CBSE 12th Result 2023 : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 12 ನೇ ತರಗತಿಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 15ರಿಂದ ಮಾರ್ಚ್ 21 ರವರೆಗೆ ನಡೆದಿದ್ದ ಪರೀಕ್ಷೆಯಲ್ಲಿ 16 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ "cbse.gov.in ಅಥವಾ results.cbse.nic.in" ಗೆ ಭೇಟಿ ನೀಡುವ ಮೂಲಕ ತಮ್ಮ ಪರೀಕ್ಷಾ ಫಲಿತಾಂಶವನ್ನು ಪಡೆಯಬಹುದಾಗಿದೆ.
CBSE 12 ನೇ ತರಗತಿಯ ಪರೀಕ್ಷೆಯ ಫಲಿತಾಂಶಗಳನ್ನು ಬೆಳಿಗ್ಗೆ 10:30 ಕ್ಕೆ ಬಿಡುಗಡೆ ಮಾಡಲಾಗಿದೆ. ಈಗ ವಿದ್ಯಾರ್ಥಿಗಳು CBSE 12 ತರಗತಿ ಫಲಿತಾಂಶವನ್ನು "ಆನ್‌ಲೈನ್, SMS ಮತ್ತು ಡಿಜಿಲಾಕರ್" ಮೂಲಕ ಪರಿಶೀಲಿಸಬಹುದು.
ಇದನ್ನೂ ಓದಿ : ಇಮ್ರಾನ್ ಖಾನ್ ಬಂಧನ: ಅಲ್ - ಖಾದಿರ್ ಟ್ರಸ್ಟ್ ಪ್ರಕರಣ ನಡೆದು ಬಂದ ಹಾದಿ
CBSE ತರಗತಿ 12 ಫಲಿತಾಂಶ 2023 ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?
- cbseresults.nic.in
- results.cbse.nic.in
- cbse.nic.in
- cbse.gov.in ಮೇಲೆ ನೀಡಲಾದ ವಿವಿಧ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳು CBSE 12 ನೇ ತರಗತಿಯ ಫಲಿತಾಂಶವನ್ನು ಪರಿಶೀಲಿಸಬಹುದು.
ಪರೀಕ್ಷೆಯ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡುವುದು ಹೇಗೆ? :
* results.cbse.nic.in ಅಥವಾ cbse.gov.in. ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.
* ನೀವು ಮುಖಪುಟದಲ್ಲಿ ಕಂಡುಬರುವ ಲಿಂಕ್‌ನಲ್ಲಿ Senior School Certificate Examination Class XII Results 2023 Announced' ಲಿಂಕ್ ಅನ್ನು ಕ್ಲಿಕ್ ಮಾಡಿ.
* ನಿಮಗೆ ನೀಡಿರುವ ನೋಂದಣಿ ಸಂಖ್ಯೆ, ಪಾಸ್‌ವರ್ಡ್ ಮತ್ತು ಇತರ ವಿವರಗಳನ್ನು ನಮೂದಿಸಿ ಸಬ್ಮಿಟ್ ಮಾಡಿ.
* ಈಗ ನಿಮ್ಮ ಪರೀಕ್ಷೆಯ ಫಲಿತಾಂಶ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಬಹುದು ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.
ಇದನ್ನೂ ಓದಿ : RPC Singh Joins BJP: ಕೇಂದ್ರ ಮಾಜಿ ಕೇಂದ್ರ ಸಚಿವ ಆರ್ಸಿಪಿ ಸಿಂಗ್ ಬಿಜೆಪಿಗೆ ಸೇರ್ಪಡೆ
ಡಿಜಿಲಾಕರ್ ಮೂಲಕ ನೊಂದಿಗೆ CBSE 12ನೇ ತರಗತಿಯ ಫಲಿತಾಂಶ ನೋಡುವುದು ಹೇಗೆ ? :
1 - ವಿದ್ಯಾರ್ಥಿಗಳು ಮೊದಲು digilocker.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2 - ಇದರ ನಂತರ, ಮುಖಪುಟದಲ್ಲಿ ನೀಡಲಾದ CBSE ಬೋರ್ಡ್ ಕ್ಲಾಸ್ 12 ರಿಸಲ್ಟ್ 2023 ಲಿಂಕ್ ಅನ್ನು ಕ್ಲಿಕ್ ಮಾಡಿ.
3 - ಈಗ ಇಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ನಮೂದಿಸಿ. ನಿಮ್ಮ ಮುಂದೆ ಹೊಸ ವಿಂಡೋ ತೆರೆಯುತ್ತದೆ.
4 - ಇಲ್ಲಿ ನಿಮ್ಮ ಮಾರ್ಕ್‌ಶೀಟ್ ಪರದೆಯ ಮೇಲೆ ಕಾಣಿಸುತ್ತದೆ.
CBSE 12 ನೇ ತರಗತಿಯ ಫಲಿತಾಂಶ 2023 ಅನ್ನು SMS ಮೂಲಕ ಪರಿಶೀಲಿಸುವುದು ಹೇಗೆ? :
ವಿದ್ಯಾರ್ಥಿಗಳು CBSE ಬೋರ್ಡ್ 12 ನೇ ತರಗತಿಯ ಫಲಿತಾಂಶವನ್ನು SMS ಮೂಲಕ ಕೂಡಾ ಪರಿಶೀಲಿಸಬಹುದು. ಇದಕ್ಕಾಗಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಮೂಲಕ SMS ಕಳುಹಿಸಬೇಕು.
12 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಲು CBSE12(ಸ್ಪೇಸ್)Rol_Number ಬರೆಯುವ ಮೂಲಕ SMS ಕಳುಹಿಸಬೇಕು. ವಿದ್ಯಾರ್ಥಿಗಳು ಒಮ್ಮೆ SMS ಕಳುಹಿಸಿದರೆ, ಅವರು ತಮ್ಮ ಫಲಿತಾಂಶವನ್ನು SMS ಮೂಲಕವೇ ಪಡೆಯುತ್ತಾರೆ.
ಇದನ್ನೂ ಓದಿ : Maharashtra: ಸುಪ್ರೀಂ ತೀರ್ಪಿನ ಬಳಿಕ ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರವನ್ನು ಕಾನೂನುಬಾಹೀರ ಎಂದ ಸಂಜಯ್ ರಾವುತ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.