ಜವಳಿ ಕ್ಷೇತ್ರಕ್ಕೆ 10,683 ಕೋಟಿ ರೂ. ಪ್ರೋತ್ಸಾಹ ಧನ: ನೀವು ತಿಳಿದುಕೊಳ್ಳಬೇಕಾದದ್ದು...

ಈ ಯೋಜನೆಯಡಿ10,683 ಕೋಟಿ ರೂ. ಮೊತ್ತದ ಪ್ರೋತ್ಸಾಹವನ್ನು 5 ವರ್ಷಗಳ ಕಾಲ ಜವಳಿ ವಲಯದ ಉತ್ಪಾದನೆಗೆ ಒದಗಿಸಲಾಗುತ್ತದೆ.

Written by - Puttaraj K Alur | Last Updated : Sep 8, 2021, 04:45 PM IST
  • ಜವಳಿ ಕ್ಷೇತ್ರಕ್ಕೂ ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ(PLI) ಯೋಜನೆಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ
  • ದೇಶೀಯ ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವ ಗುರಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
  • ಈ ಯೋಜನೆಯಡಿ 10,683 ಕೋಟಿ ರೂ. ಮೊತ್ತದ ಪ್ರೋತ್ಸಾಹವನ್ನು 5 ವರ್ಷಗಳ ಕಾಲ ಒದಗಿಸಲಾಗುತ್ತದೆ
ಜವಳಿ ಕ್ಷೇತ್ರಕ್ಕೆ 10,683 ಕೋಟಿ ರೂ. ಪ್ರೋತ್ಸಾಹ ಧನ: ನೀವು ತಿಳಿದುಕೊಳ್ಳಬೇಕಾದದ್ದು... title=
ಜವಳಿ ಕ್ಷೇತ್ರಕ್ಕೆ ಪಿಎಲ್‌ಐ ಯೋಜನೆ ರೂಪಿಸಲಾಗಿದೆ (Photo Courtesy: @Zee News)

ನವದೆಹಲಿ: ದೇಶೀಯ ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜವಳಿ ಕ್ಷೇತ್ರ(Textile Sector)ಕ್ಕೆ 10,683 ಕೋಟಿ ರೂ. ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ (PLI) ಯೋಜನೆ ರೂಪಿಸಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅನುರಾಗ್ ಠಾಕೂರ್, ದೇಶೀಯ ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವ ಗುರಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

‘ಜವಳಿ ಕ್ಷೇತ್ರ(Textile Sector))ಕ್ಕೂ ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ(PLI) ಯೋಜನೆಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿದೆ’ ಅಂತಾ ಸಚಿವ ಅನುರಾಗ್ ಠಾಕೂರ್ ತಿಳಿಸಿದರು. ಈ ಯೋಜನೆಯಡಿ10,683 ಕೋಟಿ ರೂ. ಮೊತ್ತದ ಪ್ರೋತ್ಸಾಹವನ್ನು 5 ವರ್ಷಗಳ ಕಾಲ ಜವಳಿ ವಲಯದ ಉತ್ಪಾದನೆಗೆ ಒದಗಿಸಲಾಗುತ್ತದೆ.

ಇದನ್ನೂ ಓದಿ: ಪ್ಪಿ ಬೇರೆಯವರ ಖಾತೆಗೆ ಹಣ ಟ್ರಾನ್ಸ್ಫರ್ ಆದರೆ ತಕ್ಷಣ ಈ ಕೆಲಸ ಮಾಡಿ, ದುಡ್ಡು ವಾಪಸ್ ಸಿಗಲಿದೆ

MMF (ಮಾನವ ನಿರ್ಮಿತ ಫೈಬರ್) ಉಡುಪು, MMF ಫ್ಯಾಬ್ರಿಕ್ಸ್ ಮತ್ತು ತಾಂತ್ರಿಕ ಜವಳಿ ಉತ್ಪನ್ನಗಳು ಸೇರಿ 10 ವಿಭಾಗಗಳನ್ನು ಪಿಎಲ್‌ಐ ಯೋಜನೆ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. 2021-22ನೇ ಸಾಲಿನ ಬಜೆಟ್‌ನಲ್ಲಿ ಸುಮಾರು 1.97 ಲಕ್ಷ ಕೋಟಿ ರೂ.ವನ್ನು PLI ಯೋಜನೆಯಡಿ(PLI Scheme) ಅನುಷ್ಠಾನಗೊಳಿಸುವುದಾಗಿ ತಿಳಿಸಲಾಗಿತ್ತು. ಇದರ ಅಂಗವಾಗಿ ಜವಳಿ ಉದ್ಯಮಕ್ಕೂ ಈ ಯೋಜನೆಯನ್ನೂ ವಿಸ್ತರಿಸಲಾಗಿದೆ.

ಇದನ್ನೂ ಓದಿ: Girls Permitted To Join NDA: ಸಶಸ್ತ್ರ ಪಡೆಗಳಲ್ಲಿನ ತಾರತಮ್ಯಕ್ಕೆ ತೆರೆ, NDA ಮೂಲಕ ಮಹಿಳೆಯರಿಗೆ ಎಂಟ್ರಿ

PLI ಯೋಜನೆ ಜವಳಿ ವಲಯಕ್ಕೆ ಹೇಗೆ ಪ್ರಯೋಜನ ನೀಡುತ್ತದೆ..?

1) MMF (ಮಾನವ ನಿರ್ಮಿತ ಫೈಬರ್) ಉಡುಪು, MMF ಫ್ಯಾಬ್ರಿಕ್ಸ್ ಮತ್ತು ತಾಂತ್ರಿಕ ಜವಳಿ ಉತ್ಪನ್ನಗಳು ಸೇರಿ 10 ವಿಭಾಗಗಳನ್ನು PLI ಯೋಜನೆ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.

2) 5 ವರ್ಷಗಳಲ್ಲಿ 19,000 ಕೋಟಿ ರೂ. ಹೂಡಿಕೆಯನ್ನು ಮಾಡಲಾಗುತ್ತದೆ.

3) ಇದು ನೇರವಾಗಿ 7.5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುತ್ತದೆ ಮತ್ತು ಇತರ ಚಟುವಟಿಕೆಗಳ ಮೂಲಕ ಅನೇಕ ಪರೋಕ್ಷ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದೆ.

4) ಭಾರತೀಯ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ.

5) ಈ ಯೋಜನೆಯು ಜವಳಿ ವಲಯದಲ್ಲಿ ಹೆಚ್ಚು ಹೆಚ್ಚು ಮಹಿಳೆಯರ ಭಾಗವಹಿಸುವಿಕೆಗೆ ದಾರಿ ಮಾಡಿಕೊಡುತ್ತದೆ.

6) ಇದು ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಶ್ರೇಣಿ -3 ಮತ್ತು ಶ್ರೇಣಿ -4ರ ಪಟ್ಟಣಗಳಲ್ಲಿ ಹೆಚ್ಚಿನ ಆದ್ಯತೆಯ ಹೂಡಿಕೆಯನ್ನು ಕೈಗೊಳ್ಳಲು ಸಾಧ್ಯವಾಗಿಸುತ್ತದೆ.

7) PLI ಯೋಜನೆಯು ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಗುಜರಾತ್‌ನಂತಹ ರಾಜ್ಯಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

8) PLI 13 ವಲಯಗಳ ಯೋಜನೆಯ ಒಟ್ಟಾರೆ ಘೋಷಣೆಯ ಭಾಗವಾಗಿದ್ದು, ಈ ಹಿಂದೆ ಕೇಂದ್ರ ಬಜೆಟ್ 2021-22ರ ಅವಧಿಯಲ್ಲಿ 1.97 ಲಕ್ಷ ಕೋಟಿ ರೂ. ಅನುಷ್ಠಾನಗೊಳಿಸುವುದಾಗಿ ತಿಳಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News