ಜುಲೈ 1ರಿಂದ ವಿಮಾನ ಪ್ರಯಾಣ ದರದಲ್ಲಿ ಏರಿಕೆ

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ವೈಮಾನಿಕ ಭದ್ರತಾ ಶುಲ್ಕವನ್ನು ಪ್ರತಿ ಗ್ರಾಹಕನಿಗೆ ಈಗ ಇರುವ 130 ರೂ.ಗಳಿಂದ 150 ರೂ.ಗಳಿಗೆ ಏರಿಸಿ ಆದೇಶ ಹೊರಡಿಸಿದೆ. 

Last Updated : Jun 9, 2019, 11:55 AM IST
ಜುಲೈ 1ರಿಂದ ವಿಮಾನ ಪ್ರಯಾಣ ದರದಲ್ಲಿ ಏರಿಕೆ title=

ನವದೆಹಲಿ: ಜುಲೈ 1ರಿಂದ ವಿಮಾನ ಪ್ರಯಾಣ ದರದಲ್ಲಿ ಏರಿಕೆಯಾಗಲಿದ್ದು, ಪ್ರಯಾಣಿಕರಿಗೆ ವಿಮಾನಯಾನ ಶುಲ್ಕದ ಹೊರೆ ಅಲ್ಪಮಟ್ಟಿಗೆ ಹೆಚ್ಚಾಗಲಿದೆ. 

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ವೈಮಾನಿಕ ಭದ್ರತಾ ಶುಲ್ಕವನ್ನು ಪ್ರತಿ ಗ್ರಾಹಕನಿಗೆ ಈಗ ಇರುವ 130 ರೂ.ಗಳಿಂದ 150 ರೂ.ಗಳಿಗೆ ಏರಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ಶುಲ್ಕವನ್ನು 3.25 ಡಾಲರ್‌ನಿಂದ 4.85 ಡಾಲರ್‌ಗೆ ಏರಿಸಲಾಗಿದೆ. 

''ದೇಶೀಯ ಪ್ರಯಾಣಕ್ಕೆ ಪ್ರಯಾಣಿಕರಿಗೆ ಎಎಸ್‌ಎಫ್‌ ಶುಲ್ಕವು 20 ರೂ. ಏರಿಕೆಯಾಗಿ, 150 ರೂ.ಗೆ ಹೆಚ್ಚಳವಾಗಲಿದೆ. ವಿದೇಶಿ ಪ್ರಯಾಣಿಕರಿಗೆ 1.65 ಡಾಲರ್‌ನಷ್ಟು ಹೆಚ್ಚಳವಾಗಲಿದೆ'' ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಆದೇಶದಲ್ಲಿ ಹೇಳಲಾಗಿದೆ. 

ಈ ಆದೇಶ ಜುಲೈ 1 ರಿಂದಲೇ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
 

Trending News