Oxygen Tanker: ಸಿಂಗಾಪುರ ಮತ್ತೆ UAE ಯಿಂದ ಭಾರತಕ್ಕೆ ಆಕ್ಸಿಜನ್ ಆಮದಿಗೆ ಸರ್ಕಾರ ಸಿದ್ಧತೆ!

ದೇಶದಲ್ಲಿ ಪ್ರತಿ ಗಂಟೆಗೆ 2400 ಲೀಟರ್ ಆಕ್ಸಿಜನ್ ಅವಶ್ಯಕತೆ ಇದೆ. 

Last Updated : Apr 24, 2021, 01:59 PM IST
  • ಭಾರತ ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರ ವಿದೇಶದಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ.
  • ದೇಶದಲ್ಲಿ ಪ್ರತಿ ಗಂಟೆಗೆ 2400 ಲೀಟರ್ ಆಕ್ಸಿಜನ್ ಅವಶ್ಯಕತೆ ಇದೆ.
  • ಕೇಂದ್ರ ಸರ್ಕಾರವು ಸಿಂಗಾಪುರ ಮತ್ತು ಯುಎಇಯಿಂದ ಹೆಚ್ಚಿನ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕರ್ ಅನ್ನು ಆಮದಿಗೆ ಮುಂದಾಗಿದೆ.
Oxygen Tanker: ಸಿಂಗಾಪುರ ಮತ್ತೆ UAE ಯಿಂದ ಭಾರತಕ್ಕೆ ಆಕ್ಸಿಜನ್ ಆಮದಿಗೆ ಸರ್ಕಾರ ಸಿದ್ಧತೆ! title=

ನವದೆಹಲಿ: ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ, ದೇಶದಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಯುದ್ಧದ ಹಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಆರೋಗ್ಯ ಸಚಿವಾಲಯ, ರೈಲ್ವೆ ಇಲಾಖೆ, ಸೇನೆ, ವಾಯುಪಡೆ, ಪೊಲೀಸ್ ಇಲಾಖೆ ಜನರ ಪ್ರಾಣ ಉಳಿಸಲು ಹಗಲು ರಾತ್ರಿ ಶ್ರಮಿಸುತ್ತಿದೆ. ಸಧ್ಯ ಭಾರತ ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರ ವಿದೇಶದಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ. ಸಧ್ಯ ದೇಶದಲ್ಲಿ ಪ್ರತಿ ಗಂಟೆಗೆ 2400 ಲೀಟರ್ ಆಕ್ಸಿಜನ್ ಅವಶ್ಯಕತೆ ಇದೆ. ವಿದೇಶದಿಂದ ಆಕ್ಸಿಜನ್ ಆಮದು ಮಾಡಿಕೊಳ್ಳುವ ಜವಾಬ್ದಾರಿಯನ್ನು ರಕ್ಷಣಾ ಸಚಿವಾಲಯ ವಹಿಸಿಕೊಂಡಿದೆ.

ಸಧ್ಯದ ಕೊರೋನಾ ಪರಿಸ್ಥಿತಿಯ ಮೇಲೆ ಪಿಎಂ ಕಣ್ಣು!

ದೇಶದ ಸಧ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಈಗ ಹೊಸ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರವು ಸಿಂಗಾಪುರ(Singapore) ಮತ್ತು ಯುಎಇಯಿಂದ ಹೆಚ್ಚಿನ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕರ್ ಅನ್ನು ಆಮದಿಗೆ ಮುಂದಾಗಿದೆ. ಈ ಹಿಂದೆ ಜರ್ಮನಿಯಿಂದ 23 ಆಕ್ಸಿಜನ್ ಟ್ಯಾಂಕರ್ ಗಳನ್ನೂ  ಆಮದು ಮಾಡಿಕೊಳ್ಳಲಾಗಿತ್ತು.

ಇದನ್ನೂ ಓದಿ : CJI NV Ramana: '48ನೇ ಮುಖ್ಯ ನ್ಯಾಯಮೂರ್ತಿಯಾಗಿ' ಆಗಿ ಎನ್.ವಿ.ರಮಣ ಪ್ರಮಾಣ ವಚನ ಸ್ವೀಕಾರ!

ಭಾರತದಲ್ಲಿ ಪ್ರತಿ ನಿಮಿಷಕ್ಕೆ 40 ಲೀಟರ್ ಮತ್ತು ಗಂಟೆಗೆ 2400 ಲೀಟರ್ ಆಕ್ಸಿಜನ್(Oxygen) ಬೇಕಾಗುತ್ತದೆ. ದೇಶದಲ್ಲಿ ಕರೋನಾ ವೈರಸ್ ಸೋಂಕು ವೇಗವಾಗಿ ಹೆಚ್ಚುತ್ತಿರುವದರಿಂದ ಅನೇಕ ರಾಜ್ಯಗಳು ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಸಚಿವಾಲಯ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ : Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ

ಮುಚ್ಚಿದ ಆಕ್ಸಿಜನ್ ಸ್ಥಾವರವನ್ನು ಮತ್ತೆ ಪ್ರಾರಂಭಿಸಲು ಆದೇಶಿಸಿ: 

ದೇಶದಲ್ಲಿ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಲು ಮುಚ್ಚಿದ ಆಮ್ಲಜನಕ ಘಟಕ(Oxygen Generation Plant)ಗಳನ್ನು ಮರುಪ್ರಾರಂಭಿಸುವಂತೆ ಗೃಹ ಸಚಿವ ಅಮಿತ್ ಶಾ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ದೇಶದಲ್ಲಿನ ಆಮ್ಲಜನಕದ ಬಿಕ್ಕಟ್ಟನ್ನು ಶೀಘ್ರದಲ್ಲಿಯೇ ಪರಿಹರಿಸಬಹುದು. ಅದೇ ಸಮಯದಲ್ಲಿ, ಆಮ್ಲಜನಕದ ಕೊರತೆಯಿಂದ ಯಾವುದೇ ರೋಗಿಯ ಪರದಾಡುವ ಪರಸ್ಥಿತಿ ಎದುರಾಗುವುದಿಲ್ಲ.

ಇದನ್ನೂ ಓದಿ : Bank Working Hour: ಕರೋನಾದಿಂದಾಗಿ ಬ್ಯಾಂಕುಗಳ ಕೆಲಸದ ಸಮಯದಲ್ಲಿ ಕಡಿತ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News