15 August guidelines : ಆಗಸ್ಟ್ 15 ರಂದು ದೇಶದಲ್ಲಿ 75 ವರ್ಷದ ಸ್ವಾತಂತ್ರ್ಯ ದಿನವನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದೆ. ಈ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ವಾಸ್ತವವಾಗಿ, ದೇಶದಲ್ಲಿ ಪ್ರತಿದಿನ ಸರಾಸರಿ 15,000 ಕ್ಕೂ ಹೆಚ್ಚು ಕೊರಾನಾ ಪ್ರಕರಣಗಳು ವರದಿಯಾಗುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಎಲ್ಲಾ ರಾಜ್ಯಗಳಿಗೆ ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ತಿಳಿಸಿದೆ.
ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಸೂಚನೆಗಳು
ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಪ್ರಮುಖ ಸ್ಥಳಗಳಲ್ಲಿ 'ಸ್ವಚ್ಛ ಭಾರತ್' ಅಭಿಯಾನವನ್ನು ನಡೆಸಲು ಮತ್ತು 15 ರಿಂದ ಒಂದು ತಿಂಗಳ ಕಾಲ ಸ್ವಯಂಪ್ರೇರಿತ ನಾಗರಿಕರ ಭಾಗವಹಿಸುವಿಕೆಯ ಮೂಲಕ ಅವುಗಳನ್ನು 'ಸ್ವಚ್ಛ'ವಾಗಿಡಲು ಸಲಹೆ ನೀಡಿದೆ.
ಇದನ್ನೂ ಓದಿ : Pavan Varma Quits TMC : ದೀದಿಗೆ ಬಿಗ್ ಶಾಕ್ : TMC ಉಪಾಧ್ಯಕ್ಷ ಸ್ಥಾನಕ್ಕೆ ಟ್ವಿಟ್ಟರ್ ನಲ್ಲಿ ರಾಜೀನಾಮೆ!
ದೊಡ್ಡ ದೊಡ್ಡ ಸಭೆ ಸಮಾರಂಭಗಳಿಗೆ ಬ್ರೇಕ್
ಸಚಿವಾಲಯವು ಹೊರಡಿಸಿರುವ ಪ್ರಕಟಣೆಯಲ್ಲಿ, 'ಕೋವಿಡ್ -19 ವಿರುದ್ಧ ಮುನ್ನೆಚ್ಚರಿಕೆಯಾಗಿ, ದೊಡ್ಡ ದೊಡ್ಡ ಸಭೆ ಸಮಾರಂಭಗಳನ್ನ ಕೈ ಬಿಡಬೇಕು ಹಾಗೂ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸುವುದು ಅವಶ್ಯಕ ಎಂದು ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ಅಪ್ಡೇಟೆಡ್ ಮಾಹಿತಿಯ ಪ್ರಕಾರ, ದೇಶದಲ್ಲಿ 16,561 ಹೊಸ ಕೋವಿಡ್ -19 ಪ್ರಕರಣಗಳು ಸೇರಿ ಸೋಂಕಿತರ ಸಂಖ್ಯೆ 4,42,23,557 ಕ್ಕೆ ಏರಿದೆ, ಸಕ್ರಿಯ ಪ್ರಕರಣಗಳ ಬಗ್ಗೆ ಹೇಳುವುದಾದರೆ, ದೇಶದಲ್ಲಿ 23 ಸಾವಿರಕ್ಕೂ ಹೆಚ್ಚು ಸಕ್ರಿಯ ಕರೋನಾ ಸೋಂಕಿತರಿದ್ದಾರೆ.
ದೇಶದ ಕರೋನಾ ಬುಲೆಟಿನ್
ಸಚಿವಾಲಯವು ಬೆಳಿಗ್ಗೆ ಎಂಟು ಗಂಟೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಸೋಂಕಿತಾರಾ ಸಂಖ್ಯೆ 49 ಜನರ ಸಾವಿನಿಂದ ಸಾವಿನ ಸಂಖ್ಯೆ 5,26,928 ಕ್ಕೆ ಏರಿದೆ. ಈ 49 ಸಾವಿನ ಪ್ರಕರಣಗಳಲ್ಲಿ, ಕೇರಳದಲ್ಲಿ 10 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಮರ ನೆಡುವ ಕಾರ್ಯಕ್ರಮಗಳನ್ನು ನಡೆಸುವಂತೆ ಗೃಹ ಸಚಿವಾಲಯವು ಸರ್ಕಾರಿ ಇಲಾಖೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ತಿಳಿಸಿದೆ.
ದೆಹಲಿ ಸಂಚಾರ ಪೊಲೀಸ್ ಸಲಹೆ
ದೇಶದ ರಾಜಧಾನಿ ನವದೆಹಲಿಯ ಪೊಲೀಸರು ಸ್ವಾತಂತ್ರ್ಯ ದಿನಾಚರಣೆಯ ದೃಷ್ಟಿಯಿಂದ ನಗರದಲ್ಲಿ ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಂಚಾರ ಸಲಹೆಯನ್ನು ನೀಡಿದ್ದಾರೆ. ದೆಹಲಿ ಪೊಲೀಸರು ಹೊರಡಿಸಿರುವ ಸಲಹೆಯ ಪ್ರಕಾರ, ಕೆಂಪು ಕೋಟೆಯ ಸುತ್ತ ಸಾರ್ವಜನಿಕ ವಾಹನಗಳ ಸಂಚಾರವನ್ನು ಬೆಳಿಗ್ಗೆ 4 ರಿಂದ 10 ರವರೆಗೆ ಬಂದ್ ಮಾಡಲಾಗಿದೆ. ಪೊಲೀಸ್ ಸಲಹೆಯ ಪ್ರಕಾರ, ನೇತಾಜಿ ಸುಭಾಷ್ ಮಾರ್ಗ, ಲೋಥಿಯನ್ ರಸ್ತೆ, ಎಸ್‌ಪಿ ಮುಖರ್ಜಿ ಮಾರ್ಗ, ಚಾಂದಿನಿ ಚೌಕ್ ರಸ್ತೆ, ನಿಶಾದ್ ರಾಜ್ ಮಾರ್ಗ, ಎಸ್‌ಪ್ಲನೇಡ್ ರಸ್ತೆ ಮತ್ತು ನೇತಾಜಿ ಸುಭಾಷ್ ಮಾರ್ಗಕ್ಕೆ ಹೋಗುವ ಅದರ ಸಂಪರ್ಕ ರಸ್ತೆ, ರಾಜ್‌ಘಾಟ್‌ನಿಂದ ಐಎಸ್‌ಬಿಟಿಗೆ ರಿಂಗ್ ರಸ್ತೆ ಮತ್ತು ಐಎಸ್‌ಬಿಟಿಯಿಂದ ಐಪಿ ಫ್ಲೈ ಓವರ್ ಇಲ್ಲಿಯವರೆಗೆ , ಹೊರ ವರ್ತುಲ ರಸ್ತೆ ಸೇರಿದಂತೆ ಒಟ್ಟು ಎಂಟು ರಸ್ತೆಗಳು ಸಾಮಾನ್ಯ ಜನರ ವಾಹನಗಳಿಗೆ ಬಂದ್ ಆಗಿರುತ್ತದೆ.
ಇದನ್ನೂ ಓದಿ : Independence Day 2022 : ಕೆಂಪು ಕೋಟೆ ಮೇಲೆ ತಯಾರಾಗುತ್ತಿದೆ 'ಬುಲೆಟ್ ಪ್ರೂಫ್' ವೇದಿಕೆ!
ನೋಯ್ಡಾ, ಲೋನಿ, ಸಿಂಘು, ಗಾಜಿಪುರ್, ಬದರ್‌ಪುರ್, ಸಫಿಯಾ, ಮಹಾರಾಜಪುರ, ಅಯಾ ನಗರ, ಔಚಂಡಿ, ಸೂರ್ಯ ನಗರ, ರಾಜೋಕ್ರಿ, ಧನ್ಸಾ, ಅಪ್ಸರಾ, ಕಾಳಿಂದಿ ಕುಂಜ್, ಜರೋಡಾ, ಭೋಪುರ, ಲಾಲ್ ಕುವಾನ್ ಪುಲ್ ಪ್ರಹ್ಲಾದ್ ಪುರ್ ಮತ್ತು ಟಿಕ್ರಿ ಬಾರ್ಡರ್ ವಾಣಿಜ್ಯ ಮತ್ತು ಸಾರಿಗೆ ವಾಹನಗಳಿಗೆ ಶುಕ್ರವಾರ ಶನಿವಾರ ರಾತ್ರಿ 10 ರಿಂದ ಬೆಳಿಗ್ಗೆ 11 ರವರೆಗೆ ಬಂದಿರುತ್ತವೆ. ಅದೇ ರೀತಿ ಭಾನುವಾರ ಮತ್ತು ಸೋಮವಾರವೂ ಈ ರಸ್ತೆಗಳು ಬಂದ್ ಆಗಿರುತ್ತವೆ ಎಂದು ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.