close

News WrapGet Handpicked Stories from our editors directly to your mailbox

ಗಗನಕ್ಕೆ ಚಿಮ್ಮಿದ ಬಾಹುಬಲಿ, ಚಂದ್ರಯಾನ-2 ಉಡಾವಣೆ ಯಶಸ್ವಿ

ಇಸ್ರೋದ ಬಹುನಿರೀಕ್ಷಿತ ಯೋಜನೆಯಾದ ಚಂದ್ರಯಾನ--2 ಉಡಾವಣೆ ಸೋಮವಾರ 2.43ಕ್ಕೆ ಯಶಸ್ವಿಯಾಯಿತು. ಆ ಮೂಲಕ  ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎನ್ನುವ ಶ್ರೆಯವನ್ನು  ಭಾರತ ಪಡೆಯಿತು. 

Updated: Jul 22, 2019 , 03:27 PM IST
ಗಗನಕ್ಕೆ ಚಿಮ್ಮಿದ ಬಾಹುಬಲಿ, ಚಂದ್ರಯಾನ-2 ಉಡಾವಣೆ ಯಶಸ್ವಿ

ನವದೆಹಲಿ: ಇಸ್ರೋದ ಬಹುನಿರೀಕ್ಷಿತ ಯೋಜನೆಯಾದ ಚಂದ್ರಯಾನ--2 ಉಡಾವಣೆ ಸೋಮವಾರ 2.43ಕ್ಕೆ ಯಶಸ್ವಿಯಾಯಿತು. ಆ ಮೂಲಕ  ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎನ್ನುವ ಶ್ರೆಯವನ್ನು ಭಾರತ ಪಡೆಯಿತು. 

ಆಂಧ್ರಪ್ರದೇಶದ ನೆಲ್ಲೊರ್ ಜಿಲ್ಲೆಯ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ--2 ಯಶಸ್ವಿಯಾಗಿ 2.45 ಕ್ಕೆ ಸರಿಯಾಗಿ ಗಗನಕ್ಕೆ ನೆಗೆಯಿತು, ಇದರ ಕ್ಷಣಗಣನೆಗೆ 20 ಗಂಟೆಗಳನ್ನು ನಿಗದಿ ಪಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಭಾನುವಾರ ಸಾಯಂಕಾಲದಿಂದ ವಿಜ್ಞಾನಿಗಳು ಕಾತುರದಿಂದ ಕಾಯುತ್ತಿದ್ದರು.

ಕಳೆದ ವಾರದ ಉಡಾವಣೆಗೂ ಮೊದಲು ತಾಂತ್ರಿಕ ದೋಷಪತ್ತೆಯಾದ ಹಿನ್ನಲೆಯಲೆಯಲ್ಲಿ ಕಡೆಕ್ಷಣದಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಲ್ಲದೆ ಹೋದಲ್ಲಿ ಈ ಮಹಾತ್ವಾಕಾಂಕ್ಷೆಯ ಯೋಜನೆ ವಿಫಲವಾಗುವ ಸಾಧ್ಯತೆ ಇತ್ತು ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದರು. ಈ ಯೋಜನೆ ನಿರ್ದೇಶಕರಾದ ರಿತು ಕರಿಧಾಲ್ ಅವರು ಚಂದ್ರಯಾನ್-2 ಉಡಾವಣೆ ನೇತೃತ್ವವನ್ನು ವಹಿಸಿದ್ದರು. 

ಚಂದ್ರಯಾನ-2 ಉಡಾವಣೆ ಮಾಡಿದ ನಂತರ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್ ಚಂದ್ರದೆಡೆಗಿನ ಪಯಣ ಐತಿಹಾಸಿಕವಾದದ್ದು, ಇದಕ್ಕೂ ಮೊದಲು ನಾವು ತಾಂತ್ರಿಕ ದೋಷವನ್ನು ಅನುಭವಿಸಿದರು ಸಹಿತ ಈಗ ಈ ಪರೀಕ್ಷೆಯನ್ನು ಸಫಲಗೊಳಿಸಲು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.