ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಮೇಘಸ್ಫೋಟ: ಮಕ್ಕಳು ಸೇರಿ ನಾಲ್ವರ ಸಾವು, ಓರ್ವ ನಾಪತ್ತೆ

ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದ ಡಂಗಿವಾಚಾದ ಎತ್ತರದ ಪ್ರದೇಶದಲ್ಲಿ ಶನಿವಾರ ರಾತ್ರಿ ಮೇಘಸ್ಫೋಟ (Cloud burst) ಸಂಭವಿಸಿತ್ತು.

Written by - Puttaraj K Alur | Last Updated : Sep 12, 2021, 05:23 PM IST
  • ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಭೀಕರ ಮೇಘಸ್ಫೋಟ
  • ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವು, ಓರ್ವ ನಾಪತ್ತೆ
  • ನಾಪತ್ತೆಯಾದವರ ಪತ್ತೆಗಾಗಿ ಭದ್ರತಾ ಸಿಬ್ಬಂದಿಯಿಂದ ವ್ಯಾಪಕ ಶೋಧ
ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಮೇಘಸ್ಫೋಟ: ಮಕ್ಕಳು ಸೇರಿ ನಾಲ್ವರ ಸಾವು, ಓರ್ವ ನಾಪತ್ತೆ title=
ಬಾರಾಮುಲ್ಲಾದಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದೆ (Photo Courtesy: @Zee News)

ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ (Cloud burst) ಒಂದೇ ಕುಟುಂಬದ ನಾಲ್ಕು ಜನರು ಮೃತಪಟ್ಟಿದ್ದಾರೆ. ಘಟನೆಯ ನಂತರ ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮೃತಪಟ್ಟವರಲ್ಲಿ ಮೂವರು ಅಪ್ರಾಪ್ತರಾಗಿದ್ದರು ಎಂದು ಅಧಿಕಾರಿಗಳು  ಮಾಹಿತಿ ನೀಡಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾ (baramulla) ಜಿಲ್ಲೆಯ ಸೋಪೋರ್ ಪ್ರದೇಶದ ಡಂಗಿವಾಚಾದ ಎತ್ತರದ ಪ್ರದೇಶದಲ್ಲಿ ಶನಿವಾರ ರಾತ್ರಿ ಮೇಘಸ್ಫೋಟ (Cloud burst) ಸಂಭವಿಸಿತ್ತು. ಇದರಲ್ಲಿ ಮೃತಪಟ್ಟವರು  ಅಲೆಮಾರಿ ಸಮುದಾಯಕ್ಕೆ ಸೇರಿದವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ನವೆಂಬರ್ ನಲ್ಲಿ ಮದುವೆಯಾಗುವುದಕ್ಕೆ ಜನ ಹಿಂದೇಟು ಹಾಕುವುದಕ್ಕೆ ಇದೇ ಕಾರಣ..!

ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು (Police) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ನಾಲ್ಕು  ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರನ್ನು ಮೊಹಮ್ಮದ್ ತಾರಿಖ್ ಖಾರಿ (8), ಶಹನಾಜ್ ಬೇಗಂ (30), ನಾಜಿಯಾ ಅಖ್ತರ್ (14) ಮತ್ತು ಆರಿಫ್ ಹುಸೇನ್ ಖಾರಿ (5) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : EPF Withdrawal Claim: ಈ 5 ಕಾರಣಗಳಿಂದಾಗಿ ನಿಮ್ಮ EPF ಕ್ಲೇಮ್ ಅನ್ನು ತಿರಸ್ಕರಿಸಬಹುದು, ಇಲ್ಲಿದೆ ಫುಲ್ ಡೀಟೇಲ್ಸ್

ಇವರೆಲ್ಲರೂ ಜಮ್ಮುವಿನ ರಾಜೌರಿಯಲ್ಲಿರುವ (Rajouri) ಕಲ್ಸಿಯನ್ ನೌಶೇರಾ ನಿವಾಸಿಗಳು ಎಂದು ತಿಳಿದುಬಂದಿದೆ. ಕುಟುಂಬದ ಇನ್ನೊಬ್ಬ ಸದಸ್ಯ ಮೊಹಮ್ಮದ್ ಬಶೀರ್ ಖಾರಿ (80) ಇನ್ನೂ ಪತ್ತೆಯಾಗಿಲ್ಲವೆಂದು ತಿಳಿದುಬಂದಿದೆ. ನಾಪತ್ತೆಯಾಗಿರುವ  ಮೊಹಮ್ಮದ್ ಬಶೀರ್ ಖಾರಿ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News