Bank Working Hour: ಕರೋನಾದಿಂದಾಗಿ ಬ್ಯಾಂಕುಗಳ ಕೆಲಸದ ಸಮಯದಲ್ಲಿ ಕಡಿತ!

ಇನ್ನುಮುಂದೆ ಬ್ಯಾಂಕುಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ತೆರೆಯಬೇಕು ಎಂದು ಬ್ಯಾಂಕುಗಳ ನೌಕರರ ಸಂಘಗಳ ಬೇಡಿಕೆ

Last Updated : Apr 24, 2021, 10:35 AM IST
  • ದೇಶದಲ್ಲಿ ಕರೋನಾ ಏಕಾಏಕಿ ಹೆಚ್ಚುತ್ತಿರುವ ಕಾರಣ
  • ಬ್ಯಾಂಕುಗಳ ಕೆಲಸದ ಸಮಯದಲ್ಲಿ ಬದಲಾವಣೆ
  • ಬ್ಯಾಂಕುಗಳ ಕೆಲಸದ ಅವಧಿಯನ್ನ ಕಡಿತ
Bank Working Hour: ಕರೋನಾದಿಂದಾಗಿ ಬ್ಯಾಂಕುಗಳ ಕೆಲಸದ ಸಮಯದಲ್ಲಿ ಕಡಿತ! title=

ನವದೆಹಲಿ: ದೇಶದಲ್ಲಿ ಕರೋನಾ ಏಕಾಏಕಿ ಹೆಚ್ಚುತ್ತಿರುವ ಕಾರಣದಿಂದಾಗಿ ಬ್ಯಾಂಕುಗಳ ಕೆಲಸದ ಸಮಯದಲ್ಲಿ ಬದಲಾವಣೆ ಮತ್ತು ಕೆಲಸದ ಅವಧಿಯನ್ನ ಕಡಿತಗೊಳಿಸಲಾಗುತ್ತಿದೆ.

ಇನ್ನುಮುಂದೆ ಬ್ಯಾಂಕುಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ತೆರೆಯಬೇಕು ಎಂದು ಬ್ಯಾಂಕು(Banks)ಗಳ ನೌಕರರ ಸಂಘಗಳ ಬೇಡಿಕೆ ಇದೆ.

ಇದನ್ನೂ ಓದಿ : Coronavirus: ಉತ್ತರಪ್ರದೇಶದಲ್ಲಿ ವಾರಾಂತ್ಯದ ಕರ್ಫ್ಯೂ

ನಾವು ಕರೋನಾ ವೈರಸ್‌(Coronavirus)ನ ಸವಾಲಿನ ಅವಧಿಯನ್ನು ಎದುರಿಸುತ್ತಿದ್ದೇವೆ ಎಂದು ಬ್ಯಾಂಕ್ ನೌಕರರ ಒಕ್ಕೂಟವು ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿಯ ಸಂಚಾಲಕರಿಗೆ ಬರೆದ ಪತ್ರದಲ್ಲಿ ತಿಳಿಸಿದೆ. ಅನೇಕ ರಾಜ್ಯಗಳಲ್ಲಿ, ಕರೋನಾದಿಂದ ಬಳಲುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಆರ್ಥಿಕ ಚಟುವಟಿಕೆಗಳ ಬಗ್ಗೆ ಗಂಭೀರ ಕಾಳಜಿಗಳಿವೆ.

ಇದನ್ನೂ ಓದಿ : Post Office Saving Schemes: ನಿಯಮಿತ ಆದಾಯಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಅಲ್ಪಾವಧಿಯಲ್ಲಿಯೇ ದ್ವಿಗುಣಗೊಳ್ಳುತ್ತೆ ಹಣ

ಕರೋನಾ ವೈರಸ್ ಸೋಂಕಿನಿಂದ ನೌಕರರನ್ನು ರಕ್ಷಿಸಲು, ಬ್ಯಾಂಕುಗಳನ್ನು 3 ರಿಂದ 4 ಗಂಟೆಗಳವರೆಗೆ ಮಾತ್ರ ತೆರೆಯುವುದು ಅವಶ್ಯಕ. ಉದ್ಯೋಗಿಗಳನ್ನು(Employees) ಆವರ್ತಕ ಮಟ್ಟದಲ್ಲಿ ಕರೆಯಬೇಕು ಅಥವಾ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಉದ್ಯಮ ಸಂಸ್ಥೆ ಶಿಫಾರಸು ಮಾಡಿದೆ. ಈ  ಪರಿಸ್ಥಿತಿಯಲ್ಲಿ ಕೇವಲ ಶೇ.50 ರಷ್ಟು ಉದ್ಯೋಗಿಗಳನ್ನು ಮಾತ್ರ ಕಚೇರಿಗೆ ಕರೆಯಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Covid-19 Crisis: ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 773 ಜನರು ಸಾವು, 66 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು

ಈ ಸಮಯದಲ್ಲಿ, ಹಣವನ್ನು ಹಿಂತೆಗೆದುಕೊಳ್ಳುವುದು, ಹಣ(Money)ವನ್ನು ಠೇವಣಿ ಇಡುವುದು ಮತ್ತು ಸರ್ಕಾರಿ ವ್ಯವಹಾರ ಮುಂತಾದ ಸೇವೆಗಳು ಮುಂದುವರಿಯುತ್ತವೆ. ಇದರಲ್ಲಿ ಯಾವುದೇ ಬದಲಾವಣೆಗಳು ಇಲ್ಲ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News