ಗುಜರಾತ್‌ನ ಕಚ್ ನಲ್ಲಿ ಪಾಕಿಸ್ತಾನದ ಮೀನುಗಾರರ ಎರಡು ದೋಣಿಗಳು ವಶ

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ತಂಡವು ಹರಾಮಿ ನಲ್ಲಾ ಪ್ರದೇಶದಲ್ಲಿ ಎರಡು ಪಾಕಿಸ್ತಾನದ ಮೀನುಗಾರಿಕೆ ದೋಣಿಗಳನ್ನು ಗುಜರಾತ್‌ನ ರನ್ ಆಫ್ ಕಚ್‌ನಲ್ಲಿ ಶನಿವಾರ ವಶಪಡಿಸಿಕೊಂಡಿದೆ.

Last Updated : Aug 25, 2019, 01:25 PM IST
ಗುಜರಾತ್‌ನ ಕಚ್ ನಲ್ಲಿ ಪಾಕಿಸ್ತಾನದ ಮೀನುಗಾರರ ಎರಡು ದೋಣಿಗಳು ವಶ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ತಂಡವು ಹರಾಮಿ ನಲ್ಲಾ ಪ್ರದೇಶದಲ್ಲಿ ಎರಡು ಪಾಕಿಸ್ತಾನದ ಮೀನುಗಾರಿಕೆ ದೋಣಿಗಳನ್ನು ಗುಜರಾತ್‌ನ ರನ್ ಆಫ್ ಕಚ್‌ನಲ್ಲಿ ಶನಿವಾರ ವಶಪಡಿಸಿಕೊಂಡಿದೆ.

ಸಿಂಗಲ್ ಎಂಜಿನ್ ದೋಣಿಗಳನ್ನು ವಶಪಡಿಸಿಕೊಂಡ ನಂತರ, ಬಿಎಸ್ಎಫ್ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು."ಆಗಸ್ಟ್ 24 ರಂದು, ಬೆಳಿಗ್ಗೆ 06:30 ರ ಸುಮಾರಿಗೆ,ಹರಾಮಿ ನಲ್ಲಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಗಡಿ ಭದ್ರತಾ ಪಡೆಯ ಗಸ್ತು ತಿರುಗುತ್ತಿದ್ದ, 02 ಸಿಂಗಲ್ ಎಂಜಿನ್ ಅಳವಡಿಸಿದ ಪಾಕಿಸ್ತಾನಿ ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿದೆ" ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಶೋಧದ ವೇಳೆ ಆ ಪ್ರದೇಶದಿಂದ  ಯಾವುದೇ ಅನುಮಾನಾಸ್ಪದವಸ್ತು ದೊರೆತಿಲ್ಲ ಎನ್ನಲಾಗಿದೆ.
 

Trending News