ಪಂಜಾಬ್ ನ ಗುರ್ದಸ್ಪುರ್ ಲೋಕಸಭಾ & ಕೇರಳದ ವೆಂಗರಾ ವಿಧಾನಸಭೆಗೆ ಅ.11 ರಂದು ಉಪ ಚುನಾವಣೆ

ಪಂಜಾಬ್ನ ಗುರ್ದಸ್ಪುರ್ ಲೋಕಸಭಾ ಕ್ಷೇತ್ರ ಮತ್ತು ಕೇರಳದ ವೆಂಗರಾ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 11, 2017 ರಂದು ಉಪಚುನಾವಣೆ ನಡೆಯಲಿದ್ದು ಅಕ್ಟೋಬರ್ 15, 2017 ರಂದು ಮತ ಎಣಿಕೆ ನಡೆಯಲಿದೆ.

Last Updated : Sep 14, 2017, 01:25 PM IST
ಪಂಜಾಬ್ ನ ಗುರ್ದಸ್ಪುರ್ ಲೋಕಸಭಾ & ಕೇರಳದ ವೆಂಗರಾ ವಿಧಾನಸಭೆಗೆ ಅ.11 ರಂದು ಉಪ   ಚುನಾವಣೆ title=

ನವ ದೆಹಲಿ: ಪಂಜಾಬ್ನ ಗುರ್ದಸ್ಪುರ್ ಲೋಕಸಭಾ ಕ್ಷೇತ್ರ ಮತ್ತು ಕೇರಳದ ವೆಂಗರಾ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 11, 2017 ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಯೋಗಾ ತಿಳಿಸಿದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ತುಂಬಲು ಉಪಚುನಾವಣೆ ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಲೋಕಸಭಾ ಕ್ಷೇತ್ರಕ್ಕೆ ಸೆಪ್ಟಂಬರ್ 15 ರಂದು ನೋಟಿಸ್ ನೀಡಲಾಗುವುದು. ನಾಮನಿರ್ದೇಶನಗಳನ್ನು ಸಲ್ಲಿಸುವ ಕೊನೆಯ ದಿನಾಂಕ ಸೆಪ್ಟೆಂಬರ್ 22 ರಂದು ನಡೆಯಲಿದೆ ಎಂದು ಪಂಜಾಬ್ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಹಿರಿಯ ನಟ ಮತ್ತು ಬಿಜೆಪಿ ಸಂಸದ ವಿನೋದ್ ಖನ್ನಾ ಅವರು ಕ್ಯಾನ್ಸರ್ ಕಾರಣದಿಂದಾಗಿ ಏಪ್ರಿಲ್ನಲ್ಲಿ ನಿಧನರಾದರು. ಇದರಿಂದಾಗಿ ಗುರ್ದಸ್ಪುರ್ ನಲ್ಲಿ ಖಾಲಿ ಆಗಿರುವ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ  ನಡೆಸಲಾಗುತ್ತಿದೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಿ.ಕೆ.ಕುಂಹಲಿಕುಟ್ಟಿ ಏಪ್ರಿಲ್ನಲ್ಲಿ ಮಲಪ್ಪುರಂ ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದ ನಂತರ ಕೇರಳದ ವೆಂಗರಾ ವಿಧಾನ ಸಭಾ ಕ್ಷೇತ್ರವು ಖಾಲಿಯಾಗಿತ್ತು.

Trending News