ಪೌರತ್ವ ತಿದ್ದುಪಡಿ ಮಸೂದೆ-2019 ಬಗ್ಗೆ ಇಮ್ರಾನ್ ಹೇಳಿಕೆಗೆ ಭಾರತದ ತಿರುಗೇಟು

ಪೌರತ್ವ ತಿದ್ದುಪಡಿ ಮಸೂದೆ-2019ಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತ್ಯುತ್ತರ ನೀಡಿದೆ. ಇಮ್ರಾನ್ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ ಪಾಕ್ ಭಾರತದ ಆಂತರಿಕ ವಿಷಯಗಳಲ್ಲಿ ತಲೆ ಹಾಕುವುದನ್ನು ಬಿಟ್ಟು, ತನ್ನಲ್ಲಿರುವ ಅಲ್ಪಸಂಖ್ಯಾತರ ಕುರಿತು ಗಮನ ಹರಿಸಬೇಕು ಎಂದಿದೆ.

Updated: Dec 12, 2019 , 07:58 PM IST
ಪೌರತ್ವ ತಿದ್ದುಪಡಿ ಮಸೂದೆ-2019 ಬಗ್ಗೆ ಇಮ್ರಾನ್ ಹೇಳಿಕೆಗೆ ಭಾರತದ ತಿರುಗೇಟು

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ-2019ರ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆಗೆ ಭಾರತ ತೀಕ್ಷ ಪ್ರತ್ಯುತ್ತರ ನೀಡಿದೆ. ಇಮ್ರಾನ್ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ ಪಾಕ್ ಭಾರತದ ಆಂತರಿಕ ವಿಷಯಗಳಲ್ಲಿ ತಲೆ ಹಾಕುವುದನ್ನು ಬಿಟ್ಟು, ತನ್ನಲ್ಲಿರುವ ಅಲ್ಪಸಂಖ್ಯಾತರ ಕುರಿತು ಗಮನ ಹರಿಸಬೇಕು ಎಂದಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದು, ಪಾಕ್ ಪ್ರಧಾನಿಯ ಪ್ರತಿಯೊಂದು ಹೇಳಿಕೆಗೆ ಉತ್ತರಿಸುವ ಅಗತ್ಯವಿಲ್ಲ ಎಂದಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಬಹುತೇಕ ಹೇಳಿಕೆಗಳಿಗೆ ಯಾವುದೇ ಆಧಾರ ಇರುವುದಿಲ್ಲ ಎಂದಿದ್ದಾರೆ.

ಇದೇ ವೇಳೆ 'ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅನಗತ್ಯ ಹೇಳಿಕೆಗಳನ್ನು ನೀಡುವ ಬದಲು ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರ ಸ್ಥಿತಿ-ಗತಿಗಳ ಕಡೆಗೆ ಗಮನಹರಿಸಬೇಕು. ಭಾರತದ ಆಂತರಿಕ ವಿಷಯಗಳ ಕುರಿತು ಹೇಳಿಕೆಗಳಿಂದ ನೀಡುವುದರಿಂದ ಹಿಂದೆ ಸರಿಯಬೇಕು" ಎಂದು ರವೀಶ್ ಕುಮಾರ್ ಇಮ್ರಾನ್ ಗೆ ಸಲಹೆ ನೀಡಿದ್ದಾರೆ. ಬಾಂಗ್ಲಾದೇಶದ ವಿದೇಶಾಂಗ ಸಚಿವರಾಗಿರುವ ಅಬ್ದುಲ್ ಮೊಮೆನ್ ಅವರು ಭಾರತ ಭೇಟಿಯಿಂದ ಹಿಂದೆ ಸರೆದಿರುವುದರ ಕುರಿತೂ ಕೂಡ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ, " ಬಾಂಗ್ಲಾದೇಶದ ಜೊತೆ ಭಾರತ ಉತ್ತಮ ಸಂಬಂಧ ಹೊಂದಿದ್ದು, ಉಭಯ ದೇಶಗಳ ಮುಖಂಡರು ನೀಡಿರುವ ಜಂಟಿ ಹೇಳಿಕೆ ಪ್ರಕಾರ, ಇದು ಎರಡೂ ದೇಶಗಳ ನಡುವಿನ ಬಾಂಧವ್ಯದ ಸುವರ್ಣ ಕಾಲವಾಗಿದೆ" ಎಂದಿದ್ದಾರೆ.