ಸೂರತ್: ಸೂರತ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರೋಡ್ ಶೋ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಚುನಾವಣಾ ರೋಡ್ ಶೋನಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್ ಕಾರಿನಲ್ಲಿ ಸಂಚರಿಸುತ್ತಿದ್ದರು. ತಮ್ಮ ಅಭ್ಯರ್ಥಿಗಳ ಪರ ಮತಪ್ರಚಾರ ನಡೆಸುತ್ತಿದ್ದ ವೇಳೆ ಜನರಿಂದ ಶುಭಾಶಯಗಳನ್ನು ಸ್ವೀಕರಿಸುತ್ತಿದ್ದರು.
ರೋಡ್ ಶೋ ನಡೆಸುತ್ತಿದ್ದ ಕೇಜ್ರಿವಾಲ್ ಮೇಲೆ ಇದ್ದಕ್ಕಿದ್ದಂತೆಯೇ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ದೆಹಲಿ ಸಿಎಂಗೆ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ಕಲ್ಲು ತೂರಾಟ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಲ್ಲು ತೂರಾಟ ನಡೆಸಿದರೂ ಕೇಜ್ರಿವಾಲ್ ರೋಶ್ ಶೋ ಮುಂದುವರೆಸಿದರು.
ಇದನ್ನೂ ಓದಿ: Viral Video : ತನ್ನ ಪಾಡಿಗೆ ಮಲಗಿರುವ ನಾಯಿಗೆ ಕಾಟ ಕೊಡುತ್ತಿರುವ ಕೋತಿ !
ಸೂರತ್‌ನಲ್ಲಿ ಆಪ್‍ಗೆ 7-8 ಸ್ಥಾನ
ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಇಂದು ಸೂರತ್‌ನಲ್ಲಿ ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ‘ವಜ್ರ ನಗರಿ’ ಸೂರತ್‌ನಲ್ಲಿ 12 ಸ್ಥಾನಗಳ ಪೈಕಿ ಏಳರಿಂದ ಎಂಟು ಸ್ಥಾನಗಳನ್ನು ತಮ್ಮ ಪಕ್ಷ ಗೆಲ್ಲುತ್ತದೆ. ನಮ್ಮ ಪಕ್ಷವೇ ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಐದಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ ಎಂದು ವರದಿಯಾಗಿತ್ತು. ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಕೋರ್ ಮಾಡಲು ವಿಫಲವಾದ ತಮ್ಮ ಪಕ್ಷವು ಈ ಬಾರಿ 92ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದೇ ವೇಳೆ ತಮ್ಮ ಭವಿಷ್ಯವಾಣಿಯನ್ನು ಅವರು ಕಾಗದದ ಮೇಲೆ ಬರೆದು ಮಾಧ್ಯಮದವರಿಗೆ ತೋರಿಸಿದರು.
ಇದನ್ನೂ ಓದಿ: Monkey Video : ಕೋತಿ ಕೈಗೆ ಶುಂಠಿ ಕೊಟ್ರೆ ಏನಾಗುತ್ತೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ!
ಸೂರತ್‌ನಲ್ಲಿ ಎಎಪಿ ಏಳರಿಂದ ಎಂಟು ಸ್ಥಾನಗಳನ್ನು ಪಡೆಯಲಿದೆ. ಆಪ್ ಪಕ್ಷದ ಗುಜರಾತ್ ಮುಖ್ಯಸ್ಥರಾಗಿರುವ 33 ವರ್ಷದ ಗೋಪಾಲ್ ಇಟಾಲಿಯಾ ಅವರು ದೊಡ್ಡ ಅಂತರದಿಂದ ಗೆಲ್ಲುತ್ತಾರೆ. ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಮತ್ತು ಮಾಜಿ ಪಾಟಿದಾರ್ ಕೋಟಾ ನಾಯಕ ಅಲ್ಪೇಶ್ ಕಥಿರಿಯಾ ಕೂಡ ಗೆಲ್ಲುತ್ತಾರೆ ಅಂತಾ ಕೇಜ್ರಿವಾಲ್ ಹೇಳಿದ್ದಾರೆ.
‘ರಾಜ್ಯದಲ್ಲಿರುವ ‘ಭಯ ಮತ್ತು ಬೆದರಿಕೆಯ ವಾತಾವರಣ’ದಿಂದ ವ್ಯಾಪಾರಿಗಳನ್ನು ಮುಕ್ತಗೊಳಿಸುವುದಾಗಿ ಭರವಸೆ ನೀಡಿದ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸುವಂತೆ ಗುಜರಾತ್‌ನ ಮಹಿಳೆಯರು ಮತ್ತು ಯುವಕರಲ್ಲಿ ಮನವಿ ಮಾಡಿದರು. ಯಾವುದೇ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಲು ಅನುಮತಿಸುವುದಿಲ್ಲ. ನಾವು ಉಚಿತ ಮತ್ತು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತೇವೆ. ಎಎಪಿಯಿಂದ ಮಾತ್ರ ನಿರುದ್ಯೋಗ ಸ್ಥಿತಿಯನ್ನು ಮುಕ್ತಗೊಳಿಸಬಹುದು ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.