ಹೊಸ ಕರೋನಾ ವೈರಸ್ NeoCov ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು, ಸಂಭವಿಸಲಿದೆ ಪ್ರತಿ ಮೂವರು ರೋಗಿಗಳಲ್ಲಿ ಒಬ್ಬರ ಸಾವು

ಚೀನಾದ ವುಹಾನ್‌ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ಕರೋನವೈರಸ್ ನಿಯೋಕೋವ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

Written by - Ranjitha R K | Last Updated : Jan 28, 2022, 01:26 PM IST
  • ಪ್ರತಿ ಮೂವರಲ್ಲಿ ಒಬ್ಬರ ಸಾವಿಗೆ ಕಾರಣವಾಗಬಹುದು NeoCov
  • ಹೊಸ ವೈರಸ್ ತುಂಬಾ ಸಾಂಕ್ರಾಮಿಕ ಮತ್ತು ಮಾರಣಾಂತಿಕ
  • ವೈರಸ್ ಇನ್ನೂ ಮನುಷ್ಯರಿಗೆ ಹರಡಿಲ್ಲ
ಹೊಸ ಕರೋನಾ ವೈರಸ್ NeoCov ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು, ಸಂಭವಿಸಲಿದೆ ಪ್ರತಿ ಮೂವರು  ರೋಗಿಗಳಲ್ಲಿ ಒಬ್ಬರ ಸಾವು  title=
ಪ್ರತಿ ಮೂವರಲ್ಲಿ ಒಬ್ಬರ ಸಾವಿಗೆ ಕಾರಣವಾಗಬಹುದು NeoCov (file photo)

ನವದೆಹಲಿ : ಭಾರತ ಸೇರಿದಂತೆ ವಿಶ್ವದಲ್ಲಿ ಕೊರೊನಾವೈರಸ್ (Coronavirus) ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿದಿನ ಲಕ್ಷಾಂತರ ಜನರು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ.  ಈ ಮಧ್ಯೆ,  ಚೀನಾದ ವುಹಾನ್‌ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ಕರೋನವೈರಸ್ ನಿಯೋಕೋವ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಪ್ರತಿ ಮೂವರಲ್ಲಿ ಒಬ್ಬರ  ಸಾವಿಗೆ ಕಾರಣವಾಗಬಹುದು NeoCov :
ವುಹಾನ್‌ನ ವಿಜ್ಞಾನಿಗಳು ನಿಯೋಕೋವ್ ವೈರಸ್ (NeoCov) ಬಗ್ಗೆ ಎಚ್ಚರಿಕೆ ನೀಡಿದ್ದಾರೆ.  ಈ ವೈರಸ್ ತುಂಬಾ ಸಾಂಕ್ರಾಮಿಕವಾಗಿದ್ದು, ಹೆಚ್ಚು ಮಾರಣಾಂತಿಕವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಆರತಿ ಮೂವರು ಸೋಂಕಿತರಲ್ಲಿ ಒಬ್ಬ ರೋಗಿ ಸಾವನ್ನಪ್ಪಬಹುದು ಎಂದು ಅಂದಾಜಿಸಿದ್ದಾರೆ.

ಇದನ್ನೂ ಓದಿ : Reservation In Promotion: ಎಸ್‌ಸಿ-ಎಸ್‌ಟಿಗೆ ಬಡ್ತಿಗಾಗಿ ಮೀಸಲಾತಿಯಲ್ಲಿನ ಮಾನದಂಡಗಳು ಬದಲಾಗುವುದಿಲ್ಲ

MERS-CoV ನೊಂದಿಗೆ ಹೋಲಿಕೆ : 
ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿಯ ಪ್ರಕಾರ, ಹೊಸ ಕರೋನವೈರಸ್ (Coronavirus) ನಿಯೋಕೋವ್ ಸಹ MERS-CoV ವೈರಸ್‌ಗೆ ಸಂಬಂಧಿಸಿದ್ದಾಗಿದೆ. ಇದು, 2012 ಮತ್ತು 2015ರಲ್ಲಿ ಪಶ್ಚಿಮ ಏಷ್ಯಾದ ದೇಶಗಳಲ್ಲಿ ಮೊದಲು ಪತ್ತೆಯಾಗಿತ್ತು. 

ವೈರಸ್ ಇನ್ನೂ ಮನುಷ್ಯರಿಗೆ ಹರಡಿಲ್ಲ :
ಹೊಸ ಕರೋನವೈರಸ್ ನಿಯೋಕೋವ್ (NeoCov) ಇನ್ನೂ ಮನುಷ್ಯರಿಗೆ ಹರಡಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಈ ವೈರಸ್ ಬಾವಲಿಗಳಲ್ಲಿ ಕಾಣಿಸಿಕೊಂಡಿದೆ.  ಇಲ್ಲಿಯವರೆಗೆ ಈ ವೈರಸ್ (Virus) ಪ್ರಾಣಿಗಳಲ್ಲಿ ಮಾತ್ರ ಕಂಡುಬಂದಿದೆ.

ಇದನ್ನೂ ಓದಿ : Budget 2022 : ಬಜೆಟ್ ನಲ್ಲಿ ಪಿಂಚಣಿದಾರರಿಗೆ ಸಂತಸದ ಸುದ್ದಿ! ಭಾರೀ ಹೆಚ್ಚಾಗಬಹುದು ಪಿಂಚಣಿ

ಮನುಷ್ಯರಿಗೂ ತಗುಲಬಹುದು ಸೋಂಕು : 
BioRxiv ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, SARS-CoV-2, NeoCoV ಮತ್ತು PDF-2180-CoV ನಂತಹವುಗಳು ಸಹ ಮನುಷ್ಯರಿಗೆ ಸೋಂಕು ತರಬಹುದು. ವುಹಾನ್ ವಿಶ್ವವಿದ್ಯಾನಿಲಯ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಸಂಶೋಧಕರ ಪ್ರಕಾರ, ಈ ಹೊಸ ಕರೋನವೈರಸ್ ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸಲು ಕೇವಲ ಒಂದು ರೂಪಾಂತರದ ಅಗತ್ಯವಿದೆ.

ಹೊಸ ವೈರಸ್‌ನಲ್ಲಿ MERS-CoV ಮತ್ತು SARS-CoV-2 ನ ಗುಣಲಕ್ಷಣಗಳು :
ಹೊಸ ವೈರಸ್ NeoCoV ಪ್ರಸ್ತುತ SARS-CoV-2 ಕರೋನಾ ವೈರಸ್ ಮತ್ತು MERS-CoV ನ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆ ಹೇಳುತ್ತದೆ. ಇದು ಹೆಚ್ಚು ಸಾಂಕ್ರಾಮಿಕವಾಗಿದೆ. NeoCoV ವೈರಸ್ MERS ನಂತೆಯೇ ಅನೇಕ ರೋಗಿಗಳ ಸಾವಿಗೆ ಕಾರಣವಾಗಬಹುದು ಎಂದು  ಸಂಶೋಧನೆ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News