ಸಿಎಂ ಕುಮಾರಸ್ವಾಮಿ-ಪ್ರಧಾನಿ ಮೋದಿ ಭೇಟಿ ಸಮಯ ವ್ಯರ್ಥ: ತಮಿಳುನಾಡು ಸಚಿವ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸಿಎಂ ಕುಮಾರಸ್ವಾಮಿ-ಪ್ರಧಾನಿ ಮೋದಿ ಭೇಟಿ ಸಮಯ ವ್ಯರ್ಥ ಎಂದು ತಮಿಳುನಾಡು ಸಚಿವ ಡಿ.ಜಯಕುಮಾರ್ ಹೇಳಿದ್ದಾರೆ.

Last Updated : Jun 19, 2018, 03:22 PM IST
ಸಿಎಂ ಕುಮಾರಸ್ವಾಮಿ-ಪ್ರಧಾನಿ ಮೋದಿ ಭೇಟಿ ಸಮಯ ವ್ಯರ್ಥ: ತಮಿಳುನಾಡು ಸಚಿವ title=
Pic : ANI

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿರುವುದು ಸಮಯ ವ್ಯರ್ಥ ಮಾಡಿದಂತೆ ಎಂದು ತಮಿಳುನಾಡು ಸಚಿವ ಡಿ.ಜಯಕುಮಾರ್ ವ್ಯಂಗ್ಯ ಮಾಡಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ವಿಚಾರವಾಗಿ ಪ್ರಧಾನಿ ಭೇಟಿ ಮಾಡಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದೆ. ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವುದು ಸಮಯ ವ್ಯರ್ಥ ಅಷ್ಟೇ. ಅದು, ಕುಮಾರಸ್ವಾಮಿ ಆಗಿರಲಿ, ನಾರಾಯಣ ಸ್ವಾಮಿ ಆಗಿರಲಿ ಅಥವಾ ಇನಾವುದೇ ಸ್ವಾಮಿ ಆಗಿರಲಿ, ನಮ್ಮಲ್ಲಿ ಕಾವೇರಿ ನಿರ್ವಹಣಾ ಮಂಡಳಿಯಿದ್ದು, ಆ ಮಂಡಳಿಯೇ ಮುಖ್ಯ ಸ್ವಾಮಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಲು ಪ್ರಧಾನಿಗೆ ಸಿಎಂ ಕುಮಾರಸ್ವಾಮಿ ಮನವಿ

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರವಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಮತ್ತು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಕಾವೇರಿ ಕೊಳ್ಳದ ರಾಜ್ಯದ ಜಲಾಶಯಗಳಲ್ಲಿ ಪ್ರತಿ 10 ದಿನಕ್ಕೊಮ್ಮೆ ನೀರಿನ ಅಳತೆ ಮಾಡಿ ತಮಿಳುನಾಡಿಗೆ ನೀರು ಹರಿಸುವ ಮತ್ತು ರಾಜ್ಯದಲ್ಲಿ ಯಾವ ಬೆಳೆ ತೆಗೆಯಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಪ್ರಾಧಿಕಾರ ಹೊಂದಿರುತ್ತದೆ ಎಂಬ ಎರಡು ಮಾರ್ಗಸೂಚಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ, ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಗೆಜೆಟ್‌ ಅಧಿಸೂಚನೆಯಲ್ಲಿ ಇರುವ ಅವೈಜ್ಞಾನಿಕ ಮಾರ್ಗಸೂಚಿಗಳನ್ನು ಪ್ರಧಾನಿಗಳ ಗಮನಕ್ಕೆ ತಂದಿದ್ದರು.

Trending News