ತುಳುನಾಡಿಗೆ ಬಂದು ಕೊರಗಜ್ಜ ದೈವದ ಹರಕೆ ತೀರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್! ಫೋಟೋ ವೈರಲ್

Katrina Kaif: ಇದೇ ಸಂದರ್ಭದಲ್ಲಿ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರಿನ ಪ್ರಖ್ಯಾತ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Written by - Bhavishya Shetty | Last Updated : Jul 15, 2024, 08:36 PM IST
    • ಮಂಗಳೂರಿನ ಪ್ರಖ್ಯಾತ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದ ಕತ್ರಿನಾ ಕೈಫ್
    • ಕೊರಗಜ್ಜ ಸ್ವಾಮಿಯ ಆಶೀರ್ವಾದ ಪಡೆಯಲು ನಟಿ ಬಂದಿದ್ದಾರೆ
    • ಕತ್ರಿನಾ ಕೈಫ್ ಅವರ ಫೋಟೋವನ್ನು ಶೇರ್ ಮಾಡಿಕೊಂಡಿರುವ ಫ್ಯಾನ್ ಪೇಜ್
ತುಳುನಾಡಿಗೆ ಬಂದು ಕೊರಗಜ್ಜ ದೈವದ ಹರಕೆ ತೀರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್! ಫೋಟೋ ವೈರಲ್ title=
File Photo

Katrina Kaif: ಬಾಲಿವುಡ್ ನಟಿ ಕತ್ರಿನಾ ಕೈಫ್ ಕಳೆದ ಕೆಲ ಸಮಯದಿಂದ ಪಾಪರಾಜಿಗಳ ಕ್ಯಾಮರಾ ಕಣ್ಣಿನಿಂದ ದೂರ ಉಳಿದಿದ್ದಾರೆ. ಆದರೆ ಇತ್ತೀಚಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಪತಿ ವಿಕ್ಕಿ ಕೌಶಲ್ ಜೊತೆ ಮದುವೆಯಲ್ಲಿ ಭಾಗವಹಿಸಿದ್ದರು.

ಆದರೆ ಇದೇ ಸಂದರ್ಭದಲ್ಲಿ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರಿನ ಪ್ರಖ್ಯಾತ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಎಲ್ಲಾ ಫಾರ್ಮಾಟ್’ನಿಂದ ನಿವೃತ್ತಿ ಘೋಷಿಸುತ್ತಾರೆಯೇ ರೋಹಿತ್ ಶರ್ಮಾ? ಸ್ಪಷ್ಟನೆ ನೀಡಿದ ಕ್ಯಾಪ್ಟನ್

ಜುಲೈ 16 ರಂದು ಕತ್ರಿನಾ ಕೈಫ್ ಹುಟ್ಟುಹಬ್ಬ. ಹೀಗಿರುವಾಗ ಈ ವಿಶೇಷ ದಿನಕ್ಕೂ ಮುನ್ನ ಕೊರಗಜ್ಜ ಸ್ವಾಮಿಯ ಆಶೀರ್ವಾದ ಪಡೆಯಲು ನಟಿ ಬಂದಿದ್ದಾರೆ ಎನ್ನಲಾಗುತ್ತಿದೆ.

ಕತ್ರಿನಾ ಫೋಟೋ ವೈರಲ್

ಕತ್ರಿನಾ ಕೈಫ್ ಅವರ ಫೋಟೋವನ್ನು ಶೇರ್ ಮಾಡಿಕೊಂಡಿರುವ ಫ್ಯಾನ್ ಪೇಜ್, ನಟಿ ಇತ್ತೀಚೆಗೆ ತೊಂದರೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ತೀರಿಸಿ ಆಶೀರ್ವಾದ ಪಡೆದಿದ್ದಾರೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: ವಯಸ್ಸು 45 ದಾಟಿದ್ರೂ ಇನ್ನೂ ಸಿಂಗಲ್ ಆಗಿರೋದೇಕೆ 'ಸೀತಾರಾಮ' ಧಾರಾವಾಹಿ ನಟಿ ಪೂಜಾ ಲೋಕೇಶ್?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕತ್ರಿನಾ ಕೈಫ್ ಗಮನ ಸೆಳೆದಿದ್ದರು. ನಟಿಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಂಬಾನಿ ಕುಟುಂಬದ ಅದ್ಧೂರಿ ಮದುವೆಗೆ ಕತ್ರಿನಾ ಕೈಫ್ ಸುಂದರವಾದ ಕೆಂಪು ಸೀರೆಯನ್ನು ಧರಿಸಿ ಆಗಮಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News