ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ ಕಾರ್ ಬಿಡುಗಡೆ; ವೈಶಿಷ್ಟ್ಯತೆಗಳೇನು ಗೊತ್ತಾ?

ಎರಡು ಲೀಟರ್ ಪೆಟ್ರೋಲ್ ಇಂಜಿನ್ ಇರುವ ಬಿಎಂಡಬ್ಲ್ಯು 530ಐ ಕಾರು  242 HP ಪವರ್ ಜನರೇಟ್ ಮಾಡುತ್ತದೆ.

Last Updated : Mar 29, 2019, 03:41 PM IST
ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ ಕಾರ್ ಬಿಡುಗಡೆ; ವೈಶಿಷ್ಟ್ಯತೆಗಳೇನು ಗೊತ್ತಾ? title=

ನವದೆಹಲಿ: ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯು ತನ್ನ 530ಐ  ಎಂ ಸ್ಪೋರ್ಟ್ ಕಾರನ್ನು ಗುರುವಾರ ಬಿಡುಗಡೆ ಮಾಡಿದೆ. ಇದರ ಶೋ ರೂಮ್ ಬೆಲೆ 59.2 ಲಕ್ಷ ರೂ.ಗಳು.

ಈ ಕಾರಿನ ಬಗ್ಗೆ ಮಾಹಿತಿ ನೀಡಿರುವ ಬಿಎಂಡಬ್ಲ್ಯು ಸಂಸ್ಥೆ, ಪೆಟ್ರೋಲ್ ಎಂಜಿನ್ ಇರುವ ಈ ಕಾರನ್ನು ಚೆನ್ನೈ ಘಟಕದಲ್ಲಿ ಸಿದ್ಧಪಡಿಸಲಾಗಿದ್ದು ಬಿಎಸ್-6 ಗುಣಮಟ್ಟವನ್ನು ಹೊಂದಿದೆ. ಈಗಾಗಲೇ ದೇಶದಲ್ಲಿ ಡೀಸೆಲ್ ಇಂಜಿನ್ ಕಾರು ಮಾರಾಟಕ್ಕೆ ಲಭ್ಯವಿದೆ.

ಇದರಲ್ಲಿ ಡಿಸ್'ಪ್ಲೇ ಮಾದರಿಯ ಟೆಕ್ನಾಲಜಿ ಇದ್ದು, ಚಾಲಕ ಸದಾ ಕಾರಿನೊಂದಿಗೆ ಸಂಪರ್ಕದಲ್ಲಿರಲು ಸಹಕರಿಸುತ್ತದೆ. ಸುರಕ್ಷತೆಗೆ ಸಂಬಂಧಿಸಿದಂತೆ ಆರು ಏರ್ ಬ್ಯಾಗ್, ಎಬಿಎಸ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಲಾಗಿದೆ. ಎರಡು ಲೀಟರ್ ಪೆಟ್ರೋಲ್ ಇಂಜಿನ್ ಇರುವ ಬಿಎಂಡಬ್ಲ್ಯು 530ಐ ಕಾರು  242 HP ಪವರ್ ಜನರೇಟ್ ಮಾಡುತ್ತದೆ. ಇದು ಕೇವಲ 6.2 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿ.ಮೀ. ವೇಗವನ್ನು ಪಡೆಯಲಿದೆ. 

ಈ ಬಿಎಂಡಬ್ಲ್ಯೂ ಕಾರು  ಗರಿಷ್ಠ ಶಕ್ತಿ 252hp, 5200rpm ಮತ್ತು 1450-4800 rpm ನಲ್ಲಿ ಗರಿಷ್ಠ 350Nm ಟಾರ್ಕ್ ಉತ್ಪಾದಿಸುತ್ತದೆ.  ಬಿಎಂಡಬ್ಲ್ಯು 530 ಐ ಸ್ಪೋರ್ಟ್ ಲೈನ್ ಕಾರಿನ ಬೆಲೆ 53.80 ಲಕ್ಷ ರೂ., 520 ಡಿ ಲಕ್ಷುರಿ ಲೈನ್ ವೆಚ್ಚ 58.70 ಲಕ್ಷ ರೂ. ಮತ್ತು 530 ಡಿಎಂ ಸ್ಪೋರ್ಟ್ ಕಾರಿನ ಬೆಲೆ 66.20 ಲಕ್ಷ ರೂ.ಗಳಾಗಿವೆ.
 

Trending News