ತು ಮಾರ್ಚ್ 31ಕ್ಕೆ ನೀಲಿಚಂದ್ರನ ದರ್ಶನವಾಗಿತ್ತು. ಇದಾದ ನಂತರ ಇಂದು ರಾತ್ರಿ ನೀಲಿ ಚಂದ್ರ ಗೋಚರಿಸಲಿದ್ದಾನೆ.ಮುಂದಿನ ಬ್ಲೂ ಮೂನ್ ಡೇ 2023ರಲ್ಲಿ ಕಾಣಿಸಿಕೊಳ್ಳಲಿದೆ.