ನವದೆಹಲಿ: ಚೀನಾದ ಆ್ಯಪ್ ಟಿಕ್ಟಾಕ್(TikTok) ಅನ್ನು ಸರ್ಕಾರ ನಿಷೇಧಿಸಿದ ಬಳಿಕ ಬಂದ ಚಿಂಗಾರಿ ಆ್ಯಪ್ ದೊಡ್ಡ ಹಿಟ್ ಆಗಿದ್ದು ನಿಮಗೆಲ್ಲರಿಗೂ ತಿಳಿದ ಸಂಗತಿಯೇ. ಇದೀಗ ಈ ಅಪ್ಲಿಕೇಶನ್‌ಗೆ ಸರ್ಕಾರವು ಆಪ್ ಇನ್ನೋವೇಶನ್ ಚಾಲೆಂಜ್ ಸ್ಪರ್ಧೆಯ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನೀಡಿದೆ. ಈ ಆ್ಯಪ್‌ನ ಡೆವಲಪರ್‌ಗಳಿಗೆ ಸರ್ಕಾರವು 20 ಲಕ್ಷ ರೂಪಾಯಿಗಳನ್ನು ನೀಡಲಿದೆ. ಆತ್ಮನಿರ್ಭರ್ ಭಾರತ್ ಆಪ್ ಇನ್ನೋವೇಟ್ ಚಾಲೆಂಜ್ ಅಡಿಯಲ್ಲಿ ಭಾರತೀಯ ಉದ್ಯಮಿಗಳು ಅಭಿವೃದ್ಧಿಪಡಿಸಿದ 24 ಉತ್ತಮ ಮೊಬೈಲ್ ಆ್ಯಪ್‌ಗಳ ವಿಜೇತರನ್ನು ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಡೆವಲಪರ್ ಗಳಿಗೆ ಪ್ರೋತ್ಸಾಹನ ನೀಡುವುದು ಸರ್ಕಾರದ ಉದ್ದೇಶ
ಭಾರತೀಯ ಆಪ್ ಅಭಿವೃದ್ಧಿ ಪಡಿಸುವವರಿಗೆ ಮತ್ತು ಭಾರತೀಯ ಆಪ್ ಗಳಿಗೆ ಪ್ರೋತ್ಸಾಹನ ನೀಡುವದು ಈ ಚಾಲೆಂಜ್ ನ ಉದ್ದೇಶವಾಗಿದೆ. ಜೊತೆಗೆ ವಿವಿಧ ವೈಶಿಷ್ಟ್ಯಗಳುಳ್ಳ ಆಪ್ ತಯಾರಿಕೆ ಕೂಡ ಇದು ಒಳಗೊಂಡಿದೆ. ಆಪ್ ಅಭಿವೃದ್ಧಿಗಾಗಿ ಆರಂಭಿಸಲಾಗಿರುವ ಈ ಚಾಲೆಂಜ್ ನ ಟಾಪ್ 3 ಪಟ್ಟಿಯಲ್ಲಿ 'ಚಿಂಗಾರಿ' ಸ್ಥಾನ ಪಡೆದಿದೆ. ದೇಶದಲ್ಲಿ TikTok ಬ್ಯಾನ್ ಆದ ಬಳಿಕ ಅಂತಹುದೇ ವೈಶಿಷ್ಟ್ಯಗಳನ್ನು ನೀಡುವ ಈ ದೇಸಿ ಆಪ್ ಟಾಪ್ ಚಾರ್ಟರ್ಸ್ ನಲ್ಲಿ ತಲುಪಿ, ಭಾರಿ ವೈರಲ್ ಆಗಿತ್ತು.
MyGov ಮೇಲೆ ಆರಂಭಗೊಂಡಿತ್ತು ಈ ಸ್ಪರ್ಧೆ
ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಜುಲೈ 4 ರಂದು ಸೆಲ್ಫ್ ರಿಲಯಂಟ್ ಇಂಡಿಯಾ ಇನ್ನೋವೇಶನ್ ಚಾಲೆಂಜ್ ಅನ್ನು ಪ್ರಾರಂಭಿಸಿದ್ದರು. ವಿದೇಶಿ ಆಪ್ ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಸ್ಪರ್ಧೆಯನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದರು. ಇದನ್ನು ಸರ್ಕಾರದ ಇನ್ನೋವೇಟಿವ್ ಪೋರ್ಟಲ್ 'MyGov'ನಲ್ಲಿ ಆರಂಭಿಸಲಾಗಿತ್ತು ಒಟ್ಟು ಎಂಟು ವಿಭಾಗಗಳಲ್ಲಿ ಸುಮಾರು 2,353 ರಿಜಿಸ್ಟ್ರೇಶನ್ ಸ್ವೀಕರಿಸಲಾಗಿತ್ತು
ಯಾವ ವಿಭಾಗದಲ್ಲಿ ಯಾವ ಆಪ್ ಟಾಪ್
ಸಾಮಾಜಿಕ ಮಾಧ್ಯಮ-ಚಿಂಗಾರಿ,
ಮನರಂಜನೆ -ಕ್ಯಾಪ್ಶನ್ ಪ್ಲಸ್
ಸುದ್ದಿ ವಿಭಾಗ - ಫೇಕ್ ನ್ಯೂಸ್ ತನಿಖೆ ನಡೆಸುವ 'ಲಾಜಿಕಲ್'
ಆಟೋಟ- ಹಿಟ್ ವಿಕೆಟ್
ಆರೋಗ್ಯ-ಸ್ಟೆಪ್ ಸೆಟ್ ಗೋ
ಇ-ಲರ್ನಿಂಗ್-ಡಿಸ್ಪೆರ್ಸ್
ಬಿಸಿನೆಸ್-ಜೋಹೋ ಇನ್ವೈಸ್ ಹಾಗೂ ಬುಕ್ಸ್ ಅಂಡ್ ಎಕ್ಷ್ಪೆನ್ಸ
ಆಫೀಸ್- ಜೋಹೋ ವರ್ಕ್ ಪ್ಲಸ್ ಹಾಗೂ ಕ್ಲಿಕ್
ಇತರೆ-ಮ್ಯಾಪ್ ಮೈ ಇಂಡಿಯಾ ಆಪ್ ಗಳನ್ನು ವಿಜೇತರೆಂದು ಘೋಷಣೆ ಮಾಡಲಾಗಿದೆ.
ಬಹುಮಾನ ಎಷ್ಟು?
ಪ್ರತ್ಯೇಕ ವಿಭಾಗದಲ್ಲಿ ನಂ.1 ಸ್ಥಾನಕ್ಕೆ 20 ಲಕ್ಷ ರೂ. ಹಾಗೂ 2 ಹಾಗೂ 3ನೇ ಸ್ಥಾನ ಪಡೆದವರಿಗೆ ಕ್ರಮೇಣವಾಗಿ 15 ಮತ್ತು 10 ಲಕ್ಷ ರೂ. ನೀಡಲಾಗುತ್ತಿದೆ.