ಸರ್ಕಾರದ ಮಹತ್ವದ ನಿರ್ಧಾರ: ಜಮ್ಮು- ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ 4G ಇಂಟರ್ನೆಟ್ ಸೇವೆ

ಜಮ್ಮು ಮತ್ತು ಕಾಶ್ಮೀರದ ಆಯ್ದ ಪ್ರದೇಶಗಳಲ್ಲಿ 4 ಜಿ ಇಂಟರ್ನೆಟ್ ಸೇವೆಯನ್ನು ಸರ್ಕಾರ ಪುನಃಸ್ಥಾಪಿಸಲು ಹೊರಟಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

Updated: Aug 11, 2020 , 12:45 PM IST
ಸರ್ಕಾರದ ಮಹತ್ವದ ನಿರ್ಧಾರ: ಜಮ್ಮು- ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ 4G ಇಂಟರ್ನೆಟ್ ಸೇವೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 4 ಜಿ ಇಂಟರ್ನೆಟ್ (4G Internet) ಸೇವೆಯನ್ನು ಪುನಃಸ್ಥಾಪಿಸಲು ಸುಪ್ರೀಂಕೋರ್ಟ್‌ನಲ್ಲಿ (Supreme Court) ಮಂಗಳವಾರ ವಿಚಾರಣೆ ನಡೆಯಿತು. ಇದರಲ್ಲಿ ಆಗಸ್ಟ್ 15 ರಿಂದ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ 4 ಜಿ ಇಂಟರ್ನೆಟ್ ಸೇವೆಯನ್ನು ಪುನಃಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜಮ್ಮು-ಕಾಶ್ಮೀರದ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ಮನೋಜ್ ಸಿನ್ಹಾ ನೇಮಕ

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಆಯ್ದ ಪ್ರದೇಶಗಳಲ್ಲಿ 4 ಜಿ ಇಂಟರ್ನೆಟ್ ಸೇವೆಯನ್ನು ಸರ್ಕಾರ ಪುನಃಸ್ಥಾಪಿಸಲು ಹೊರಟಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ ವಿಭಾಗದ ಪ್ರತಿ ಜಿಲ್ಲೆಯಲ್ಲೂ 4 ಜಿ ಇಂಟರ್ನೆಟ್ ಸೇವೆಯನ್ನು ಪುನಃಸ್ಥಾಪಿಸಲಾಗುವುದು. ನಂತರ ಅದನ್ನು ಮುಂದಿನ 2 ತಿಂಗಳಲ್ಲಿ ಪರಿಶೀಲಿಸಲಾಗುವುದು ಎಂದು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ವಿವರಿಸಿದೆ.

Pakistan New Map: ನೂತನ ನಕ್ಷೆ ಜಾರಿಗೊಳಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಜುನಾಗಢ ತನ್ನ ಭಾಗ ಎಂದಿದೆ

ಆದಾಗ್ಯೂ ಗಡಿ ಪ್ರದೇಶಗಳಲ್ಲಿ, ಎಲ್‌ಒಸಿ ಬಳಿ ಇನ್ನೂ 4 ಜಿ ಇಂಟರ್ನೆಟ್ ಸೇವೆಯನ್ನು ಮರುಸ್ಥಾಪಿಸುವುದಿಲ್ಲ. ಭಯೋತ್ಪಾದಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.