CBSE Board Exam 2021: Datesheet ಜಾರಿಯಾಗಿದೆಯೇ? ಇಲ್ಲಿದೆ ಸರಿಯಾದ ಮಾಹಿತಿ

ಸಾಮಾಜಿಕ ಮಾಧ್ಯಮಗಳಲ್ಲಿ CBSE 10ನೇ ಮತ್ತು 12ನೇ ತರಗತಿಯ ಪರೀಕ್ಷಾ ಟೈಮ್ ಟೇಬಲ್ (CBSE Board Exam 2021)ಜಾರಿಯಾದ ಸಂದೇಶ ಭಾರಿ ವೈರಲ್ ಆಗುತ್ತಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ Datesheet ನಕಲಿಯಾಗಿದೆ ಎಂದು CBSE ಸ್ಪಷ್ಟಪಡಿಸಿದೆ.

Last Updated : Dec 11, 2020, 06:29 PM IST
  • ಸಾಮಾಜಿಕ ಮಾಧ್ಯಮಗಳಲ್ಲಿ CBSE ಡೇಟ್ ಶೀಟ್ ವೈರಲ್.
  • ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ PIB.
  • ಡೇಟ್ ಶೀಟ್ ನಕಲಿಯಾಗಿದೆ ಎಂದ ಪ್ರೆಸ್ ಇನ್ಫಾರ್ಮಶನ್ ಬ್ಯೂರೋ.
CBSE Board Exam 2021: Datesheet ಜಾರಿಯಾಗಿದೆಯೇ? ಇಲ್ಲಿದೆ ಸರಿಯಾದ ಮಾಹಿತಿ title=
CBSE Board Exam 2021

CBSE Board Exam 2021:ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳ ಕುರಿತು ಏಳುತ್ತಿರುವ ಊಹಾಪೋಹಗಳ ನಡುವೆ ಇದೀಗ CBSE Board Exam 2021 ನ 10ನೇ ಹಾಗೂ 12ನೇ ತರಗತಿಗಳ ಪರೀಕ್ಷೆ ಕುರಿತಾದ ನಕಲಿ ಡೇಟ್ ಶೀಟ್ ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. PIB ಟ್ವೀಟ್ ಮಾಡುವ ಮೂಲಕ ಇದರ ಮಾಹಿತಿ ನೀಡಿದೆ. ಪ್ರೆಸ್ ಇನ್ಫಾರ್ಮಶನ್ ಬ್ಯೂರೋ (PIB) Fact Chek ತಂಡ CBSEಯ ಈ ಡೇಟ್ ಶೀಟ್ ಅನ್ನು ನಕಲಿ ಎಂದು ಹೇಳಿದೆಟ್ವಿಟ್ಟರ್ ಮೂಲಕ ಈ ಮಾಹಿತಿ ನೀಡಲಾಗಿದೆ.

ಒಂದು ವೇಳೆ ನಿಮ್ಮ ಬಳಿಯೂ ಕೂಡ CBSE ಪರೀಕ್ಷೆಗೆ ಸಂಬಂಧಿಸಿದ ಇಂತಹ ಯಾವುದೇ ಡೇಟ್ ಶೀಟ್ ಬಂದಿದ್ದರೆ ಅದನ್ನು ನಂಬಬೇಡಿ. CBSE 10ನೇ ಮತ್ತು 12ನೇ ತರಗತಿಗಾಗಿ ಯಾವುದೇ ಡೇಟ್ ಶೀಟ್ ಬಿಡುಗಡೆ ಮಾಡಿಲ್ಲ. ಅಷ್ಟೇ ಅಲ್ಲ CBSE ಪರೀಕ್ಷೆಗಳಿಗೆ ಕುರಿತಾದ ಯಾವುದೇ ರೀತಿಯ ಮಾಹಿತಿಯನ್ನು ಪಡೆಯಲು CBSE ಅಧಿಕೃತ ವೆಬ್ ಸೈಟ್ ಗೆ ಭೀತಿ ನೀಡಿ. 

ಇದನ್ನು ಓದಿ- CBSE ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಇದು ಬೆಸ್ಟ್ ಟ್ರಿಕ್

ವೈರಲ್ ಆಗುತ್ತಿರುವ ಈ ಸಂದೇಶವನ್ನು ನಂಬಬೇಡಿ ಎಂದು PIB ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮನವಿ ಮಾಡಿದೆ.

ಇದನ್ನು ಓದಿ-CBSE 12th Practical Exam Date: ಸಿಬಿಎಸ್ಇ 12ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಯ ದಿನಾಂಕ ಘೋಷಣೆ

ಪ್ರಾಕ್ಟಿಕಲ್ ಗೆ ಸಂಬಂಧಿಸಿದಂತೆ ಪ್ರಯತ್ನಗಳು ಮುಂದುವರೆದಿವೆ
CBSE Board Exam 2021ನ ರಿವೈಸಡ್ ಸಿಲೆಬಸ್ ಅನ್ನು CBSEಯ ಅಧಿಕೃತ ವೆಬ್ ಸೈಟ್ ಆಗಿರುವ www.cbse.nic.in ಮೇಲೆ ಅಪ್ಲೋಡ್ ಮಾಡಲಾಗಿದೆ. ಈ ಕುರಿತು ವಿದ್ಯಾರ್ಥಿ ಕೇಳಿರುವ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಕೇಂದ್ರ ಶಿಕ್ಷಣ ಸಚಿವ, "CBSE ಪ್ರ್ಯಾಕ್ಟಿಕಲ್ ಪರೀಕ್ಷೆಗಳು ಶಾಲಾ ಮಟ್ಟದಲ್ಲಿ ಆಯೋಜಿಸಲಾಗುತ್ತವೆ. ಮಹಾಮಾರಿಯ ಕಾರಣ ಕೆಲಸ ಸಾಧ್ಯವಾಗದೆ ಹೋದಲ್ಲಿ ಇತರ ಮಾರ್ಗಗಳನ್ನು ಪರಿಶೀಲಿಸಲಾಗುವುದು" ಎಂದು ಹೇಳಿದ್ದಾರೆ.

ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮಂಡಳಿ ಪರೀಕ್ಷೆಗಳ ದಿನಾಂಕಗಳನ್ನೂ ಕೂಡ ವಿಸ್ತರಿಸುವ ಕುರಿತು ಚಿಂತನೆ ನಡೆಸುವ ಸಾಧ್ಯತೆ ಇದೆ.

Trending News